ಮಾದರಿ ಗ್ರಂಥಪಾಲಕ ಆನಂದ್‌ರವರಿಗೆ ರಾಜ್ಯ ಮಟ್ಟದ ಪ್ರಶಸ್ತಿ ಸಿಗುವಂತಾಲಿ: ಬಿ.ಕೆ.ಪ್ರಸನ್ನ ಇಂಗಿತ
BANGALORE :
ರಾಜ್ಯದ ಮುಂಚೂಣಿಯಲ್ಲಿರುವ ಗ್ರಂಥದ ಗುಡಿ ಗ್ರಂಥಪಾಲಕ ಶ್ರೀ ಆನಂದರವರ ಆಸಾಮಾನ್ಯ ಸಾಧನೆ, ಉದಯೋನ್ಮುಖ ಕವಿ ಡಾ.ಆನಂದ ಸ್ವಾಮಿ ರವರ ಚೊಚ್ಚಲ ಕವನ ಸಂಕಲನ “ಭಾವ ಪಲ್ಲವಿ” ಲೋಕಾರ್ಪಣೆ ಮಾಡುವ ಸುಸಂಧರ್ಭ, ನೆರೆದಿದ್ದ ಸಭಿಕರ ತಲೆತೂಗುವಂತೆ, ಧ್ವನಿಗೂಡಿಸುವಂತೆ ಹಾಡಿದ ನಿವೃತ್ತ ಪೋಸ್ಟ್ ಮಾಸ್ಟರ್ ಶ್ರೀ ಆನಂದ ಮೂರ್ತಿರವರ ಅಪಾರ ಕೀರ್ತಿ ಗಳಿಸಿ ಮೆರೆದ ಭವ್ಯ ನಾಡಿದು ಹಾಡನ್ನು ಶ್ಲಾಘಿಸುತ್ತಾ, ಅತ್ಯಂತ ಆನಂದಮಯ ಸ್ತೋತೃಗಳ ನಡುವೆ, ಒಟ್ಟಾರೆ ಆನಂದತ್ರೇಯರ ಸಮ್ಮುಖದಲ್ಲಿ ಉಪಸ್ಥಿತನಾಗಿರುವುದೇ ನನ್ನ ಸುಕೃತವೆಂದು, ಕಳೆದ 35 ವರ್ಷಗಳಿಂದ ನಿರಂತರವಾಗಿ ಗ್ರಂಥಪಾಲಕರೆ0ಬ ಸರ್ಕಾರಿ ಹುದ್ದೆಯಲ್ಲಿದ್ದುಕೊಂಡೇ ಇಂತಹ ಸಾಹಿತ್ಯ, ಸಾಂಸ್ಕೃತಿಕ ಸೇವೆ ಸಲ್ಲಿಸುತ್ತಿರುವ ಶ್ರೀ ಆನಂದ್‌ರವರಿಗೆ ರಾಜ್ಯಮಟ್ಟದ ಪುರಸ್ಕಾರ ಸಿಗಲೇಬೇಕು ಎಂದಾಗ ಕಿಕ್ಕಿರಿದು ನೆರೆದಿದ್ದ ಸಭಿಕರ ಮೊಗದಲ್ಲಿ ಮಂದಹಾಸ, ಝೇಂಕರಿಸಿದ ಚಪ್ಪಾಳೆಯ ಸಪ್ಪಳ, ಮುಖ್ಯ ಅತಿಥಿಗಳ ಸ್ಥಾನ ಅಲಂಕರಿಸಿದ್ದ ಸುಮಾರು ಮೂವತ್ತು ವರ್ಷಗಳಿಂದಲೂ ಪತ್ರಿಕೋಧ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡು ಕಲೆ, ಸಾಹಿತ್ಯ, ಸಂಸ್ಕೃತಿಗೆ ತುಂಬು ಹೃದಯದ ಪ್ರೋತ್ಸಾಹ ನೀಡುತ್ತಾ ಬಂದಿರುವ ವಾರ್ತಾಜಾಲ ಪತ್ರಿಕೆಯ ಪ್ರಧಾನ ಸಂಪಾದಕ ಬಿ.ಕೆ. ಪ್ರಸನ್ನರವರು ಪ್ರಸನ್ನರಾದ ಪರಿಯಿದು. ಕುಮಾರಸ್ವಾಮಿ ಬಡಾವಣೆಯ “ಗ್ರಂಥದ ಗುಡಿ” ಗ್ರಂಥಾಲಯದ ಆವರಣದೊಳು ಕಳೆದ 20 ವರ್ಷಗಳಿಂದಲೂ ಸೇವೆಯೆಂಬ0ತೆ ನಡೆಸಿಕೊಂಡು ಬರುತ್ತಿರುವ “ಪುಟ್ಟಮಗು ಕಥೆಕೇಳು” 117 ನೇ ಸಂಚಿಕೆಯ ಕಾರ್ಯಕ್ರಮವು ದಿನಾಂಕ 27.08.2023 ರ ಸಂಜೆಯ ರಂಗನ್ನು ಹೆಚ್ಚಿಸಿತ್ತು.


ಪುಟ್ಟ ಮಕ್ಕಳ ಹಾಡು, ಕಥೆಗಳನ್ನು ಆಲಿಸುವಲ್ಲಿ ಮಕ್ಕಳಾಗುತ್ತಿದ್ದ ವೈಖರಿ, ಎಲ್ಲೆಡೆ ಹರಿನಾಮ ಸ್ಮರಣೆ ಕಡಿಮೆಯಾಗುತ್ತಿದ್ದನ್ನು ಮನಗಂಡ ಶ್ರೀಮನ್ನಾರಾಯಣರು ಶ್ರೀಮನ್ನಾರದರಿಗೆ ನೀವೇ ಹೋಗಿ ಭೂಲೋಕದಲ್ಲಿ ಅವತರಿಸಿ ಹರಿನಾಮ ಸ್ಮರಣೆಯ ಜಾಗೃತಿ ಮೂಡಿಸಿ ಎಂದು ಆಜ್ಞಾಪಿಸಿದಾಗ ಶ್ರೀಮನ್ನಾರದರೇ ಪುರಂದರದಾಸರಾಗಿ ಜನ್ಮಿಸಿ ದಾಸ ಸಾಹಿತ್ಯದ ಪಿತಾಮಹರೆನಿಸಿದರು.
ಇಂತಹ ದಾಸ ಸಾಹಿತ್ಯವನ್ನು ಉಳಿಸುವ ನಿಟ್ಟಿನಲ್ಲಿ, ಬೆಳೆಸಿ ಬೆಳಗಿಸುವ ನಿಟ್ಟಿನಲ್ಲಿ ತಮ್ಮ ಟ್ರಸ್ಟ್ ಹಮ್ಮಿಕೊಂಡು ಬಂದಿರುವ ಕಾಯಕಗಳ ಸ್ಮರಣೆ ನಿಜಕ್ಕೂ ಅರ್ಥಪೂರ್ಣವೆನಿಸಿದ್ದು ಅತಿಥಿಗಳಾಗಿ ಭಾಗವಹಿಸಿದ್ದ ಶ್ರೀ ಶ್ರೀ ಪುರಂದರದಾಸ ಮೆಮೋರಿಯಲ್ ಟ್ರಸ್ಟಿನ ಶ್ರೀ ವರದರಾಜನ್ ರವರ ನುಡಿ ನಮನಗಳಲ್ಲಿ ವ್ಯಕ್ತವಾಗುತ್ತಿತ್ತು. ಕವಿತೆಯ ಲಾಲಿತ್ಯವ ಆಲಿಸುವ ಚೌಕಟ್ಟು ಭಾಷೆಯನ್ನೂ ಮೀರಿದ್ದು, ಭಾವನೆಗಳ ಅನಾವರಣಗೊಳ್ಳುವುದು ಸಹೃದಯ ಗ್ರಂಥಾಲಯದ ಓದುಗರಿಂದ ಮಾತ್ರ ಎಂಬ ಮಾತನ್ನು “ಭಾವ ಪಲ್ಲವಿ” ಚೊಚ್ಚಲ ಕವನ ಸಂಕಲನದ ಕತೃ ಡಾ. ಆನಂದ ಸ್ವಾಮಿ ಹೇಳುವಾಗಲು ಕರಾಡುತನದ ಸ್ವಾಗತ. ಚಿತ್ರಕಲಾವಿದ ಮತ್ತು ಬರಹಗಾರ ವಿ.ಎಸ್.ಕುಮಾರ್ ರವರು ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಕುರಿತಾದ ಸ್ವರಚಿತ ಗೀತೆಯನ್ನು ಹಾಡುವಾಗಲೂ ಏನೋ ಒಂದು ರೀತಿಯ ಅನುಭಾವದ ಅನಾವರಣ. ಬಿ.ಕೆ. ಸುಮಿತ್ರ ಎಂದೇ ಖ್ಯಾತರಾದ ಗಾಯಕ ದಂಪತಿಗಳಾದ ರವಿಚಂದ್ರಾಚಾರ್ಯ ಶ್ರೀಮತಿ ಸುಮಿತ್ರ ರವಿಚಂದ್ರಾಚಾರ್ಯ ರವರ ಸುಮಧುರ ಗೀತ ಗಾಯನದ ಸಿಂಚನ, ನಾಲ್ಕು ಮಂದಿ ಗ್ರಂಥಾಲಯದ ಉತ್ತಮ ಓದುಗರಿಗೆ “ಉತ್ತಮ ಓದುಗ” ಪ್ರಶಸ್ತಿ ನೀಡಿದಾಕ್ಷಣ…




ಮಕ್ಕಳಾದಿಯಾಗಿ ನೆರೆದಿದ್ದ ಎಲ್ಲರಿಗೂ ಪುಸ್ತಕಗಳು ಸೇವೆ ಹೀಗೆ ಎಲ್ಲವೂ ಅತ್ಯಂತ ವ್ಯವಸ್ಥಿತವಾಗಿ ಜರುಗಿದ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿತ್ತು. ಮಾದರಿ ಗ್ರಂಥಪಾಲಕ ಆನಂದ್ ರವರ ಈ ಸಾರ್ಥಕ ಸೇವೆಗೆ ಬೆನ್ನೆಲುಬಾಗಿ ನಿಂತಿದ್ದು ತಾತಗುಣಿಯ ಸಂಭ್ರಮ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷರಾದ ಪ್ರಕಾಶ್ ರವರು. ಸಂಜೆ 6 ಕ್ಕೆ ಪ್ರಾರಂಭವಾದ ಕಾರ್ಯಕ್ರಮ ರಾತ್ರಿ 9 ಆಗಿದ್ದು ಗೊತ್ತೇ ಆಗಲಿಲ್ಲ. ಇಷ್ಟರ ಮಧ್ಯೆ ಚಂದ್ರಯಾನ – 3 ಯಶಸ್ಸಿಗೆ ಕಾರಣೀಭೂತರಾದ ಇಸ್ರೋ ಸಂಸ್ಥೆಯ ಎಲ್ಲಾ ವಿಜ್ಞಾನಿಗಳ ಸ್ಮರಣೆ ಮಾತ್ರ ಮರೆಯದೇ ತುಂಬು ಹೃದಯದ ಅಭಿನಂದನೆ ಸಲ್ಲಿಸಿದ್ದು ವಿಶೇಷವೆನಿಸಿv ಒಂದು ಯಶಸ್ವಿ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿತ್ತು.
ಛಾಯಾಚಿತ್ರ ಮತ್ತು ಬರಹ:- ವಿ.ಎಸ್.ಕುಮಾರ್. ಎಂ.ಎ.ಕನ್ನಡ ಮೊಬೈಲ್ ಸಂಖ್ಯೆ: 7892346105