ಬರೋಬ್ಬರಿ ನಲವತ್ತು ವರ್ಷದ ಬಳಿಕ ವಿದ್ಯುತ್ ಬೆಳಕನ್ನು ಕಂಡ ವಯೋ ವೃದ್ಧೆ ದೊಣಮ್ಮ
ಇತ್ತಿಚೆಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದು, ಪ್ರತಿಯೊಬ್ಬ ಮನೆಗೂ ಉಚಿತ ವಿದ್ಯುತ್ ನೀಡಲು ಕಾರ್ಯಕ್ರಮ ರೂಪಿಸಿ ಯೋಜನೆಗೆ ಚಾಲು ಮಾಡಿತ್ತು. ಇಂತಹ ಸಂದರ್ಭದಲ್ಲಿ ಚಳ್ಳಕೆರೆ ತಾಲ್ಲೂಕಿನ 35 ಕಿಮೀ ದೂರದ ಆಂಧ್ರದ ಗಡಿ ಪ್ರದೇಶದಲ್ಲಿದೆ.
ಬಸಾಪುರ ಗ್ರಾಮದ ದೊಣಮ್ಮ ಎಂಬ ವೃದ್ಧ ಮಹಿಳೆ ಬಡತನದ ಕಾರಣದಿಂದ ವಿದ್ಯುತ್ ಸಂಪರ್ಕ ಪಡೆಯಲು ಹಣವಿಲ್ಲದೆ ಸುಮಾರು 40 ವರ್ಷಗಳಿಂದ ದೀಪದ ಆಸರೆಯಲ್ಲಿ ಬದುಕು ಸಾಗಿಸುತ್ತಿದ್ದ ಸಂಕಷ್ಟ ತಿಳಿದ ಸ್ಥಳೀಯರಾದ ಮಹೇಂದ್ರ ವೃದ್ಧೆ ಮನೆಯ ಫೋಟೋವನ್ನು ಮುಖ್ಯಮಂತ್ರಿ ಕಚೇರಿ ಟ್ವೀಟ್(ಎಕ್ಸ್ ) ಮಾಡುವ ಮೂಲಕ ಗಮನಕ್ಕೆ ತಂದಿದ್ದು.


ಇನ್ನು ಟ್ವೀಟ್ ಮಾಡಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕಛೇರಿಯಿಂದ ಕೂಡಲೆ ಅಜ್ಜಿ ಮನೆಗೆ ವಿದ್ಯುತ್ ಸಂಪರ್ಕ ನೀಡುವಂತೆ ಚಿತ್ರದುರ್ಗ ಜಿಲ್ಲಾಡಳಿತವನ್ನು ಆದೇಶ ರವಾನಿಸಿದು .ಜಿಲ್ಲಾಧಿಕಾರಿ ದಿವ್ಯಾಪ್ರಭು, ಸಮಾಜ ಕಲ್ಯಾಣ ಇಲಾಖೆ ಹಾಗೂ ಬೆಸ್ಕಾಂ ಅಧಿಕಾರಿಗೆ ಸೂಚನೆ ನೀಡಿದ್ದು, ತಕ್ಷಣ ಸಂಬಂಧಿಸಿದವರು ಆ.25 ಶುಕ್ರವಾರ ಗ್ರಾಮಕ್ಕೆ ದೌಡಾಯಿಸಿ ವೃದ್ಧೆಯ ಮನೆಗೆ ವಿದ್ಯುತ್ ಸಂಪರ್ಕದ ಜತೆಗೆ ಮನೆಯಲ್ಲಿ ಸಂಪೂರ್ಣ ವೈರಿಂಗ್ ಅನ್ನು ಇಲಾಖೆ ವೆಚ್ಚದಲ್ಲಿ ಮಾಡುವ ಮೂಲಕ ಮನೆಗೆ ಬೆಳಕು ಕಲ್ಪಿಸಿದ್ದಾರೆ.
ಆದ್ರೆ ಇದೀಗ ರಾಜ್ಯದ ಮುಖ್ಯಮಂತ್ರಿ ಟ್ವಿಟ್ ಮೂಲಕ ಅಜ್ಜಿಯ ಸಮಸ್ಯೆ ಗಮನ ಸೆಳೆದಿದ್ದರಿಂದ ವೃದ್ಧೆಯ ನಲವತ್ತು ವರ್ಷಗಳ ಕನಸು ಈಡೇರಿದೆ. ಮನೆಗೆ ಬೆಳಕು ಸಿಕ್ಕಿದ ಖುಷಿಯಲ್ಲಿದ್ದಾರೆ ದೋಣಿಯಮ್ಮ ಯುವಕ ಮಹೇಂದ್ರ
ವಿದ್ಯುತ್ ಸಂಪರ್ಕ ಕಲ್ಪಿಸಲು ಸಹಕರಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸೇರಿದಂತೆ ವಿವಿಧ ಇಲಾಖೆಗಳಿಗೆ ಮತ್ತು ಧನ್ಯವಾದಗಳನ್ನು ತಿಳಿಸಿದ್ದಾರೆ.
ಮುಖ್ಯಮಂತ್ರಿ ಟ್ವೀಟ್(ಎಕ್ಸ್ ) ಸಂತಸ
ವಿದ್ಯುತ್ ಸಂಪರ್ಕ ಕಲ್ಪಿಸುತ್ತಿರುವ ಚಿತ್ರಣಗಳನ್ನು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಭ್ರಮದಿಂದ ತಮ್ಮ ಟ್ವೀಟರ್ ಖಾತೆಯಲ್ಲಿ ಶನಿವಾರ ಹಂಚಿಕೊಂಡಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬಸಾಪುರ ಗ್ರಾಮದ ದೊಣಮ್ಮ ಎಂಬ ವೃದ್ಧ ಮಹಿಳೆ ಬಡತನದ ಕಾರಣಕ್ಕೆ ವಿದ್ಯುತ್ ಸಂಪರ್ಕ ಪಡೆಯದೆ ದೀಪದ ಆಸರೆಯಲ್ಲಿ ಬದುಕು ಸಾಗಿಸುತ್ತಿದ್ದ ವಿಚಾರ ಸ್ಥಳೀಯರಾದ ಮಹೇಂದ್ರ ಅವರು ನಮ್ಮ ಕಚೇರಿಯ ಗಮನಕ್ಕೆ ಬಂದ ತಕ್ಷಣ ಸ್ಪಂದಿಸಿ, ಕೇವಲ 24 ಗಂಟೆಗಳ ಒಳಗೆ ಅವರ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದೇವೆ.
ಬದಲಾವಣೆ ಮೂಡಿಸಲು ನಾವು ಸಿದ್ಧರಿದ್ದೇವೆ. ನಮ್ಮ ಈ ಕಾರ್ಯಕ್ಕೆ ನಿಮ್ಮ ಸಹಕಾರವೂ ಇರಲಿ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.