ಮದ್ಯ ದರ : ತಳ ಸೇರಿದ ಮಾರಾಟ/ದುಬಾರಿ ಮದ್ಯ ವಿರುದ್ಧ ಮದ್ಯ ಪ್ರಿಯರ ಆಕ್ರೋಶ

ಬೆಂಗಳೂರು, ಆಗಸ್ಟ್ 29 (ಕರ್ನಾಟಕ ವಾರ್ತೆ): ಇತ್ತೀಚಿನ ಪತ್ರಿಕಾ ಹಾಗೂ ಟಿ.ವಿ ಮಾದ್ಯಮಗಳ ವರದಿಯಲ್ಲಿ ಮದ್ಯ ದರ ಏರಿಕೆಯಿಂದ ತಳ ಸೇರಿದ ಮಾರಾಟ ದುಬಾರಿ ಮದ್ಯ ವಿರುದ್ಧ ಮದ್ಯಪ್ರಿಯರ ಆಕ್ರೋಶ/ ಮದ್ಯದ ದರ ಏರಿಕೆಯಿಂದ ನೊಂದಿರುವ ಮದ್ಯ ಪ್ರಿಯರು ಮದ್ಯ ಖರೀದಿಯನ್ನೇ ಕಡಿಮೆ ಮಾಡಿದ್ದು ಇದರಿಂದ ರಾಜ್ಯದ ಬೊಕ್ಕಸಕ್ಕೆ ರಾಜಸ್ವ ನಷ್ಟ ಏಕಾಏಕಿ ಶೇ.20 ಕ್ಕೆ ಏರಿಸಿದ ಪರಿಣಾಮ ಮಾರಾಟದಲ್ಲಿ ಕುಂಠಿತ ಮುಂತಾದ ವರದಿಗಳು ಬಿತ್ತರಿಸಲಾಗಿರುತ್ತದೆ ಈ ಸಂಬಂಧ ಅಬಕಾರಿ ಇಲಾಖೆಯು ಸ್ಪಷ್ಟನೆ ನೀಡಿರುತ್ತದೆ.

ಈ ಎಲ್ಲಾ ವರದಿಗಳು ಸತ್ಯಕ್ಕೆ ದೂರವಾಗಿರುತ್ತದೆ. ಕಾರಣ 2023-24ನೇ ಸಾಲಿನಲ್ಲಿ ಇಲ್ಲಿಯವರೆಗೆ ಏಪ್ರಿಲ್ 1, ರಿಂದ ಆಗಸ್ಟ್ 25, 2023ರವರೆಗೆ ರೂ.13,515 ಕೋಟಿ ರಾಜಸ್ವ ಸಂಗ್ರಹಣೆಯಾಗಿದ್ದು, ಇದು ಆಯವ್ಯಯ ಗುರಿಗೆ ಶೇ.37.5 ರಷ್ಟು ಸಾಧನೆಯಾಗಿರುತ್ತದೆ. ಅಲ್ಲದೇ ಕಳೆದ ವರ್ಷದ ಇದೇ ಅವಧಿಯಲ್ಲಿ ರೂ.11,887 ಕೋಟಿ. ರಾಜಸ್ವ ಸಂಗ್ರಹವಾಗಿದ್ದು, ರೂ.1,628 ಕೋಟಿ ಅಧಿಕವಾಗಿ ರಾಜಸ್ವವನ್ನು ಸಂಗ್ರಹವಾಗಿದ್ದು, ಶೇ.13.7 ರಷ್ಟು ಬೆಳವಣಿಗೆ ಆಗಿರುತ್ತದೆ.

2023-24ನೇ ಸಾಲಿಗೆ ಸರ್ಕಾರವು ಅಬಕಾರಿ ಇಲಾಖೆಗೆ ರೂ. 36,000 ಕೋಟಿ ಅಬಕಾರಿ ರಾಜಸ್ವ ಗುರಿ ನಿಗದಿಪಡಿಸಿರುತ್ತದೆ. ಜುಲೈ 7 ರಂದು ಮಾನ್ಯ ಮುಖ್ಯ ಮಂತ್ರಿಗಳು ತಮ್ಮ ಆಯವ್ಯಯ ಭಾಷಣದಲ್ಲಿ ಹೆಚ್ಚುವರಿ ಅಬಕಾರಿ ಸುಂಕವನ್ನು (AED Rates on IML) ಹೆಚ್ಚಿಸಲು ಪ್ರಸ್ತಾಪಿಸಲಾಗಿದ್ದು, ಅದರಂತೆ ಜುಲೈ 20 ಕ್ಕೆ ಜಾರಿಗೆ ಬರುವಂತೆ ಮದ್ಯದ ಎಲ್ಲಾ 18 ಘೋಷಿತ ಬೆಲೆ ಸ್ಲಾಬ್‍ಗಳ ಮೇಲೆ ಶೇ. 20 ರಷ್ಟು ಹೆಚ್ಚುವರಿ ಅಬಕಾರಿ ಸುಂಕವನ್ನು ಹೆಚ್ಚಿಸಿ ಸರ್ಕಾರವು ಆದೇಶಿಸಿರುತ್ತದೆ.

ಸಾಮಾನ್ಯವಾಗಿ ಮದ್ಯದ ದರಗಳನ್ನು ಆಯವ್ಯಯ ದಿನದಂದು ಹೆಚ್ಚಳದ ಘೋಷಣೆ ಮಾಡುವುದಾಗಿದ್ದು, ಅದು ನಂತರದ ನಿರ್ದಿಷ್ಟ ದಿನಗಳಲ್ಲಿ ಜಾರಿಗೆ ಬರುತ್ತದೆ. ಸರ್ಕಾರವು ಜುಲೈ 7, 2023ರ ಆಯವ್ಯಯದಲ್ಲಿ ದರಗಳನ್ನು ಘೋಷಣೆ ಮಾಡುವ ದಿನಾಂಕದಿಂದ ಜಾರಿಮಾಡುವ ದಿನಾಂಕ: ಜುಲೈ 20, 2023 ವರೆಗೆ ಸನ್ನದುದಾರರು (ಮದ್ಯ ಮಾರಾಟಗಾರರು) ತೆರಿಗೆ ಏರಿಕೆಗೂ ಮುನ್ನ ಹೆಚ್ಚು ಮದ್ಯ ಖರೀದಿಸಿ ಮುಂಗಡ ದಾಸ್ತಾನು ಮಾಡಿಕೊಂಡು ಅದನ್ನು ನಂತರದ ದಿನಗಳಲ್ಲಿ ಹೊಸ ದರಗಳಲ್ಲಿ ಮಾರಾಟ ಮಾಡುತ್ತಾರೆ. ಹೀಗೆ ಸನ್ನದುದಾರರು ಕೆಎಸ್‍ಬಿಸಿಎಲ್ ಡಿಪೆÇೀಗಳಿಂದ ಮುಂಗಡ ಖರೀದಿ ಮಾಡಿ ದಾಸ್ತಾನು ಮಾಡಿಕೊಂಡಿರುವುದರಿಂದ ಬೆಲೆ ಹೆಚ್ಚಳದ ಜಾರಿ ದಿನಾಂಕದಿಂದ ಮುಂದಿನ ಕೆಲವು ದಿನಗಳವರೆಗೆ ಸನ್ನದುದಾರರು ಹೆಚ್ಚಿನ ಮದ್ಯ ಖರೀದಿ ಮಾಡಿಕೊಳ್ಳುವುದಿಲ್ಲ, ಇದರಿಂದ ಮದ್ಯದ ಮಾರಾಟದಲ್ಲಿ ಕುಂಠಿತ ಕಂಡು ಬಂದಾಗ್ಯೂ ನಂತರ ದಿನಗಳಲ್ಲಿ ಯಥಾಸ್ಥಿತಿಗೆ ಬಂದಿರುತ್ತದೆ.

ಜುಲೈ 2022 ಹಾಗೂ ಜುಲೈ, 2023 ರಲ್ಲಿ ತುಲನಾತ್ಮಕ ಮದ್ಯ ಮಾರಾಟವು ಜುಲೈ 1, 2022 ರಿಂದ ಜುಲೈ 19, 2022 ರವರೆಗೆ ಶೇ.32.6, ಜುಲೈ 20 ರಿಂದ ಜುಲೈ 31 ರವರೆಗೆ ಶೇ. 22.83, ಒಟ್ಟಾರೆ ಜುಲೈ 2022 ರಲ್ಲಿಶೇ. 54.89 ಮಾರಾಟವಾಗಿದೆ.

ಜುಲೈ 1, 2023 ರಿಂದ ಜುಲೈ 19, 2023 ರವರೆಗೆ ಶೇ.52.65, ಜುಲೈ 20 ರಿಂದ ಜುಲೈ 31 ರವರೆಗೆ ಶೇ. 12.81, ಒಟ್ಟಾರೆ ಜುಲೈ 2023 ರÀಲ್ಲಿ ಶೇ. 65.46 ಮಾರಾಟವಾಗಿದೆ.
ಈ ರೀತಿ ಸನ್ಮದುದಾರರು ಹೆಚ್ಚಿನ ಮದ್ಯದ ದಾಸ್ತಾನು ಮಾಡಿಕೊಂಡಿರುವುದರಿಂದ, ಆಗಸ್ಟ್ 2023 ರ ಮಾಹೆಯಲ್ಲಿ ಶೇ.6 ರಷ್ಟು ಋಣಾತ್ಮಕ ಬೆಳವಣಿಗೆ ಕಂಡುಬಂದಿರುತ್ತದೆ. ಆದರೆ, ಮದ್ಯದ ದರ ಏರಿಕೆಯಿಂದ ರಾಜಸ್ವದ ಸಂಗ್ರಹಣೆಯಲ್ಲಿ ಶೇ.14 ರಷ್ಟು ಬೆಳವಣಿಗೆ ಆಗಿರುತ್ತದೆ.

2022-23 ನೇ ಆರ್ಥಿಕ ಸಾಲಿನಲ್ಲಿ (ದಿನಾಂಕ:01-04-2022 ರಿಂದ 25-08-2022 ರವರೆಗೆ) 271.30 ಲಕ್ಷ ಪೆಟ್ಟಿಗೆಗಳಲ್ಲಿ ಮದ್ಯ ಮಾರಾಟವಾಗಿದ್ದು, 11, 887 ಕೋಟಿ ರೂ.ಗಳ ರಾಜಸ್ವ ಸಂಗ್ರಹಣೆಯಾಗಿದೆ. 2023-24 ನೇ ಆರ್ಥಿಕ ಸಾಲಿನಲ್ಲಿ 282.80 ಲಕ್ಷ ಪೆಟ್ಟಿಗೆಗಳಲ್ಲಿ ಮದ್ಯ ಮಾರಾಟವಾಗಿದ್ದು, 13,515 ಕೋಟಿ ರೂ. ರಾಜಸ್ವ ಸಂಗ್ರಹಣೆಯಾಗಿದೆ.

ಒಟ್ಟಾರೆ 2023-24 ಸಾಲಿನಲ್ಲಿ ಇಲ್ಲಿಯವರೆಗೆ ಮಾಹಿತಿಯನ್ನು ವಿಶ್ಲೇಷಿಸಿದಾಗ, ಮದ್ಯ ಮಾರಾಟದಲ್ಲಿ ಶೇ.4.24 ಬೆಳವಣಿಗೆ ಹೆಚ್ಚಳವಾಗಿದ್ದು, ಈ ಮೂಲಕ ರಾಜಸ್ವÀ ಸಂಗ್ರಹಣೆಯಲ್ಲೂ ಸಹ ರೂ.1628 ಕೋಟಿಗಳ ಹೆಚ್ಚಿನ ರಾಜಸ್ವ ಸಂಗ್ರಹವಾಗಿದ್ದು, ಶೇ.13.7 ರಷ್ಟು ಬೆಳವಣಿಗೆಯನ್ನು ಸಾಧಿಸಲಾಗಿರುತ್ತದೆ.


ಪ್ರತಿ ವರ್ಷದ ಮದ್ಯದ ದರಗಳನ್ನು ಏರಿಸುವಾಗ ಇದೇ ಪ್ರವೃತ್ತಿಯು ಕಂಡುಬಂದಿದ್ದು, ಮುಂದಿನ ದಿನಗಳಲ್ಲಿ ಮಾರಾಟವು ವಾಡಿಕೆಯಂತೆ ಯಥಾಸ್ಥಿತಿಗೆ ಬರುತ್ತದೆ. ಇದರಿಂದ ಮದ್ಯದ ದರಗಳನ್ನು ಹೆಚ್ಚಳ ಮಾಡುವ ಸಂದರ್ಭಗಳಲ್ಲಿ ಕೇವಲ ಒಂದು ನಿರ್ದಿಷ್ಟ ಅವಧಿಗೆ ಹೋಲಿಕೆÀ ಮಾಡಿ ಮದ್ಯ ಮಾರಾಟದ ಕುಂಠಿತ ಬಗ್ಗೆ ಅಂದಾಜಿಸುವುದು ಸರಿಯಾದ ಕ್ರಮವಾಗಿರುವುದಿಲ್ಲ.

ಮುಂದಿನ ದಿನಗಳಲ್ಲಿ ಮದ್ಯ ಮಾರಾಟ ಮತ್ತು ಅಬಕಾರಿ ರಾಜಸ್ವ ಸಂಗ್ರಹಣೆಯು ಯಥಾಸ್ಥಿತಿಗೆ ಬರುವುದಲ್ಲದೆ, ಸರ್ಕಾರವು ನಿಗದಿಪಡಿಸಿರುವ ರೂ. 36,000 ಕೋಟಿಗಳ ಅಬಕಾರಿ ರಾಜಸ್ವÀ ಗುರಿಗೆ ಶೇ.100 ರಷ್ಟು ಸಾಧಿಸಲು ಇಲಾಖೆ ವತಿಯಿಂದ ಕ್ರಮ ಕೈಗೊಳ್ಳಲಾಗುವುದು ಎಂದು ಅಬಕಾರಿ ಇಲಾಖೆಯು ಸ್ಪಷ್ಠೀಕರಣ ನೀಡಿದೆ.

Leave a Reply

Your email address will not be published. Required fields are marked *