ಎಂ.ಎಲ್.ಸುನಿಲ್ ಕುಮಾರ್‌ಗೆ ಪಿಎಚ್‌ಡಿ ಪದವಿ
ಮಂಡ್ಯ: ನಗರದ ಶಂಕರಗೌಡ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಎಂ.ಎಲ್.ಸುನಿಲ್ ಕುಮಾರ್ ಅವರು ಮಂಡಿಸಿರುವ `ಎಫೆಕ್ಟ್ ಆಫ್ ಆರ್ಗನೈಸೇಷನಲ್ ಕ್ಲೆöÊಮೇಟ್ ಅಂಡ್ ರೋಲ್ ಕಾನ್‌ಪ್ಲಿಕ್ಟ್ ಆನ್ ಪ್ರೊಫೆಷನಲ್ ಡೆವೆಲಪ್‌ಮೆಂಟ್ ಆಫ್ ಟೀಚರ್ ಎಜುಕೇರ‍್ಸ್’ ಎಂಬ ಪ್ರಬಂಧಕ್ಕೆ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ ಪಿಎಚ್‌ಡಿ ಪದವಿ ನೀಡಿ ಗೌರವಿಸಿದೆ.

ಕುವೆಂಪು ವಿವಿಯ ಅಸೋಸಿಯೇಟ್ ಪ್ರೊಫೆಸರ್ ಡಾ.ಎಚ್.ಪಿ.ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ ಎಂ.ಎಲ್.ಸುನಿಲ್ ಕುಮಾರ್ ಅವರು ಮಂಡ್ಯದ ಉದಯಗಿರಿ ನಿವಾಸಿಯಾಗಿದ್ದು, ಎಸ್.ಆರ್.ಲಕ್ಷö್ಮಣ ಮತ್ತು ಎಸ್.ಕೃಷ್ಣವೇಣಿ ದಂಪತಿಯ ಪುತ್ರರಾಗಿದ್ದಾರೆ.