ಕಾಯಕಯೋಗಿ ಶರಣ ನುಲಿಯ ಚಂದಯ್ಯ
12ನೇ ಶತಮಾನದ ಪ್ರಮುಖ ಶರಣರಲ್ಲಿ ನುಲಿಯ ಚಂದಯ್ಯ ತನ್ನ ಕಾಯಕ ಮತ್ತು ದಾಸೋಹದ ಮೂಲಕ ಪ್ರಸಿದ್ಧನಾದವನು. ಬಸವಾದಿ ಶರಣರಲ್ಲಿ, ಕಾಯಕ ಸಿದ್ಧಾಂತಕ್ಕೆ ಅಕ್ಷರಶಹ ಮಹತ್ವವನ್ನು ನೀಡಿ ಆದರೆ ಮೌಲ್ಯವನ್ನು ಹೆಚ್ಚಿಸಿದವನು.

ಉಲ್ಲೇಖಗಳು.: ಶರಣ ನುಲಿಯ ಚಂದಯ್ಯನ ಉಲ್ಲೇಖಗಳು ಕನ್ನಡದ “ಅನೇಕ ಕೃತಿಗಳಲ್ಲಿ ದೊರೆಯುತ್ತವೆ. ಲಕ್ಕಣ್ಣ ದಂಡೇಶನ ‘ಶಿವತತ್ವ ಚಿಂತಾಮಣಿ, ಚನ್ನಪ್ಪ ಕವಿಯ ‘ಶರಣಲೀಲಾಮೃತ” ಹಲಗೆಯಾರಯ್ಯನ ‘ಶೂನ್ಯಸಂಪಾದನೆ’ ಶಾಂತಲಿಂಗದೇಶಿಕನ ‘ಬೈರವೇಶ್ವರಕಾವ್ಯದ ಕಥಾಮಣಿ ಸೂತ್ರ ರತ್ನಾಕರ, ಸಿದ್ಧನಂಜೇಶನ ಗುರುರಾಜ ಚಾರಿತ್ರ್ಯ’, ಭೀಮಕವಿಯ ‘ಬಸವಪುರಾಣ’, ವಿರೂಪಾಕ್ಷ ಪಂಡಿತನ ‘ಚನ್ನಬಸವ ಪುರಾಣ’, ಕುಮಾರ ಚನ್ನಬಸವನ ಪುರಾತನರ ಚರಿತೆ”, ಎಳಂದೂರು ಹರೀಶ್ವರರ ‘ಶ್ರೀ ಪ್ರಭುದೇವರ ಪುರಾಣ’, ನಂಜುಂಡನ ‘ಬೈರವೇಶ್ವರಕಾವ್ಯ, ಪಾಲ್ಕುರಿಕೆ ಸೋಮನಾಥನ ‘ಬಸವಪುರಾಣ’, ಮಹಾಲಿಂಗದೇವರ ‘ಏಕೋತ್ತರಶತಸ್ಥಲ, ಸಿದ್ದಯ್ಯ ಪುರಾಣಿಕರ ‘ಶರಣಚರಿತಾಮೃತ’ ಮುಂತಾದ ಕೃತಿಗಳಲ್ಲಿ ಕಂಡು ಬರುತ್ತದೆ.
ಚಂದಯ್ಯನನ್ನು ಕುರಿತು ಬಸವಣ್ಣ, ಡಕ್ಕೆಯ ಬೊಮ್ಮಣ್ಣ, ಡೋಹರ ಕಕ್ಕಯ್ಯ, ಅಮುಗಿದೇವಯ್ಯ, ಏಲೇಶ್ವರ ಕೇತಯ್ಯ, ಕಾಡಸಿದ್ದೇಶ್ವರ, ಮಡಿವಾಳ ಮಾಚಿದೇವ, ಅಂಗಸೋಂಕಿತ ಲಿಂಗತಂದೆಗಳು ಮುಂತಾದ ಶರಣರು ತಮ್ಮ ವಚನಗಳಲ್ಲಿ ಕೊಂಡಾಡಿದ್ದಾರೆ.
ಹೆಸರು ಮತ್ತು ಕಾಲ :
ಚಂದಯ್ಯನನ್ನು ಚಂದಯ್ಯ, ನುಲಿಯ ಚಂದಯ್ಯ, ಚಂದೇಶ್ವರ, ಲಿಂಗದೇವ, ಚಂದಯ್ಯ, ಕಾಯಕದ ಚಂದಯ್ಯ ಮುಂತಾದ ಹೆಸರುಗಳಿಂದ ಕರೆಯಲಾಗಿದೆ.
ಚಂದಯ್ಯನ ಕಾಲದ ಬಗ್ಗೆ ವಿದ್ವಾಂಸರಲ್ಲಿ ಒಮ್ಮತದ ಅಭಿಪ್ರಾಯವಿಲ್ಲ. ಕಾರಣ ಅವನ ಕುರಿತು ನಿರ್ದಿಷ್ಟವಾದ ದಾಖಲೆಗಳಿಲ್ಲ. ಆರ್. ನರಸಿಂಹಾಚಾರ್ಯ 1160, ಚನ್ನಪ್ಪ ಎರೇಸೀಮ 1130, ಸರೋಜಾ ಕುಲಕರ್ಣಿ 1160, ಹಾಗು ಬಸವಣ್ಣ, ಅಮುಗಿದೇವ, ಕಿನ್ನರಿ ಬೊಮ್ಮಯ್ಯ, ಡೋಹರ ಕಕ್ಕಯ್ಯ, ಅಲ್ಲಮಪ್ರಭು, ಮಡಿವಾಳ ಮಾಚಿದೇವ ಮುಂತಾದ ವಚನಕಾರರ ಕಾಲ 1160 ಉಲ್ಲೇಖ ಇರುವದರಿಂದ ಇವರೆಲ್ಲರೂ ಇವನ ಸಮಕಾಲೀನರಾದ ಕಾರಣ ಚಂದಯ್ಯನ ಕಾಲವೂ 1160 ಎಂದು ವಿದ್ವಾಂಸರು ಗುರುತಿಸುತ್ತಾರೆ. ಆದರೆ ಎಲ್ಲೋ ಒಂದು ಕಡೆ 1107-1177 ಎಂದು ಉಲ್ಲೇಖಿಸಲಾಗಿರುತ್ತದೆ. ಇದನ್ನೇ ಆಧಾರವಾಗಿಟ್ಟುಕೊಂಡು ಚಂದಯ್ಯ 70 ವರ್ಷ ಬದುಕಿದ್ದನೆಂದು ಹೇಳುತ್ತಿದ್ದಾರೆ. ಆದರೆ ಇದಕ್ಕೆ ಯಾವುದೇ ದಾಖಲೆಗಳಿಲ್ಲ. ಬಸವಣ್ಣ, ಮಡಿವಾಳ ಮಾಚಿದೇವರ ಕಾಲ 1160 ಎಂದು ನಿರ್ದಿಷ್ಟವಾಗಿ ಹೇಳಲು ದಾಖಲೆಗಳಿದ್ದು, ಚಂದಯ್ಯನು ಕೂಡ ಅವರ ಸಮಕಾಲೀನ ಎನ್ನುವುದಕ್ಕೆ ಅವನ ಕಾಯಕದ ಜೊತೆಗೆ ಬೆಸೆದುಕೊಂಡು ಬಂದ ಕಥೆಯ ಸಾಕ್ಷಿ ಆ ಕಥೆಯಲ್ಲಿ ಮಡಿವಾಳ ಮಾಚಿದೇವ, ಬಸವಣ್ಣ ಮತ್ತು ಆನುಭವ ಮಂಟಪದಲ್ಲಿ ಅಲ್ಲಮಪ್ರಭು ಮುಂತಾದವರ ಸಮ್ಮುಖದಲ್ಲಿಯೇ ಚರ್ಚೆ ನಡೆದಿರುತ್ತದೆ. ಇನ್ನು 1107ಕ್ಕೂ ಮತ್ತು 1160ಕ್ಕೂ 53ವರ್ಷಗಳ ಅಂತರವಿರುತ್ತದೆ. ಇಷ್ಟೋಂದು ಅಂತರ ಇರಲಿಕ್ಕಿಲ್ಲ. ಆದ್ದರಿಂದ ವಿದ್ವಾಂಸರು ಗುರುತಿಸಿದ 1160ರಲ್ಲಿ, ಚಂದಯ್ಯ ಹುಟ್ಟಿರುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಒಂದು ವೇಳೆ ಇದನ್ನು ಒಪ್ಪಿದರೆ, 915ರ ಬದಲಾಗಿ, 862ನೇ ಜಯಂತಿಯನ್ನು ಆಚರಿಸಬೇಕಾಗುತ್ತದೆ.
ಕಾಯಕ ‘ನುಲಿಯ ಚಂದಯ್ಯ, ಚಂದಯ್ಯನ ಹೆಸರಿನೊಂದಿಗೆ ಅವನ ಕಾಯಕ ಉಲ್ಲೇಖಿತವಾಗಿರುತ್ತದೆ. ಅನೇಕ ಶರಣರ ಹೆಸರಿನೊಂದಿಗೆ ಅದರ ಕಾಯಕ ಉಲ್ಲೇಖಿತಗೊಂಡಂತೆÀ ಚಂದಯ್ಯನ ಕಾಯಕವೂ ಆವನ ಹೆಸರಿನೊಂದಿಗೆ ಬಂದಿರುತ್ತದೆ. ಇಲ್ಲಿ ‘ನುಲಿ’ ಎಂದರೆ ಅನೇಕ ವಿದ್ವಾಂಸರು ಹಗ್ಗ ಹುರಿ ಎಂದು ಉಲ್ಲೇಖಿಸಿದ್ದಾರೆ. ಆದರೆ ‘ಹಗ್ಗ’ ಅಥವಾ ‘ಹುರಿ’ ಎಂದರೆ, ಉತ್ತರ ಕರ್ನಾಟಕದಲ್ಲಿ, ಪುಂಡಿನಾರು, ಗದ್ಯಾಳ ನಾರುಗಳನ್ನು ಬಳಸಿ, ಹೊಸದು ಹಗ್ಗ ಅಥವಾ ಹುರಿ ತಯಾರಿಸುತ್ತಾರೆ. ಆದರೆ ಚಂದಯ್ಯನ ಹೆಸರಿನೊಂದಿಗೆ ಬರುವ ‘ನುಲಿ’ ಎಂದರೆ ಮೆದು ಹುಲ್ಲಿನಿಂದ ತಯಾರಿಸುವ ಹಗ್ಗ ಅಥವಾ ಇದನ್ನು ಹೊರಸಿನುಲಿ ಎಂದೂ ಕರೆಯುತ್ತಾರೆ. ಇದನ್ನು ಉತ್ತರ ಕರ್ನಾಟಕ ಭಾಗದಲ್ಲಿ ಹೊರಸು ನೆಲು, ಕಣ್ಣಿಗಳನ್ನು ತಯಾರಿಸಲು ಬಳಸುತ್ತಾರೆ.
ಹೊರಸು (ಹೆಣ್ಣು ಮಕ್ಕಳು ಪ್ರಸವದ ನಂತರ ಮಲಗಲು ಹಾಕುವ ಕಾಟ್ ಅದನ್ನು ಕಟ್ಟಿಗೆ ಕಾಲುಗಳನ್ನು ಮತ್ತು ನುಲಿ ಬಳಸಿಕೊಂಡು ಹೆಣೆÉಯುತ್ತಾರೆ ) ನೆಲ್ಲು ( ಮೊಸರು, ಬೆಣ್ಣೆ ಗಡಿಗೆಗಳನ್ನು ಚಿಕ್ಕಮಕ್ಕಳಿಗೆ ಮತ್ತು ಬೆಕ್ಕಿಗೆ ಸಿಗಬಾರದೆಂದು ಅಡುಗೆ ಮನೆಯಲ್ಲಿ, ಜಂತಿಗೆ ಜೋತು ಬೀಳುವಂತೆ ಕಟ್ಟುತ್ತಿದ್ದರು) ಕಣ್ಣಿ, ಮಖಾಡ, ಅಥವಾ ಬಾಯಿಜಾಳಿಗೆ ಎಂದರೆ, ಪ್ರಾಣಿಗಳು ಕಾಳುಕಡಿ, ತಿನ್ನಬಾರದು ಮತ್ತು ಹೊಲದಲ್ಲಿ ಪೈರುಗಳನ್ನು ತಿನ್ನಬಾರದೆಂದು ಬಾಯಿಗೆ ಕಟ್ಟಲು ಬಳಸುತ್ತಿದ್ದರು), ಇವುಗಳನ್ನು ಸಿದ್ದಪಡಿಸಲು ಮನೆಯಲ್ಲಿನಿಂದ ತಯಾರಿಸಿದ ಸುಲಿ ಬಳಸುತ್ತಿದ್ದರು, ಈಗ ಉತ್ತರ ಕರ್ನಾಟಕ ಭಾಗದಲ್ಲಿ ಹೊರಲು, ನಲು ಕಣ್ಣಿಗಳು ಜನರಲ್ಲಿ ಬಳಕೆಯಲ್ಲಿವೆ. ಅನೇಕ ಜನ ವಿದ್ವಾಂಸರಿಗೆ ‘ನುಲಿ’ಯನ್ನು ಮೆದೆಹುಲ್ಲಿನಿಂದ ತಯಾರಿಸುತ್ತಾರೆಂದು ಗೊತ್ತಿರದ ಕಾರಣ ನುಲಿ ಎಂದರೆ ನಾರಿನಿಂದ ತಯಾರಿಸುವ ಹಗ್ಗ ಎಂದು ಬರೆಯುತ್ತ ಬಂದಿರುತ್ತಾರೆ. ಉತ್ತರ ಕರ್ನಾಟಕದ ಗ್ರಾಮೀಣ ಪ್ರದೇಶದಲ್ಲಿ ಭಜಂತ್ರಿ, ಕೊರವ, ಕೊರಮ, ಕೊಂಚಿಕೊರವ ಜನಾಂಗದವರು ಮೆದುಹುಲ್ಲಿನಿಂದ ನುಲಿ ತಯಾರಿಸಿ ಅದನ್ನು ಹೊರಸು, ನೆಲು, ಈಚಲು ಮತ್ತು ಮೆಲೆಯಲ್ಲಿನ ಆನಟರಿಗೆ ಕಣ್ಣಿ ತಯಾರಿಸಲು ಬಳಸುತ್ತಾರೆ. ಈ ವಸ್ತುಗಳನ್ನು ಮಾರಿ ಬಂದ ಹಣದÀಲ್ಲಿ ಉಪಜೀವನ ನಡೆಸುತ್ತಾರೆ. ಚಂದಯ್ಯ ಹಟ್ಟಿ ಬೆಳೆದ ಊರು ಕೂಡ ಏದಿನ ವಿಜಯಪುರ ಸಮೀಪದ “ಶಿವಣಗಿ” ಈ ಎಲ್ಲ ಆಧಾರಗಳಿಂದ ನುಲಿಯ ಚಂದಯ್ಯ, ಅಥವಾ, ನುಲಿ, ಚಂದಯ್ಯ, ಕೊರಮ ಸಮುದಾಯಕ್ಕೆ ಸೇರಿದವನೆಂಬುದು ಸ್ಪಷ್ಟವಾಗುತ್ತದೆ. ವಿದ್ವಾಂಸರಾದ ಫ.ಗು. ಹಳಕಟ್ಟಿ, ಚೆನ್ನಪ್ಪ ಎರೇಸೀಮೆ, ಎಂ.ಎಸ್. ಲಠ್ಠೆ, ಎಸ್.ಎಸ್.ಭೂಸರೆಡ್ಡಿ, ಮುಂತಾದವರ ಅಭಿಪ್ರಾಯಗಳು ಮೇಲಿನ ಹೇಳಿಕೆಗೆ ಆಧಾರಗಳಾಗಿರುತ್ತದೆ.
ಕಾಯಕದ ಕಥೆ : ಶÀರಣ ಸಂಪ್ರದಾಯದ ಪ್ರಕಾರ ಪ್ರತಿಯೊಬ್ಬ ಶರಣನು ಕಾಯಕ ಮಾಡಿಯೇ ಬದುಕಬೇಕು, ಈ ಕಾಯಕದಿಂದ ಬಂದ – ದ್ರವ್ಯದಿಂದಲೇ. ಉಪಜೀವನ ಮತ್ತು ಅದರಲ್ಲಿ, ಉಳಿದದ್ದನ್ನು ಶರಣರಿಗೆ ದಾಸೋಹ ಏರ್ಪಡಿಸಬೇಕೆಂಬುದು ಸಿದ್ಧಾಂತವಾಗಿತ್ತು. ಈ ನಿಯಮದ ಪ್ರಕಾರವೇ ಚಂದಯ್ಯನು ತನ್ನ ದಿನನಿತ್ಯದ ಕಾಯಕವಾದ, ನುಲಿ ತಯಾರಿಸುವರು ಮತ್ತು ಅದನ್ನು ಮಾರಿ ಬಂದ ದ್ರವ್ಯದಲ್ಲಿ ದಾಸೋಹ ಮಾಡಿ ಪ್ರಸಾದ ಸ್ವೀಕರಿಸುವರು. ಆ ಪ್ರಕಾರ ಒಂದು ದಿನ ಮೆದೆÉಹುಲ್ಲು ಕೊಯ್ದು ತರಲು ಸಮೀಪದ ಹಳ್ಳಕ್ಕೆ ಹೋಗುತ್ತಾನೆ. (ಕೆಲ ವಿದ್ವಾಂಸರು ಅಡವಿಗೆ ಎಂದು ಬಳಸಿದ್ದಾರೆ, ಆದರೆ ಎದೆಹುಲ್ಲು ಅಡವಿಯಲ್ಲಿ ದೊರೆಯುವುದಿಲ್ಲ. ಅದು ನೀರಿನ ಝರಿ ಇಲ್ಲವೆ ಹಳ್ಳದಲ್ಲಿ ಮಾತ್ರ ಬೆಳೆಯುತ್ತದೆ) ಹಳ್ಳದಲ್ಲಿ ಹುಲುಸಾಗಿ ಬೆಳೆದ ಹುಲ್ಲನ್ನು ಕೊಯ್ಯುವಾಗ ಕೊರಳಲ್ಲಿ ಕಟ್ಟಿಕೊಂಡ ಲಿಂಗವು ಜಾರಿ ಮಡುವಿನಲ್ಲಿ ಬೀಳುತ್ತದೆ. ಅದು ಬಿದ್ದಿರುವದು ಚಂದಯ್ಯನ ಅರಿವಿಗೆ ಬಂದರೂ ಅವನು ತನ್ನ ಕಾಯಕದಲ್ಲಿ ತಲ್ಲೀನನಾಗಿ ಮೆದೆಹುಲ್ಲನ್ನು ಕೊಯ್ಯುತ್ತ ಮುಂದೆ ಸಾಗುವನು. ಆಗ ಜಾರಿ ಬಿದ್ದ ಲಿಂಗವ ಚಂದಯ್ಯನನ್ನು ಪರೀಕ್ಷಿಸಲು ಸುಮ್ಮನಾಗುತ್ತದೆ. ಅμÉ್ಟೂತ್ತಿಗೆ ಚಂದಯ್ಯ, ಮೆದೆಹಲ್ಲನ್ನು ಕೊಯ್ಯುವದನ್ನು ಮುಗಿಸಿ, ಆ ಕೊಯ್ದ ಹುಲ್ಲನ್ನು ಹೊರೆ ಕÀಟ್ಟಿ, ತಲೆಮೇಲೆ ಹೊತ್ತುಕೊಂಡು ಮನೆ ಕಡೆಗೆ ಹೊರಟು ಬಿಟ್ಟನು. ಆಗ ಲಿಂಗವು, ಚಂದಯ್ಯನ ಕಾರ್ಯನಿμÉ್ಠಯನ್ನು ಗಮನಿಸಿ ಬೆರಗಾಗಿ ಮನುಷ್ಯ ರೂಪ ತಾಳಿ ” ಎಲೆ, ಚಂದಯ್ಯ ನನ್ನನ್ನು ಬಿಟ್ಟು ಹೊರಟಿರುವೆ ಕರೆದುಕೊಂಡು ಹೋಗು ನಾನು ಬರುತ್ತೇನೆ “ನಿಲ್ಲು” ಎಂದು ಕೂಗುತ್ತದೆ. ಮೊದಲೇ ಲಿಂಗದ ಭಾವವನ್ನು ಅರಿತ ಚಂದಯ್ಯ ನಿಮ್ಮ ಭಾವ ಹೇಗಿದೆಯೋ ಹಾಗೇ ಮಾಡಿ, ನನಗೆ ನನ್ನ ಶರಣರ ಸೇವೆಗೆ ಹೊತ್ತಾಗುತ್ತದೆ’ ಎಂದು ಹೋಗುತ್ತಾನೆ, ತಕ್ಷಣವೇ ಲಿಂಗವು ಇನ್ನು ಸಮಯ ಮೀರಿತೆಂದು ತಡವರಿಸುತ್ತ ಚಂದಯ್ಯನ ಬೆನ್ನತ್ತಿ’ ನಾನು ನಿನ್ನೊಡನೆ ಬರುತ್ತೇನೆ ನನ್ನನ್ನು ಬಿಟ್ಟು ಹೋಗಬೇಡವೆಂದು ಕೇಳುತ್ತದೆ. ಆಗ ಚಂದಯ್ಯ ಮೊದಲು ಹೋಗಿ ಈಗ ಬರುತ್ತೇನೆ ಎಂದರೆ ನಾನು ಸ್ವೀಕರಿಸಲಾರೆ ಎಂದು ಹೇಳಿ ಹೊರಟು ಬಿಡುತ್ತಾನೆ. ಲಿಂಗದೇವನಿಗೆ ಬೇರೆ ದಾರಿ ಕಾಣದೆ, ಸಮೀಪದಲ್ಲಿ ಬಟ್ಟೆ ಒಗೆಯುತ್ತಿದ್ದ ಮಡಿವಾಳ ಮಾಚಿದೇವರ ಹತ್ತಿರ ದೂರನ್ನು ಒಯ್ಯುತ್ತದೆ, ಮಡಿವಾಳಯ್ಯನವರು ಲಿಂಗದೇವನ ದೂರು ಏನೆಂದು ಕೇಳಲಾಗಿ ಚಂದಯ್ಯ ನನ್ನನ್ನು ಸ್ವೀಕರಿಸುವುದಿಲ್ಲವೆಂದು ಹಟ ಹಿಡಿದಿರುತ್ತಾನೆ. ನೀವು ಸ್ವೀಕರಿಸಲು ಹೇಳಬೇಕೆಂದು ಹೇಳುತ್ತದೆ. ಆಗ ಮಡಿವಾಳಯ್ಯನವರು `ಚಂದಯ್ಯ, ಲಿಂಗದೇವನನ್ನು ಸ್ವೀಕರಿಸು ಎಂದು ಹೇಳುತ್ತಾರೆ ಚಂದಯ್ಯ. ಮೊದಲು ಒಪ್ಪುವುದಿಲ್ಲ. ಕೊನೆಗೆ ಮಡಿವಾಳಯ್ಯನವರು ಲಿಂಗದೇವನಿಗೆ ‘ಚಂದಯ್ಯ ಮಾಡುವ ಜಂಗಮರ ಸೇವೆಯಲ್ಲಿ ನಿಮ್ಮದೂ ಪಾಲು ಇರಬೇಕು” ಎಂಬ ವಾಗ್ದಾನದೊಂದಿಗೆ ರಾಜಿ ಮಾಡಿಸಿ ಕಳಿಸಿಕೊಡುತ್ತಾರೆ. ಆ ಪ್ರಕಾರ ಮನೆಗೆ ಬಂದು ಚಂದಯ್ಯ ತಾನು ಹೊಸೆÀದ ನುಲಿಯನ್ನು ಒಂದು ಹಗ್ಗಕ್ಕೆ (ಬಂಗಾರದ ನಾಣ್ಯ) ಮಾರಿಕೊಂಡು ಬರಲು ಲಿಂಗದೇವನಿಗೆ ಹೇಳುತ್ತಾನೆ. ಲಿಂಗದೇವ ನಿಯಮದಂತೆ ದಿನನಿತ್ಯ ನುಲಿಯನ್ನು ಮಾರುವ ಕಾಯಕದಲ್ಲಿ ತೊಡಗುತ್ತಾನೆ. ಒಂದು ದಿನ ನುಲಿ ಮಾರಾಟವಾಗದೆ ಬಸವಳಿದು ಹೋಗುತ್ತದೆÉ. ಅದನ್ನು ಗಮನಿಸಿದ ಬಸವಣ್ಣ ಚಂದಯ್ಯನ ಸತ್ಯ ಶುದ್ಧ ಕಾಯಕನಿμÉ್ಠಯನ್ನು ಪರೀಕ್ಷಿಸಲು, ಲಿಂಗದೇವನನ್ನು ಕರೆದು, ಅವನು ತಂದ ನುಲಿಗೆ ಮೂಲ ಬೆಲೆಗಿಂತ ಹೆಚ್ಚಿಗೆ ನೂರು ಹಾಗವನ್ನು ಕೊಟ್ಟು ಖರೀದಿಸುತ್ತಾರೆ.
ಲಿಂಗದೇವನಿಗೆ ಅತಿ ಆನಂದವಾಗಿ ಚಂದಯ್ಯನಲ್ಲಿಗೆ ಬಂದು ತಾವು ಒಂದು ಹಾಗ ಮಾಡಿಕೊಂಡು ಬಾ ಎಂದು ಹೇಳಿದ್ದೀರಿ, ನಾನು ನೂರು ಹಾಗಗಳಿಗೆ ಮಾರಿಕೊಂಡು ಬಂದಿದ್ದೇನೆಂದು ಹೇಳುತ್ತಾನೆ. ಇದನ್ನು ಕೇಳಿದ ಚಂದಯ್ಯನಿಗೆ ಎಲ್ಲಿಲ್ಲದ ಕೋಪ ಬಂದು “ಲಿಂಗದೇವ ಆ ನುಲಿಯ ಬೆಲೆ ಕೇವಲ ಒಂದು ಹಾಗೆ. ಉಳಿದ ಹಾಗವನ್ನು ಯಾರು ಕೊಟ್ಟರೋ ಅವರಿಗೆ ಮರಳಿ ಕೊಟ್ಟುಬರಬೇಕು” ಎಂದು ಕಳಿಸಿದನು. ಲಿಂಗದೇವ ಅಸಹಾಯಕನಾಗಿ ಮರಳಿ ಹೋಗಿ ಬಸವಣ್ಣನಿಗೆ ಉಳಿದ ಹಾಗಗಳನ್ನು ಕೊಟ್ಟು ಬರುತ್ತಾನೆ. ಚಂದಯ್ಯ ಇದನ್ನು ಇಷ್ಟಕ್ಕೆ ಬಿಡದೆ ಮಾತಿಗೆ ತಪ್ಪಿದ ಲಿಂಗದೇವನನ್ನು ಕರೆದುಕೊಂಡು ಮಡಿವಾಳಯ್ಯನ ಹತ್ತಿರ ಹೋದನು. ‘ಮಡಿವಾಳಯ್ಯ ಇಬ್ಬರನ್ನು ನೋಡಿ ಇದು ನನಗೆ ಬಗೆ ಹರಿಸಲು ಸಾಧ್ಯವಿಲ್ಲವೆಂದು ಹೇಳಿ ಅವರನ್ನು ಅನುಭವ ಮಂಟಪಕ್ಕೆ ಕರೆದುಕೊಂಡು ಹೋದರು. ಅನುಭವ ಮಂಟಪದಲ್ಲಿ ಅಲ್ಲಮಪ್ರಭುಗಳ ಅಧ್ಯಕ್ಷತೆಯಲ್ಲಿ ಶರಣ ಸಮೂಹದ ಮುಂದೆ ಚಂದಯ್ಯ ಲಿಂಗದೇವ ಮಾತಿಗೆ ತಪ್ಪಿದ್ದಾನೆ ‘ಜಂಗದ ಸೇವೆಯೇ ನನಗೆ ಮುಖ್ಯ, ಲಿಂಗದೇವನ ಆವಶ್ಯಕತೆಯಿಲ್ಲ’ವೆಂದು ತನ್ನ ವಾದವನ್ನು ಮಂಡಿಸಿದನು, ಇಡೀ ಶರಣ ಸಮೂಹವೇ ಚಂದಯ್ಯನ ವಾದವನ್ನು ಆಲಿಸಿ, ಒಪ್ಪಿಕೊಂಡರು. ಆದರೆ, ಅಲ್ಲಮಪ್ರಭು ಲಿಂಗದ ಮಹತ್ವವನ್ನು ನಾನಾ ದೃμÁ್ಟಂತಗಳ ಮೂಲಕ ಚಂದಯ್ಯನಿಗೆ ಮನವರಿಕೆ ಮಾಡಲು ಪ್ರಯತ್ನಿಸುತ್ತಾರೆ ಚಂದಯ್ಯ ಅಲ್ಲಮಪ್ರಭುಗಳ ಮಾತಿಗೂ ಒಪ್ಪದಾದಾಗ, ಕೊನೆಗೆ ಚೆನ್ನಬಸವಣ್ಣ ಲಿಂಗದ ಮಹತ್ವವನ್ನು – ಚಂದಯ್ಯನ ಮನಸ್ಸಿಗೆ ಹಿಡಿಸುವಂತೆ ತಿಳಿ ಹೇಳುತ್ತಾನೆ, ಅವರ ಮಾತು ಚಂದಯ್ಯನಿಗೆ ಒಪ್ಪಿತವಾಗುತ್ತದೆ. ಚಂದಯ್ಯ ತನ್ನ ವಾದವನ್ನು ಹಿಂಪಡೆದು, ಇಷ್ಟಲಿಂಗವನ್ನು ಧರಿಸಿ, ಅಂದಿನಿಂದ ಮತ್ತೆ ಸತ್ಯ, ಶುದ್ಧ, ಕಾಯಕ, ಲಿಂಗ ಪೂಜೆ, ದಾಸೋಹ ಮಾಡುತ್ತ ಲಿಂಗಾಂಗ ಸಾಮರಸ್ಯವನ್ನು ಪಡೆಯುತ್ತಾನೆ. ಚಂದಯ್ಯನ ಈ ಕಾಯಕ ನಿμÉ್ಠ ಮತ್ತು ಸ್ವಭಾರವನ್ನು ಕುರಿತು ನುಲಿಯ ಚಂದಯ್ಯ ಬಸವ ಸಮಕಾಲೀನ ಶರಣರಲ್ಲಿ ವಿಶಿಷ್ಟ ಸ್ವಭಾವ ಹಾಗೂ ವ್ಯಕ್ತಿತ್ವವನ್ನು ಹೊಂದಿದ ಸ್ವಚ್ಛ ಮನದ ಸ್ವತಂತ್ರ ವಿಚಾರವಾದಿ, ಕಾಯಕದ ಕಲಿ, ಜಂಗಮ ದಾಸೋಹದ ಛಲಿ” ಎಂದು ಎಳಂದೂg ಹರೀಶ್ವರ ಕವಿಗಳು – ಶ್ರೀ ಪ್ರಭುದೇವರಪುರಾಣದಲ್ಲಿ ಮುಕ್ತಕಂಠದಿಂದ ಹೊಗಳಿದ್ದಾರೆ.
ಚಂದಯ್ಯನ ಕುರಿತು ಅವಶೇಷಗಳು :
ಚಂದಯ್ಯನ ಹುಟ್ಟೂರು, ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಶಿವಣಗಿ ಗ್ರಾಮವೆಂದು ಸ್ಪಷ್ಟವಾದ ದಾಖಲೆಗಳಿವೆ. ಈ ಶಿವಣಗಿ ಸಮೀಪದ ರಾಮತೀರ್ಥದಿಂದ ಮೆದೆಹುಲ್ಲು ತಂದು ನುಲಿ ತಯಾರಿಸುತ್ತಿದ್ದನೆಂದು ಮತ್ತು ಇದೇ ರಾಮತೀರ್ಥಕ್ಕೆ ಸಮೀಪದ ದೇವರಹಿಪ್ಪರಗಿಯಿಂದ ಮಾಚಿದೇವ ಬಟ್ಟೆ ತೊಳೆಯಲು ಬರುತ್ತಿದ್ದನೆಂದು ತಿಳಿಯುತ್ತದೆ. ಈ ಶರಣರು ಕಲ್ಯಾಣಕ್ಕೆ ಹೋಗುವ ಪೂರ್ವದಲ್ಲಿಯೇ ಪರಿಚಯವಿದ್ದರು. ಶಿವಣಗಿಯಲ್ಲಿ ಚಂದಯ್ಯನ ಗುಡಿ ಕಟ್ಟಲಾಗಿತ್ತು ಮತ್ತು ಅದು ಹಾಳು ಬಿದ್ದು ಹೋಗಿತ್ತು. ಅದನ್ನು ಇತ್ತೀಚಿಗೆ ಭಜಂತ್ರಿ ಸಮುದಾಯದವರು ಪುನರುಜ್ಜೀವನ ಮಾಡಿರುವುದು ತಿಳಿದುಬರುತ್ತದೆ.
ಬಸವಕಲ್ಯಾಣದಲ್ಲಿ ತ್ರಿಪುರಾಂತಕನ ಕೆರೆಯ ಬದಿಯಲ್ಲಿ ಗವಿ ಇದ್ದು ಅದರಲ್ಲಿ, ಚಿಕ್ಕ ಗದ್ದುಗೆ ಇರುತ್ತದೆ. ಆ ಗದ್ದುಗೆಯ ಮೇಲೆ ಮೂರು ಕಲ್ಲಿನಿಂದ ಕೆÀತ್ತಲಾದ ಮೂರ್ತಿಗಳಿವೆ. ಅವುಗಳಲ್ಲಿ ಎರಡು ಮೂರ್ತಿಗಳು, ಶಿವ ಪಾರ್ವತಿಯರದ್ದಾದರೆ, ಒಂದು ಚಂದಯ್ಯನದಾಗಿದೆ, ಚಂದಯ್ಯನ ಮೂರ್ತಿ ನಿಂತ ಭಂಗಿಯಲ್ಲಿದ್ದು ಒಂದು ಕೈಯಲ್ಲಿ ಖಡ್ಗ ಹಿಡಿದುಕೊಂಡರೆ, ಇನ್ನೊಂದು ಕೈ ತೋಳಿನಿಂದ ರಕ್ತಕೊಡುವ ರೀತಿಯಲ್ಲಿ ಕೆತ್ತಲ್ಪಟ್ಟಿದೆ. (ಇದನ್ನು ಕುರಿತು ಅಧ್ಯಯನ ನಡೆಯಬೇಕಾಗಿರುತ್ತದೆ) ಗವಿಯ ಪಕ್ಕದಲ್ಲಿ ಬಾವಿ ಇದ್ದು ಅದನ್ನು ಚಂದಯ್ಯನ ಬಾವಿ ಎಂದು ಕರೆಯುತ್ತಾರೆ. ಈ ಗವಿಯಲ್ಲಿ ಚಂದಯ್ಯ, ನಿತ್ಯ ಅನುμÁ್ಠನ ಮಾಡುತ್ತಿರಬಹುದು.
ಕಲ್ಯಾಣದಲ್ಲಿ ಆದ ಕ್ರಾಂತಿಯ ನಂತರ ಶರಣರು ಹರಿದು ಹಂಚಿ ಹೋದರು. ಆಗ ಚಂದಯ್ಯನು ಉಳವಿಯ ಕಡೆ ಬರುತ್ತಾನೆ. ಅಲ್ಲಿ ಅಕ್ಕನಾಗಮ್ಮ ಹಾಗೂ ರೇಚಣ್ಣರನ್ನು ಭೇಟಿಯಾಗುತ್ತಾನೆ. ಆಲ್ಲಿಂದ ಮಲೆನಾಡಿನಲ್ಲಿ ಅಲೆಯುತ್ತ ಎಣ್ಣೆಹೊಳೆಗೆ ಬರುತ್ತಾನೆ. ಎಣ್ಣೆಹೊಳೆಯಲ್ಲಿ ಕೆಲಕಾಲ ಇದ್ದು, ಅಲ್ಲಿಂದ ಮತ್ತೆ ತರೀಕೆರೆ ತಾಲೂಕಿನ ಅಮೃತಾಪುರ ಹೋಬಳಿಯಲ್ಲಿರುವ ‘ನಂದಿ’ ಗ್ರಾಮಕ್ಕೆ ಹೋಗುತ್ತಾನೆ. ನಂದಿ ಗ್ರಾಮದಲ್ಲಿ ಚಂದಯ್ಯ ತನ್ನ ಜೋಳಿಗೆ, ಬೆತ್ತವನ್ನು ಬಿಟ್ಟು ಹೋದನೆಂದು ಹೇಳಲಾಗುತ್ತದೆ. ನಂದಿ ಗ್ರಾಮದಲ್ಲಿ ಶಿವನ ದೇವಾಲಯವಿದ್ದು ಗರ್ಭಗುಡಿಯ ಪಕ್ಕದ ಕೋಣೆಯಲ್ಲಿ ಚಂದಯ್ಯನ ಜೋಳಿಗೆ ಮತ್ತು ಬೆತ್ತಗಳು ಇವತ್ತಿಗೂ ಇರುತ್ತವೆ. ಅಲ್ಲಿ ಒಂದು ಶಾಸನವಿದ್ದು ಅದರಲ್ಲಿ ಚಂದಯ್ಯನ ಉಲ್ಲೇಖ ಇರುತ್ತದೆ. ಈಗ ನಂದಿ ಗ್ರಾಮದಲ್ಲಿ ಪ್ರತಿವರ್ಷ ನುಲಿ ಚಂದಯ್ಯನ ಜಾತ್ರೆ ನಡೆಯುತ್ತದೆ. ಆದರೆ ಆ ಗುಡಿಯಲ್ಲಿ ಇವತ್ತಿಗೂ ಕೊರಮ ಜನಾಂಗದವರಿಗೆ ಪ್ರವೇಶವನ್ನು ನಿμÉೀದಿಸಲಾಗಿದೆ. ನಾನು ನಂದಿ ಗುಮಕ್ಕೆ ಹೋಗಿ ಜಾತ್ರೆಯಲ್ಲಿ ಭಾಗವಹಿಸಿ ಬಂದಿರುತ್ತೇನೆ. ಫ.ಗು. ಹಳಕಟ್ಟಿಯವರು ನಂದಿ ಗ್ರಾಮದಲ್ಲಿಯೇ ಚಂದಯ್ಯ ಅಂತ್ಯವಾಗಿರಬೇಕೆಂದು ಊಹಿಸಿದ್ದಾರೆ. ಇದಕ್ಕೆ ಕಾರಣ ಚಂದಯ್ಯ ಈ ಗ್ರಾಮದಲ್ಲಿ ಬಿಟ್ಟು ಹೋದ ಜೋಳಿಗೆ ಮತ್ತು ಬೆತ್ತಗಳು. ಜಂಗಮನಾದವನಿಗೆ ಜೋಳಿಗೆ, ಬೆತ್ತಗಳು ಅವಶ್ಯವಾಗಿ ಬೇಕಾದ ವಸ್ತುಗಳು. ಅವು ಅಲ್ಲೇ ಇರುವುದರಿಂದ ಅವರ ಊಹೆ ಸರಿ ಇರಬಹುದು.
ಚಂದಯ್ಯ ನಂದಿ ಗ್ರಾಮದಿಂದ ಕಲ್ಲುಹತ್ತರಗಿ, ಅಲ್ಲಿಂದ ಪದ್ಮಾವತಿ ಗ್ರಾಮಕ್ಕೆ ಹೋಗುತ್ತಾನೆಂಬ ಉಲ್ಲೇಖಗಳಿವೆ. ಈ ಪದ್ಮಾವತಿ ಗ್ರಾಮಕ್ಕೆ ಈಗ “ನುಲೇನೂರು” ಎಂದು ಕರೆಯಲಾಗುತ್ತದೆ. ಇದು ಹೊಳಲಕೆರೆ ತಾಲೂಕಿನ ರಾಮಗಿರಿಗೆ ಹೋಗುವ ಮಾರ್ಗದಲ್ಲಿ ಬರುತ್ತದೆ. ಪದ್ಮಾವತಿ ಗ್ರಾಮದಲ್ಲಿ ದುಮ್ಮಿರಾಯನ ಹೆಂಡತಿಯಾದ ಪದ್ಮಾವತಿಯು ನುಲಿಯ ಚಂದಯ್ಯನಿಂದ ಧರ್ಮೋಪದೇಶ ಪಡೆದು ಅವನ ಅಪ್ಪಣೆಯ ಮೇರೆಗೆ ಒಂದು ಕೆÀರೆಯನ್ನು ನಿರ್ಮಿಸುತ್ತಾಳೆ. ಆ ಕೆರೆಗೆ ಇಂದಿಗೂ 146ನೆಯ ಕೆರೆ ಎಂದು ಹಳೆಯ ದಾಖಲೆಗಳಲ್ಲಿ, ಸರ್ಕಾರಿ ಲೆಕ್ಕಪತ್ರಗಳಲ್ಲಿ ಹೆಸರಿದೆ, ಕೆರೆÀ ಸಿದ್ಧವಾದ ಮೇಲೆ ಕೆರೆ ಏರಿಯ ಮೇಲೆ ಚಂದಯ್ಯನಿಗೆ ಮೂರಂಕಣದ ಚಿಕ್ಕ ಮಠವೊಂದನ್ನು ಕಟ್ಟಿಸಿಕೊಡಲಾಗುತ್ತದೆ. ಆ ಮಠದಲ್ಲಿಯೇ ಇದ್ದುಕೊಂಡು ಚಂದಯ್ಯ ತನ್ನ ಕಾಯಕ ಧರ್ಮವನ್ನು ಕೊನೆಯವರೆಗೂ ನಡೆಸಿಕೊಂಡು ಬಂದು ಶಿವಾನುಭವ ಗೋಷ್ಠಿಗಳನ್ನು ನೆರವೇರಿಸುತ್ತ ಕಾಲಯಾಪನೆ ಮಾಡುತ್ತಿದ್ದರು. ಆ ಊರಿನ ನಂದಪ್ಪ ಮತ್ತು ಗಂಗಮ್ಮ ಎಂಬ ಶರಣರು ಇವನ ಅನುಗ್ರಹಕ್ಕೆ ಪಾತ್ರರಾದರೆಂದು ತಿಳಿದುಬರುತ್ತದೆ. ಈ ಭಾಗದಲ್ಲಿ ಎಲ್ಲ ಊರುಗಳಲ್ಲಿ ಆಡುತ್ತಿರುವ ಸುಲಿಯ ಚಂದಯ್ಯನ ನಾಟಕದಲ್ಲಿ ನಂದಪ್ಪ ಮತ್ತು ಗಂಗಮ್ಮ ಅವರ ಪಾತ್ರ ಹಿರಿದಾಗಿ ಬರುತ್ತವೆ. ಕೆಲಕಾಲದ ನಂತರ ನುಲಿಯ ಚಂದಯ್ಯ ಪದ್ಮಾವತಿ ಗ್ರಾಮದಲ್ಲಿರುವ ತನ್ನ ಮಠದಲ್ಲಿ
ಲಿಂಗೈಕ್ಯನಾಗುತ್ತಾನೆ. ಅವನ ಕ್ರಿಯಾಸಮಾಧಿ ಮಠದಲ್ಲಿಯೇ ಆಗುತ್ತದೆ. ಆತನ ಲಿಂಗೈಕ್ಯದ ನಂತರ ಪದ್ಮಾವತಿ’ ಎಂಬ ಹೆಸರಿನ ಈ ಊರು ನುಲಿಯ ಚಂದಯ್ಯನ ಕಾಯಕದ ಹೆಸರಿನಿಂದ ‘ನುಲಿಯ್ಯನೂರು’ ಎಂಬುದಾಗಿ ಬಳಕೆಯಲ್ಲಿ ಬಂದು ಮುಂದೆ ‘ನುಲೇನೂರು” ಎಂದು ಪರಿವರ್ತಿತವಾಯಿತು, ಈಗಲೂ ಈ ಗ್ರಾಮವನ್ನು ನುಲೇನೂರು ಎಂದೇ ಕರೆಯಲಾಗುತ್ತದೆ. ಈ ಊರಿನಲ್ಲಿ ನುಲಿಯ ಚಂದಯ್ಯನಿಗೆ ಸಂಬಂಧಿಸಿದ ಒಂದು ಶಿಲಾಲೇಖವಿತ್ತೆಂದೂ ಚಂದಯ್ಯನ ಬಗೆಗೆ ದುಮ್ಮಿರಾಯ ಅಂದರೆ ಪದ್ಮಾವತಿಯ ಪÀತಿ ಬರೆಸಿದ ಶಾಸನವೆಂದೂ ಅದನ್ನು ಯಾರೋ ಆಗದವರು 20 ವರ್ಷಗಳ ಹಿಂದೆ ಹಾಳು ಮಾಡಿದರೆಂದು ತಿಳಿದುಬಂದಿದೆ.
ಈ ಮೇಲಿನ ನುಲೇನೂರಿನ ಸಮೀಪದಲ್ಲಿ ಬರುವ ‘ಮುರಕನಂದಿ’ ಮತ್ತು ಚಿತ್ರದುರ್ಗದ ಹೊಳಲಕೆರೆಗೆ ಬರುವ ರಾಜಮಾರ್ಗದಲ್ಲಿ ಬರುವ ಮತ್ತೊಂದು ‘ನುಲೇನೂರು’ ಈ ಎರಡು ಗ್ರಾಮಗಳಲ್ಲಿ ನುಲಿಯ ಚಂದಯ್ಯನಿಗೆ ಸಂಬಂಧಿಸಿದ ಚಿಕ್ಕ ಮಂಟಪಗಳಿದ್ದು, ಅವುಗಳಲ್ಲಿ ಅವರು ಅನುμÁ್ಠನ ಮಾಡುತ್ತಿರಬಹುದು, ಈಗ ಆ ಎರಡು ಕಡೆಗಳಲ್ಲಿ ಚಂದಯ್ಯನ ಹೆಸರಿನಲ್ಲಿ ಪೂಜಾಧಿ ಕಾರ್ಯಗಳು ನಡೆಯುತ್ತವೆ.
ಬನವಾಸಿಯ ಮಧುಕೇಶ್ವರ ದೇವಾಲಯಕ್ಕೆ ಸ್ವಾದಿಯ ನಾಳ್‍ಪ್ರಭುಗಳು ಒಂದು ಕಲ್ಲುಮಂಚ ಮತ್ತು ಕಲ್ಲುಮಂಟಪವನ್ನು ಮಾಡಿಸಿಟ್ಟ ಅಂಶ ಪ್ರಸಿದ್ಧವಿದೆ, ಕಲ್ಲುಮಂಚವನ್ನು ರಘುನಾಥ ನಾಯಕನು, (ಕ್ರಿ.ಶ. 1618-1637) ಮಾಡಿಸಿಕೊಟ್ಟ ಬಗ್ಗೆ ಸ್ವಾದಿ ಅರಸರ ಚರಿತ್ರೆಯಲ್ಲಿ ಉಲ್ಲೇಖಗಳಿವೆ. ಕಲ್ಲುಮಂಟಪ, ಮಧಾಕೇಶ್ವರ ದೇವಾಲಯದ ಒಳಭಾಗದಲ್ಲಿ ಗರ್ಭಗುಡಿಯ ಹೊರಭಾಗದಲ್ಲಿ, ಬಲಗಡೆ ಇಡಲ್ಪಟ್ಟಿದೆ. ಅದರಲ್ಲಿ ಮೋಳಿಗೆ ಮಾರಯ್ಯ, ನುಲಿಯ ಚಂದಯ್ಯ, ಆಯ್ದಕ್ಕಿ ಮಾರಯ್ಯ, ಹಡಪದಪಣ್ಣ, ದಾಸಿಮಾರ್ಯ, ಹಾಳಿನ ಹಂಪಣ್ಣ, ಗುಂಡಬ್ರಹ್ಮಯ್ಯಗಳ ಮೂರ್ತಿಗಳನ್ನು ಅವರವರ ನಾಮಂಕಿತ ಬರಹದೊಡನೆ ಕೆತ್ತಲಾಗಿದೆ.
ಚಂದಯ್ಯನ ಅಂಕಿತ ಮತ್ತು ವಚನ ಸಾಹಿತ್ಯ:
ಚಂದಯ್ಯನ ವಚನಗಳನ್ನು ಕುರಿತು ಅಧ್ಯಯನ ಮಾಡಿದ ವಿದ್ವಾಂಸರು, ಅವನ ವಚನಗಳಲ್ಲಿ ಬಳಸಿದ ಅಂಕಿತವನ್ನು “ಚಂದೇಶ್ವರಲಿಂಗ” “ಚಂದೇಶ್ವರ” ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗ” ಬಸವಣ್ಣಪ್ರಿಯ ಚಂದೇಶ್ವರಲಿಂಗ ಹಾಗೂ ”ಸಂಗನಬಸವಣ್ಣಪ್ರಿಯ ಚಂದೇಶ್ವರಲಿಂಗ” ಎಂಬ ನಾನಾ ರೀತಿಯ ಅಂಕಿತಗಳನ್ನು ಗುರುತಿಸಲಾಗಿದೆ.ಇವುಗಳಲ್ಲಿ ಎಲ್ಲರೂ ಒಮ್ಮತದಿಂದ “ಚಂದೇಶ್ವರಲಿಂಗ” ಎಂಬ ಅಂಕಿತವನ್ನು ಒಪ್ಪಲಾಗಿರುತ್ತದೆ.
ಚಂದಯ್ಯನ ವಚನಗಳು ವಿಚಾರವಾಗಿ ವಿವಿಧ ವಿದ್ವಾಂಸರು ತಮಗೆ ದೊರೆತ ವಚನಗಳನ್ನು ಈ ರೀತಿ ಉಲ್ಲೇಖಿಸಿದ್ದಾರೆ. ಎಲ್. ಬಸವರಾಜ -27, ಡಾ.ಆರ್.ಸಿ. ಹಿರೇಮಠ -29, ಆರ್. ನರಸಿಂಹಾಚಾರ್- 49 ಎಂದು ಹೇಳಿ ಆಧಾರಗಳಿಲ್ಲದ ಕಾರಣ 3 ವಚನಗಳನ್ನು ಮಾತ್ರ ಗುರುತಿಸುತ್ತಾರೆ. ಡಾ. ಎಚ್.ತಿಪ್ಪೇರುದ್ರಸ್ವಾಮಿ-7, ಫsÉ.ಗು.ಹಳಕಟ್ಟಿ-6, ಸಂ.ಶಿ. ಭೂಸನೂರಮಠ- 27, ಡಾ.ಎಸ್. ವಿದ್ಯಾಶಂಕರ-48. ಹೀಗೆ ಚಂದಯ್ಯನ ವಚನಗಳು ಒಂದೇ ಕಡೆ ದೊರೆಯದ ಕಾರಣ ವಿವಿಧ ವಿದ್ವಾಂಸರು ಅವನ ವಚನಗಳ ನಿರ್ದಿಷ್ಟ ಸಂಖ್ಯೆಯನ್ನು ಗುರುತಿಸಲು ಸಾಧ್ಯವಾಗಿಲ್ಲ. ಆದರೂ ಇದುವರೆಗೆ ದೊರೆತಿರುವ ಒಟ್ಟು ವಚನಗಳು 48 ಎಂದು ಒಪ್ಪಿತವಾಗಿ ಅವುಗಳನ್ನು ಸಂಕೀರ್ಣ ವಚನ ಸಂಪುಟ-2ರಲ್ಲಿ ಪ್ರಕಟಿಸಲಾಗಿದೆ. ಚಂದಯ್ಯನ ವಚನಗಳಲ್ಲಿ, ಕಾಯಕ, ದಾಸೋಹ, ಶರಣರನ್ನು ಕುರಿತವುಗಳು ಹೆಚ್ಚು. ಕಾಯಕ ಮತ್ತು ಕಾಯಕದಿಂದ ಬರುವ ದ್ರವ್ಯವು ಹೆಚ್ಚಿರಬಾರದು, ಅತಿ ಆಶೆ ಬೇಡವೆಂದು ಎಚ್ಚರಿಕೆ ನೀಡಿ ಮಾಡುವ ಕಾಯಕವು ನಿಯಮಬದ್ದವಾಗಿರಬೇಕೆಂದು ಹೇಳುತ್ತಾನೆ.
“ಸತ್ಯಶುದ್ಧ ಕಾಯಕದಿಂದ ಬಂದ ದವ್ಯದಲ್ಲಿ
ಚಿತ್ತ ವಿಚ್ಚಿಂದವಾಗದಿರಬೇಕು
ನೇಮದ ಕೂಲಿಯ ಬಿಟ್ಟು
ಹೇಮದಾಸೆಗೆ ಕಾಮಿಸಿ ದ್ರವ್ಯವ ಹಿಡಿದರೆ
ತಾ ಮಾಡುವ ಸೇವೆ ನಷ್ಟವÀಯ್ಯಾ
ನಿನ್ನಾಸೆಯ ವೇಷವ ಪಾಠಕ್ಕೆ ನೀನೆ ಹೋಗು
ನನಗೆ ನಮ್ಮ ಜಂಗಮದ ಪ್ರಣಾದದಾಗೆ
ಚಂದೇಶ್ವರಲಿಂಗಕ್ಕೆ ಪ್ರಾಣವಯ್ಯಾ
ಚಂದಯ್ಯ ಕಾಯಕದಲ್ಲಿ ಶ್ರಮಕ್ಕೆ ತಕ್ಕ ಪ್ರತಿಫಲವಿರಬೇಕೆಂದು ಬಯಸುತ್ತಾನೆ. ಹೆಚ್ಚಿನ ದ್ರವ್ಯದಾಸೆ ಬಯಸಿದರೆ ಮಾಡುವ ಸೇವೆಯು ನಷ್ಟವಾಗಬಲ್ಲದು ಎಂದು ಹೇಳುವನು. ಪ್ರತಿಯೊಬ್ಬರೂ ಕಾಯಕ ಮಾಡಿಯೇ ಬದುಕಬೇಕು, ಆ ಕಾಯಕದಿಂದ ಬಂದ ದ್ರವ್ಯದಿಂದ ದಾಸೋಹ ಮಾಡಿ ಪ್ರಸಾದ ಸ್ವೀಕರಿಸಬೇಕು.
ಗುರುವಾದರೂ ಕಾಯಕದಿಂದಲೇ ಜೀವನ್ನುಕ್ತಿ
ಲಿಂಗವಾದರೂ ಕಾಯಕದಿಂದಲೇ ವೇಷದ ಪಾಶ ಹರಿವುದು
ಗುರುವಾದರೂ ಚರಸೇವೆಯ ಮಾಡಬೇಕು
ಲಿಂಗವಾದರೂ ಚರಸೇವೆಯ ಮಾಡಬೇಕು.
ಚನ್ನಬವಣ್ಣಪ್ರಿಯ ಚಂದೇಶ್ವರಲಿಂಗದ ಅರಿವು”
ಚಂದಯ್ಯ ಗುರು-ಲಿಂಗ-ಜಂಗಮದಾದಿಯಾಗಿ ಎಲ್ಲರೂ ಕಾಯಕ ಮಾಡಬೇಕು, ಪ್ರತಿಯೊಬ್ಬರಿಗೂ ಅವರದೇ ಆದ ವೃತ್ತಿ ಇದ್ದು, ಆ ವೃತ್ತಿಯ ಮೂಲಕ ಕಾಯಕ ಮಾಡಬೇಕು. ಗುರು- ಲಿಂಗ-ಜಂಗಮರು ಕಾಯಕ ಮಾಡಿದರೆ ಮಾತ್ರ ಅವರಿಗೆ ಜೀವನಮುಕ್ತಿ ದೊರೆಯುತ್ತದೆ. ಕಾಯಕ ಯಾರಿಗೂ ಬಿಟ್ಟಿದ್ದಲ್ಲವೆಂದು ಹೇಳುತ್ತಾನೆÉ
“ಕಂದಿಸಿ ಕಂದಿಸಿ, ಬಂದಿಸಿ ಕಂಡವರ ಬೇಡಿ ತಂದು
ಜಂಗಮಕ್ಕೆ ಮಾಡಿದೆನೆಂಬ ದುಂದುಗದೋಹರ ಲಿಂಗಕ್ಕೆ ನೈವೇದ್ಯಸಲ್ಲ
ತನು ಕರಗಿ ಮನ ಬಳಲಿ ಬಂದ ಚರದ ಅನುವರಿತು
ಸಂದಿಲ್ಲದೆ ಸಂಶಯವಿಲ್ಲದೆ ಜಂಗಮಲಿಂಗಕ್ಕೆ
ದಾಸೋಹವ ಮಾಡುವುದೇ ಮಾಟ
ಕಾಶಿಯ ಕಾಯಿ ಕಾಡಿನ ಸೋಪ್ಪಾಯಿತ್ತಾದರೂ
ಕಾಯಕದಿಂದ ಬಂದದು ಲಿಂಗಾರ್ಪಿತ
ಚನ್ನಬಸವಣ್ಣಪ್ರಿಯ ಚಂದೇಶ್ವರಲಿಂಗಕ್ಕೆ ನೈವೇದ್ಯ ಸಂದಿತ್ತು”.
ಮತ್ತೊಬ್ಬರನ್ನು ನೋಯಿಸಿ, ಅನ್ಯಾಯ ಮೋಸದಿಂದ ಬಂದ ದ್ರವ್ಯದಿಂದ ಜಂಗಮರಿಗೆ ದಾಸೋಹ ಮಾಡುವುÀದಾದರೆ ಅದು ಸಲ್ಲದು, ಭಕ್ತಿಯಿಂದ, ಮನವಿಟ್ಟು ಸಂಪಾದಿಸಿ ತಂದ ಕಾರೆಯ ಸೋಪ್ಪಾದರು ಲಿಂಗಕ್ಕೆ ಅರ್ಪಿತವೆಂದು ಹೇಳುತ್ತಾನೆ.
‘’ಗುರುವ ಕುರಿತು ಮಾಡುವಲ್ಲಿ
ಬ್ರಹ್ಮನ ಭಜನೆಯ ಹರಿಯಬೇಕು.
ಲಿಂಗವ ಕುರಿತು ಮಾಡುವಲ್ಲಿ
ವಿಷ್ಣವಿನ ಸಂತೋಷಕ್ಕೆÀ ಸಿದ್ದರಿರಬೇಕು.
ಜಂಗಮ ಕುರಿತು ಮಾಡುವಲ್ಲಿ
ರುದ್ರನ ಪಾಶನ ಹೊದ್ದದಿರಬೇಕು.
ಒಂದನರಿದು ಒಂದ ಮರೆದು
ಸಂದಿಲ್ಲದ ಸುಖ ಜಂಗಮದ ದಾಸೋಹದಲ್ಲಿ
ಸಂಗನಬಸವಣ್ಣ ನಿತ್ಯ ಚಂದೇಶ್ವರಲಿಂಗಕ್ಕೆ ತಲುಪಿ’’.
ಈ ವಚನದಲ್ಲಿ ಗುರು-ಲಿಂಗ-ಜಂಗಮರನ್ನು ಆರಾಧಿಸುವಲ್ಲಿ ಬ್ರಹ್ಮ- ವಿಷ್ಣು-ರುದ್ರರಿಗೆ ಸ್ಥಾನವಿಲ್ಲ. ಇಬ್ಬಗೆಯ ಆರಾಧನೆ ಜಂಗಮ ಸೇವೆಯಲ್ಲಿ ಸಲ್ಲದು. ತನ್ನ ನಿಯಮಕ್ಕೆ ಬದ್ಧನಾಗಿರಬೇಕು ಎಂದು ಹೇಳುತ್ತಾನೆ.
“ಸಂಸಾರವೆಂಬ ಸಾಗರದ ಮಧ್ಯದೊಳಗೆ
ಬೆಳೆದ ಹೊಡಕೆಯ ಹುಲ್ಲು ಕೊಯ್ದು
ಮತ್ತಮಾ ಕಣ್ಣ ತೆಗೆದು ಕಣ್ಣಿಯ ಮಾಡಿ
ಇಹಪರರೆಂಬ ಉಭಯದ ಗಂಟನಿಕ್ಕಿ
ತುದಿಯಲ್ಲಿ ಮಾಡಿಕೂಟದೆಂಬ ಮನದ
ಕುಣಿಕೆಯಲ್ಲಿ ಕಾಯಕವಾಗಿತ್ತು
ಇದು ಕಾರಣ ಚಂದೇಶ್ವರಲಿಂಗವೆಂಬ ಭಾವನೆನಗಿಲ್ಲಿ”
ಈ ವಚನದಲ್ಲಿ ಸಂಸಾರವೆಂಬ ಸಾಗರದಲ್ಲಿ ಮುಳುಗಿ ಅಜ್ಞಾನ ಅಂಧಕಾರದ ಬೆನ್ನ ಹತ್ತಿದಾಗ, ಹುಲ್ಲಿನ ಕಣ್ಣ ತೆಗೆದು ಕಣ್ಣಿಯ ಮಾಡುವ ತೆರದಲಿ, ಅಜ್ಞಾನವೆಂಬ ಕಣ್ಣ ತೆಗೆದು ಸುಜ್ಞಾನದ ಕಡೆ ನಡೆಯಬೇಕೆಂದು ಚಂರಯ್ಯ ಹೇಳುತ್ತಾನೆ.
– ಡಾ.ಬಿ.ಎಸ್. ಭಜಂತ್ರಿ (ಸುರೇಶ) ಸಹಾಯಕ ಪ್ರಾಧ್ಯಾಪಕರು ಕರ್ನಾಟಕ ಕಾಲೇಜು, ಧಾರವಾಡ