ಅಭಿಮಾನಿಗಳು, ಸ್ನೇಹಿತರ ಬಳಗದಿಂದ ಆರ್ಯ ಶ್ರೀನಿವಾಸ್ ಹುಟ್ಟುಹಬ್ಬದ ಅಚರಣೆ

ತಲಘಟ್ಟಪುರ: ಹೆಮ್ಮಿಗೇಪುರ ವಾರ್ಡ್ ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಆರ್ಯ ಶ್ರೀನಿವಾಸ್ ರವರು ಹುಟ್ಟುಹಬ್ಬವನ್ನು ಅಭಿಮಾನಿಗಳು, ಸ್ನೇಹಿತರು ಶ್ರೀ ಮೂಕಾಂಬಿಕಾ ಎಂಟರ್ ಪ್ರೈಸಸ್ ಜನಸಂಪರ್ಕ ಕಛೇರಿ ಅವರಣದಲ್ಲಿ ಅದ್ದೂರಿಯಾಗಿ ಅಚರಿಸಿದರು.

ಮಾಜಿ ಸಚಿವರು, ಶಾಸಕರಾದ ಎಸ್.ಟಿ.ಸೋಮಶೇಖರ್ ರವರು ಆಗಮಿಸಿ ಆರ್ಯ ಶ್ರೀನಿವಾಸ್ ರವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು.

ಶ್ರೀಮತಿ ಸಿಂಧೂ ಆರ್ಯ ಶ್ರೀನಿವಾಸ್, ಹನುಮಂತೇಗೌಡರು ಉಪಸ್ಥಿತರಿದ್ದರು.

ನಂತರ ಕೇಕ್ ಕತ್ತರಿಸಿ , ಎಲ್ಲರಿಗೂ ಸಿಹಿ ವಿತರಿಸಿದರು.

ಯಶವಂತಪುರ ವಿಧಾನಸಭಾ ಕ್ಷೇತ್ರದ ಪ್ರಮುಖ ರಾಜಕೀಯ ಮುಖಂಡರು, ಸಾರ್ವಜನಿಕರು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ಆರ್ಯ ಶ್ರೀನಿವಾಸ್ ರವರು ಮಾತನಾಡಿ ಸಮಾಜ ಸೇವೆ ಮತ್ತು ರಾಜಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಲು ನನ್ನ ಗುರುಗಳಾದ ಶಾಸಕರಾದ ಎಸ್.ಟಿ.ಸೋಮಶೇಖರ್ ರವರು ಕಾರಣ.

ಹೆಮ್ಮಿಗೇಪುರ ವಾರ್ಡ್ ನಿಂದ ಬಿಬಿಎಂಪಿ ಸದಸ್ಯನಾಗಿ ವಾರ್ಡ್ ಸಮಗ್ರ ಅಭಿವೃದ್ದಿ ಹಗಲಿರುಳು ಶ್ರಮಿಸಿದ್ದೇನೆ.

ಸಾರ್ವಜನಿಕರು ನನಗೆ ಸಹಕಾರ, ಬೆಂಬಲ ಮತ್ತು ಸದಾ ಸಲಹೆ ನೀಡುತ್ತಾ ಅಭಿವೃದ್ದಿ ಕೆಲಸಗಳಿಗೆ ಕೈಜೋಡಿಸಿ ಕಾರಣದಿಂದ ಅಭಿವೃದ್ದಿಯ ಸಾಧನೆ ಮಾಡಲು ಸಾಧ್ಯವಾಯಿತು.

Leave a Reply

Your email address will not be published. Required fields are marked *