*ವೇದ ವಿಜ್ಞಾನಿಯ ಕರಕಮಲ ಸಂಜಾತರಿಂದ ತತ್ವ ಜ್ಞಾನಿಯ ಆರಾಧನೆಯ ಉದ್ಘಾಟನೆ.*
ಕೋಣನಕುಂಟೆಯ ರಾಯರ ಮಠದಲ್ಲಿ ಶ್ರೀ ರಾಘವೇಂದ್ರ ಗುರುಸಾರ್ವಭೌಮರ 352ನೇಯ ಆರಾಧನೆದೇವರೆಂದರೆ ತಿರುಪತಿ ತಿಮ್ಮಪ್ಪ ಗುರುಗಳೆಂದರೆ ಮಂಚಾಲೆ ರಾಘಪ್ಪ ಎಂಬುದು ಪ್ರಸಿದ್ಧವಾದ ಮಾತು. ಶ್ರಾವಣ ಮಾಸ ಮಂಚಾಲೆ ರಾಘಪ್ಪ ಮತ್ತು ತಿರುಪತಿ ತಿಮ್ಮಪ್ಪ ಇಬ್ಬರನ್ನೂ ನೆನೆಯುವ ಸ್ಮರಿಸುವ ಅನುಗ್ರಹ ಪಡೆಯುವ ಶುಭ ಮಾಸ.ದಿನಾಂಕ 28.8.23 ರಿಂದ 4.9.23ರ ವರೆಗೆ ವಿಶ್ವದಾದ್ಯಂತ ರಾಯರ ಭಕ್ತರು ಇರುವ ಸ್ಥಳಗಳಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆಯನ್ನು ಶ್ರದ್ಧಾ ಭಕ್ತಿಗಳಿಂದ ಆಚರಿಸುತ್ತಿದ್ದಾರೆ.
ಬೆಂಗಳೂರಿನ ದಕ್ಷಿಣ ಭಾಗದ ಕೋಣನಕುಂಟೆಯ ರಾಯರ ಮಠದಲ್ಲಿ ಶ್ರೀ ರಾಘವೇಂದ್ರ ಗುರುಸಾರ್ವಭೌಮರ 352ನೇಯ ಆರಾಧನೆಯನ್ನು ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಆಚರಿಸುತ್ತಿದ್ದಾರೆ .ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ಆರಾಧನೆ ಕೋಣನ ಕುಂಟೆ ಪ್ರಾಂತ್ಯದಲ್ಲಿ ನಡೆಯುವ ಪ್ರಮುಖ ಉತ್ಸವಗಳಲ್ಲಿ ಒಂದು , ಅನೇಕ ಮಂದಿ ರಾಯರ ಭಕ್ತರು ಆರಾಧನೆಯ ಸಮಯದಲ್ಲಿ ಶ್ರೀಮಠಕ್ಕೆ ಬಂದು ರಾಯರ ದರ್ಶನ, ಅನುಗ್ರಹ ಮಂತ್ರಾಕ್ಷತೆ ಸ್ವೀಕರಿಸಿ ಕೃತಾರ್ಥರಾಗುತ್ತಿದ್ದಾರೆ ಹಾಗು ರಾಯರ ಆರಾಧನೆಯ ಪರ್ವ ಕಾಲದಲ್ಲಿ ಉತ್ಸವ ರಾಯರನ್ನು ಕೋಣನ ಕುಂಟೆಯ ಕ್ಷೇತ್ರ ಸ್ವಾಮಿಯಾದ ಶ್ರೀ ಶ್ರೀನಿಧಿ ಶ್ರೀನಿವಾಸ ದೇವಸ್ಥಾನಕ್ಕೆ ಹಾಗು ಗ್ರಾಮ ದೇವತೆಯಾದ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ಪಲ್ಲಕ್ಕಿ ಉತ್ಸವದ ಮೂಲಕ ರಾಯರಿಗೆ ಶ್ರೀ ಶ್ರೀನಿಧಿ ಶ್ರೀನಿವಾಸನ ಹಾಗು ರೇಣುಕಾ ಯಲ್ಲಮ್ಮನ ದರ್ಶನ ಮಾಡಿಸುವ ಸಂಪ್ರದಾಯವನ್ನು ಅನೂಚಾನವಾಗಿ ಪಾಲಿಸಿಕೊಂಡು ಬರುತ್ತಿದ್ದೇವೆ , ಈ ಬಾರಿಯೂ ದಿನಾಂಕ 1.9.23 ಶುಕ್ರವಾರ ಶ್ರೀ ರಾಘವೇಂದ್ರ ಸ್ವಾಮಿಗಳ ಮಧ್ಯ ಆರಾಧನೆಯ ಶುಭ ದಿವಸದಂದು ಬೆಳಗ್ಗೆ 9 ಗಂಟೆಗೆ ರಾಯರ ಪಲ್ಲಕ್ಕಿ ಉತ್ಸವವನ್ನು ವಿಜೃಂಭಣೆ ಯಿಂದ, ಸಾಂಪ್ರದಾಯಿಕವಾಗಿ ಆಚರಿಸಲಾಗುವುದು ಎಂದು ಶ್ರೀ ಗುರು ರಾಘವೇಂದ್ರ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಡಾ. ಅನಂತ ಪದ್ಮನಾಭ ರಾವ್ ಅವರು ತಿಳಿಸಿದ್ದಾರೆದಿನಾಂಕ 30.8.23 ಬುಧವಾರ ಆರಾಧನೆಯ ನಿಮಿತ್ತ ಸಂಜೆ 5 ಗಂಟೆಗೆ ಧಾನ್ಯ ಪೂಜೆ, ಗೋಪೂಜೆ, ಚಪ್ಪರ ಪೂಜೆ, ಕಾರ್ಯಕ್ರಮಗಳು ನಡೆಯಲಿವೆ.
ಸಭಾ ಕಾರ್ಯಕ್ರಮದಲ್ಲಿ ಜಗದ್ಗುರು ಶ್ರೀ ಮನ್ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಮುಳಬಾಗಿಲು ಶ್ರೀ ಶ್ರೀಪಾದರಾಜ ಮಠದ ಪ್ರಸ್ತುತ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಶ್ರೀ 1008 ಶ್ರೀ ಸುಜಯನಿಧಿ ತೀರ್ಥರು ಉತ್ಸವ ರಾಯರಿಗೆ ಕೋಣನಕುಂಟೆಯ ಕ್ಷೇತ್ರ ಸ್ವಾಮಿಯಾದ ಶ್ರೀನಿಧಿ ಶ್ರೀನಿವಾಸನ ಶೇಷ ವಸ್ತ್ರವನ್ನು ಸಮರ್ಪಣೆ ಮಾಡುವ ಮೂಲಕ ಹಾಗು ದ್ವಜಾರೋಹಣದ ಮೂಲಕ 352ನೇಯ ಆರಾಧನಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಲಿದ್ದಾರೆ ಎಂದು ಗುರು ರಾಘವೇಂದ್ರ ಸೇವಾ ಟ್ರಸ್ಟ್ ನ ಖಜಾಂಚಿ ಶ್ರೀಯುತ ವಿ.ಆರ್ ಹರಿ ಅವರು ಮಾಹಿತಿ ನೀಡಿದ್ದಾರೆ.
ಆರಾಧನೆಯ ಮೂರು ದಿವಸ ಬೆಳಗ್ಗೆ ಕೊಣನಕುಂಟೆಯ ಶ್ರೀ ಸತ್ಯನಾಥ ವಿದ್ಯಾ ಪೀಠದ ವಿದ್ಯಾರ್ಥಿಗಳು ಹಾಗೂ ಅನೇಕ ವಿದ್ವಾಂಸರಿಂದ ವಿದ್ವತ್ ಸಬೆಯನ್ನು ಏರ್ಪಡಿಸಲಾಗಿದೆ, ಶ್ರೀ ರಾಘವೇಂದ್ರ ಸ್ವಾಮಿಗಳ ಮೂಲ ಮೃತ್ತಿಕಾ ಬೃಂದಾವನಕೆ ವಿಶೇಷ ಫಲ ಪಂಚಾಮೃತ ಅಭಿಷೇಕ, ಪ್ರತಿನಿತ್ಯ ವಿನೂತನ ವಿಶೇಷ ಅಲಂಕಾರ ಹಾಗು ಉತ್ಸವ ರಾಯರಿಗೆ ಕನಕಾಭಿಷೇಕ ರಜತ ರಥೋತ್ಸವ , ರಜತ ಪಲ್ಲಕ್ಕಿ ಸೇವೆ, ಗಜ ವಾಹನ ಉತ್ಸವ ಮುಂತಾದ ಸೇವೆಗಳು ನಡೆಯುತ್ತವೆ ಎಂದು ಟ್ರಸ್ಟ್ ನ ಕಾರ್ಯದರ್ಶಿಗಳಾದ ಶ್ರೀಯುತ ಪಿ. ಎನ್. ಫಣಿ ಕುಮಾರ್ ಅವರು ತಿಳಿಸಿದ್ದಾರೆ.ಆರಾಧನೆಯ ಮೂರು ದಿವಸ ಸಂಜೆ ನಾಡಿನ ಸುಪ್ರಸಿದ್ದ ಗಾಯಕರಿಂದ ಸಂಗೀತ ಕಾರ್ಯಕ್ರಮ ವಿರುತ್ತದೆ ದಿನಾಂಕ 31.8.23 ಗುರುವಾರ ಸಂಜೆ ಕೊಣನಕುಂಟೆ ಸಹೋದರರಾದ ಶ್ರೀಯುತ ಪ್ರವೀಣ್ ಪ್ರದೀಪ್ ಸಹೋದರರಿಂದ ಸಂಗೀತ ಸೇವೆ, ದಿನಾಂಕ 1.9.23 ಶುಕ್ರವಾರ ಮೈಸೂರಿನ ಶ್ರೀಮತಿ ಅಶ್ವಿನಿ ಮತ್ತು ಸಂಗಡಿಗರಿಂದ ದಾಸವಾಣಿ ಕಾರ್ಯಕ್ರಮ ಹಾಗೂ ದಿನಾಂಕ 2.9.23 ಶನಿವಾರ ರುದ್ರ ಪಟ್ಟಣದ ಸುಪ್ರಸಿದ್ದ ಗಾಯಕರುಗಳಾದ ಶ್ರೀಯುತ ಆರ್. ಕೆ.ಪ್ರಸನ್ನ ಕುಮಾರ್ ಹಾಗೂ ಆರ್.ಪಿ. ಪ್ರಶಾಂತ್ ಸಂಗಡಿಗರಿಂದ ಯುಗಳ ಗಾಯನ ಕಾರ್ಯಕ್ರಮಗಳ ಮೂಲಕ ರಾಯರಿಗೆ ಸಂಗೀತ ಸೇವೆಯನ್ನೂ ಸಲ್ಲಿಸುತ್ತಿದ್ದಾರೆ ಎಂದು ಶ್ರೀ ಗುರು ರಾಘವೇಂದ್ರ ಸೇವಾ ಟ್ರಸ್ಟ್ ನ ಪದಾಧಿಕಾರಿಗಳಾದ ಶ್ರೀಯುತ ಕೆ. ರಾಘವೇಂದ್ರ ಅವರು ಮಾಹಿತಿ ನೀಡಿರುತ್ತಾರೆ.ರಾಯರ ಆರಾಧನೆಯ ಸರ್ವಸಮರ್ಪಣೆಯನ್ನು ದಿನಾಂಕ 3.8.23 ಭಾನುವಾರ ದಂದು ಲೋಕ ಕಲ್ಯಾಣಕ್ಕಾಗಿ ಪರ್ಜನ್ಯ ಮಹಾಯಾಗವನ್ನು ಏರ್ಪಡಿಸಲಾಗಿದೆ ಹಾಗು ಕೋಣನಕುಂಟೆಯ ಕ್ಷೇತ್ರ ಸ್ವಾಮಿಯಾದ ಶ್ರೀ ಶ್ರೀನಿಧಿ ಶ್ರೀನಿವಾಸ ದೇವರ ಶ್ರಾವಣ ಶನಿವಾರ ಪ್ರಸಾದಕ್ಕೆ ಶ್ರೀಮಠದಿಂದ ದವಸ ಧಾನ್ಯಗಳ ಸಮರ್ಪಣೆ ಮೂಲಕ ಸರ್ವ ಸಮರ್ಪಣೆ ಉತ್ಸವವನ್ನು ಆಚರಿಸಲಾಗುವುದು ಎಂದು ಟ್ರಸ್ಟ್ ನ ಪದಾಧಿಕಾರಿಗಳಾದ ಶ್ರೀಯುತ ಎನ್. ಜಿ. ವಿಜಯ ವಿಠ್ಠಲ ಅವರು ತಿಳಿಸಿದರು.
ಶ್ರಾವಣ ಮಾಸದ ಈ ಆರಾಧನಾ ಮಹೋತ್ಸವದಲ್ಲಿ ಎಲ್ಲಾ ರಾಯರ ಭಕ್ತರು ಕೋಣನಕುಂಟೆ ಶ್ರೀಮಠಕ್ಕೆ ಬಂದು ರಾಯರ ಅನುಗ್ರಹವನ್ನು ಪಡೆಯಬೇಕೆಂದು ವಿನಂತಿ.