ನರೇಂದ್ರ ಮೋದಿ ಬೆಂಗಳೂರು ಭೇಟಿ ಕುರಿತು ಪೂರ್ವಭಾವಿ ಸಭೆ
ನಾಳೆ ದೇಶದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಬೆಂಗಳೂರಿಗೆ ಇಸ್ರೋ ವಿಜ್ಞಾನಿಗಳನ್ನು ಭೇಟಿ ಮಾಡಲು ಬರುತ್ತಿದ್ದು, ಹೀಗಾಗಿ ಆ ಕಾರ್ಯಕ್ರಮದ ಯಶಸ್ಸಿಗೆ ಪೂರ್ವಭಾವಿ ಸಭೆಯನ್ನು ಇಂದು ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಶಾಸಕರ ಕಚೇರಿಯಲ್ಲಿ ಎಲ್ಲ ಮೋರ್ಚಾ ಗಳ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ಕರೆಯಲಾಗಿತ್ತು.

ಈ ವಿಶೇಷ ಸಭೆಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಗಳು ಹಾಗೂ ಕರ್ನಾಟಕ ಬಿಜೆಪಿ ಪಕ್ಷದ ಉಸ್ತುವಾರಿ ಗಳಾದ ಅರುಣ್ ಸಿಂಗ್ ಅವರು ಭಾಗವಹಿಸಿ ನಾಳೆಯ ಪ್ರಧಾನಿಮಂತ್ರಿ ಗಳ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಸಚಿವರು ಹಾಗೂ ಸ್ಥಳೀಯ ಶಾಸಕರಾದ ಕೆ ಗೋಪಾಲಯ್ಯ ರವರು, ರಾಜ್ಯ ಬಿಜೆಪಿ ಒಬಿಸಿ ಅಧ್ಯಕ್ಷ ರಾದ ನರೇಂದ್ರ ಬಾಬು,ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಬಿಬಿಎಂಪಿ ಮಾಜಿ ಉಪ ಮಹಾಪೌರರಾದ ಎಸ್ ಹರೀಶ್, ಮಂಡಲ ಅಧ್ಯಕ್ಷರಾದ ರಾಘವೇಂದ್ರ ಶೆಟ್ಟಿ ಮುಖಂಡರುಗಳಾದ ಜಯರಾಂ, ಶ್ರೀನಿವಾಸ್ , ಬಿಬಿಎಂಪಿ ಸದಸ್ಯರಾದ ಎಂ ಮಹದೇವ್, ಚೀಕ್ಕೆಗೌಡ್ರು, ಶಿವಾನಂದ್ ಮೂರ್ತಿ ,ನಿಸರ್ಗ ಜಗದೀಶ್, ಜಯಸಿಂಹ , ರಘು ನಾಗರಾಜ್ , ಪ್ರಸನ್ನ ಸಾಯಿರೆಡ್ಡಿ, ಅವೀನ್ ಆರಾಧ್ಯ ಡಿ, ನಾಗೇಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.