ನಾರಾಯಣ ನೇತ್ರಾಲಯದ ದೃಷ್ಟಿಗಾಗಿ ಓಟ ಕಾರ್ಯಕ್ರಮದ ಅಭೂತಪೂರ್ವ ಯಶಸ್ಸು


ಬೆಂಗಳೂರು, ಸೆಪ್ಟೆಂಬರ್ 3: ಇದೇ ಆಗಸ್ಟ್ 25ರಿಂದ ಸೆಪ್ಟೆಂಬರ್ 8ನೇ ತಾರೀಕಿನ ತನಕ ನಡೆಯುತ್ತಿರುವ 38ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕದ ಭಾಗವಾಗಿ ಸೆಪ್ಟೆಂಬರ್ 2ರಂದು ನಾರಾಯಣ ನೇತ್ರಾಲಯವು “ರನ್ ಫಾರ್ ಸೈಟ್” (ದೃಷ್ಟಿಗಾಗಿ ಓಟ) ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿತು. ನೇತ್ರದಾನದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವುದಕ್ಕೆ ಮತ್ತು ಕಾರ್ನಿಯಲ್ ಅಂಧತ್ವವನ್ನು ಎದುರಿಸುವುದು ಹೇಗೆ ಎಂದು ಪ್ರಚುರ ಮಾಡುವುದಕ್ಕೆ, ಸುಮಾರು 68 ಲಕ್ಷ ಜನರ ಮೇಲೆ ಪರಿಣಾಮ ಬೀರುವ- ಭಾರತದಲ್ಲಿ ಗಂಭೀರವಾಗಿರುವ ಈ ಸಾರ್ವಜನಿಕ ಆರೋಗ್ಯ ಸಮಸ್ಯೆಯ ಕುರಿತು ಹೆಚ್ಚಿನ ಅರಿವು ಮೂಡಿಸಲು ಈ ಮಧ್ಯರಾತ್ರಿಯ ಓಟವನ್ನು ಆಯೋಜಿಸಲಾಗಿತ್ತು.

ನೇತ್ರದಾನದಂಥ ಉದಾತ್ತ ಉದ್ದೇಶದ ಬಗ್ಗೆ ಗಮನ ಸೆಳೆಯುವುದಕ್ಕೆ, ಇತರರ ಬದುಕಿನಲ್ಲಿ ಬೆಳಕು ಮೂಡಿಸುವುದಕ್ಕೆ ವಿವಿಧ ಹಿನ್ನೆಲೆಯ ವಯಸ್ಕರು ಹಾಗೂ ಮಕ್ಕಳನ್ನು ಸೇರಿದಂತೆ ವಿವಿಧ ವರ್ಗದವರನ್ನು ಒಟ್ಟುಗೂಡಿಸುವುದು ಈ ಓಟದ ಮುಖ್ಯ ಉದ್ದೇಶ ಆಗಿತ್ತು. ಇದಕ್ಕಾಗಿ ಆನ್‌ಲೈನ್‌ನಲ್ಲಿ 255 ಮತ್ತು ಸ್ಥಳದಲ್ಲೇ 28 ನೋಂದಣಿ ಆಯಿತು.

ಈ ಕಾರ್ಯಕ್ರಮದಲ್ಲಿ ಮೇಜರ್ ಜನರಲ್ ರವಿ ಮುರುಗನ್, ಎವಿಎಸ್ ಎಮ್, ಜಿಒಸಿ, ಕೆ ಅಂಡ್ ಕೆ ಉಪ ಪ್ರದೇಶ, ಡಾ.ಎಸ್.ಡಿ. ಶರಣಪ್ಪ, ಐಪಿಎಸ್, ಜಂಟಿ ಪೊಲೀಸ್ ಆಯುಕ್ತ (ಅಪರಾಧ), ಬೆಂಗಳೂರು ನಗರ, ನಟ ಮತ್ತು ಮಾಡೆಲ್ ಕೋವಿದ್ ಮಿತ್ತಲ್ ಭಾಗವಹಿಸಿದ್ದರು.

ಈ ಕಾರ್ಯಕ್ರಮಕ್ಕೆ ಮೇಜರ್ ಜನರಲ್ ರವಿ ಮುರುಗನ್ ಚಾಲನೆ ನೀಡಿದರು. ಆ ನಂತರ ಅವರು 5ಕೆ ಓಟದಲ್ಲಿ ಭಾಗವಹಿಸಿದರು. 5ಕೆ ಮತ್ತು 10ಕೆ ಓಟದಲ್ಲಿ ವಿಜೇತರಿಗೆ ನಗದು ಬಹುಮಾನಗಳನ್ನು ನೀಡಲಾಯಿತು.

5ಕೆ ಮಹಿಳೆಯರ ವಿಭಾಗ
ಪ್ರಥಮ ಬಹುಮಾನ: ಸ್ಮಿತಾ ಡಿ.ಆರ್.
ಎರಡನೇ ಬಹುಮಾನ: ಜಸ್ ಪ್ರೀತ್ ಕೌರ್
ತೃತೀಯ ಬಹುಮಾನ: ಪ್ರಿಯಾ ಶರ್ಮಾ

10ಕೆ ಮಹಿಳೆಯರ ವಿಭಾಗ
ಪ್ರಥಮ ಬಹುಮಾನ: ಪ್ರೀನು ಯಾದವ್
ದ್ವಿತೀಯ ಬಹುಮಾನ: ಚಂದನ ಕಲಿಕಾ
ತೃತೀಯ ಬಹುಮಾನ: ದೇವಿಕಾ

ಮೇಜರ್ ಜನರಲ್ ರವಿ ಮುರುಗನ್ ಮಾತನಾಡಿ, “ಈ ತಡ ರಾತ್ರಿಯಲ್ಲೂ ಸಮಾರಂಭದಲ್ಲಿ ಭಾಗವಹಿಸಲು ಇಲ್ಲಿಗೆ ಬಂದಿದ್ದಕ್ಕಾಗಿ, ದೈಹಿಕ ಶ್ರಮದ ಅಡೆತಡೆಗಳನ್ನು ನಿವಾರಿಸಿಕೊಳ್ಳುವುದಕ್ಕೆ ನೀವು ತೆಗೆದುಕೊಳ್ಳುವ ಪ್ರತಿ ಹೆಜ್ಜೆಗೂ ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ. ನಾವು ಈ ಜಾಗೃತಿಯನ್ನು ಮೂಡಿಸುವುದರೊಂದಿಗೆ ಬಯಸುವ ಜನರ ಮನಸ್ಸಿನಲ್ಲಿರುವ ನೇತ್ರದಾನದ ಬಗೆಗಿನ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಬೇಕು. ಆದ್ದರಿಂದ ನಮ್ಮ ಇಂದಿನ ಪ್ರಯತ್ನ ಅರ್ಹರ ಜೀವನದಲ್ಲಿ ಬೆಳಕನ್ನು ತರಲಿ ಎಂದು ಆಶಿಸುತ್ತೇವೆ ಎಂದರು.

ಬೆಂಗಳೂರು ನಗರದ ಜಂಟಿ ಪೊಲೀಸ್ ಕಮಿಷನರ್ (ಅಪರಾಧ) ಡಾ.ಎಸ್.ಡಿ.ಶರಣಪ್ಪ ಐಪಿಎಸ್ ಮಾತನಾಡಿ, ನೇತ್ರದಾನ ಮನುಕುಲಕ್ಕೆ ನೀಡುವ ದೊಡ್ಡ ದಾನ, ಮತ್ತು ಇದು ಅಮೂಲ್ಯವಾದುದು. ಸಮಾಜದ ಒಳಿತಿಗಾಗಿ ಪ್ರತಿಯೊಬ್ಬರೂ ನೇತ್ರದಾನದ ಬಗೆಗಿನ ತಮ್ಮ ನಿರ್ಧಾರವನ್ನು ಪರಿಗಣಿಸಬೇಕು. ನಮ್ಮ ಪ್ರೀತಿಯ ಡಾ. ರಾಜ್‌ಕುಮಾರ್ ಮತ್ತು ಅವರ ಕುಟುಂಬವು ನೇತ್ರದಾನದ ಉದ್ದೇಶಕ್ಕೆ ಅಪಾರ ಕೊಡುಗೆ ನೀಡಿ, ವೈಯಕ್ತಿಕವಾಗಿ ದೇಣಿಗೆ ನೀಡುವುದರೊಂದಿಗೆ ಮತ್ತು ನೇತ್ರದಾನದ ಉದ್ದೇಶವನ್ನು ಪ್ರಚಾರ ಮಾಡುವ ಮೂಲಕ ಸ್ಫೂರ್ತಿದಾಯಕ ಉದಾಹರಣೆಯಾಗಿದೆ,” ಎಂದರು.

“ಈ ವರ್ಷ ನೇತ್ರದಾನ ಪಾಕ್ಷಿಕ ಮತ್ತು ದೃಷ್ಟಿಗಾಗಿ ಓಟ ಕಾರ್ಯಕ್ರಮವು ನಾರಾಯಣ ನೇತ್ರಾಲಯಕ್ಕೆ ತುಂಬ ಮುಖ್ಯವಾಗಿದೆ. ಇದು ನಮ್ಮ ಸಂಸ್ಥಾಪಕರಾದ ಡಾ.ಕೆ. ಭುಜಂಗ ಶೆಟ್ಟಿ ಅವರ ನಿರಂತರವಾದ ದೃಷ್ಟಿಕೋನ ಮತ್ತು ಸ್ವತಃ ಅವರು ನೇತ್ರದಾನ ಮಾಡಿದ್ದಾರೆ. ಇದು ನೇತ್ರದಾನದ ಬಗ್ಗೆ ಅಚಲವಾದ ಬದ್ಧತೆಯನ್ನು ಸೂಚಿಸುತ್ತದೆ. ನಮ್ಮ ಎಲ್ಲ ಕಾರ್ಯಗಳಲ್ಲಿ ಮಾರ್ಗದರ್ಶನ ನೀಡುವ ಚೈತನ್ಯ ಮುಂದುವರಿಯುತ್ತದೆ,” ಎಂದು ನಾರಾಯಣ ನೇತ್ರಾಲಯದ ಸಿಇಒ ಎಸ್ ಕೆ ಮಿತ್ತಲ್ ‌ಹೇಳಿದರು.

ನೇತ್ರದಾನದ ಪ್ರತಿಜ್ಞೆ ಸ್ವೀಕಾರ ಮಾಡುವುದರೊಂದಿಗೆ ಈ ಓಟದ ಕಾರ್ಯಕ್ರಮ ಮುಕ್ತಾಯ ಕಂಡಿತು. ಒಬ್ಬರು ಕಣ್ಣು ದಾನ ಮಾಡುವುದೆಂದರೆ ಇತರ ವ್ಯಕ್ತಿಯ ಜೀವನದಲ್ಲಿ ಅತಿ ದೊಡ್ಡ ಬದಲಾವಣೆ ತಂದಂತೆ ಆಗುತ್ತದೆ. ಒಂದು ವೇಳೆ ನೇತ್ರದಾನ ಮಾಡುವುದಕ್ಕೆ ಬಯಸಿದಲ್ಲಿ 8884018800 ಸಂಖ್ಯೆಗೆ ಮಿಸ್ಡ್ ಕಾಲ್ ನೀಡಬಹುದು

ನಾರಾಯಣ ನೇತ್ರಾಲಯ ಎಂಬುದು ಸೂಪರ್-ಸ್ಪೆಷಾಲಿಟಿ ಕಣ್ಣಿನ ಆರೈಕೆ ಆಸ್ಪತ್ರೆ. ಇದು ಸಮಾಜದ ಎಲ್ಲ ಸ್ತರಗಳಿಗೆ ಗುಣಮಟ್ಟದ ಕಣ್ಣಿನ ಚಿಕಿತ್ಸೆಯನ್ನು ಒದಗಿಸುತ್ತದೆ. ಒಂದು ದಶಕದಿಂದ ಕರ್ನಾಟಕದ ಪ್ರಮುಖ ಕಣ್ಣಿನ ಚಿಕಿತ್ಸೆ ಆಸ್ಪತ್ರೆಯಾಗಿ ಗುರುತಿಸಿಕೊಂಡಿರುವ ನಾರಾಯಣ ನೇತ್ರಾಲಯದ ಅತ್ಯಾಧುನಿಕ ಸೌಲಭ್ಯಗಳು ಎರಡು 24×7 ಅಂತರರಾಷ್ಟ್ರೀಯ ಗುಣಮಟ್ಟದ ಕಣ್ಣಿನ ಬ್ಯಾಂಕ್‌ಗಳನ್ನು ಒಳಗೊಂಡಿವೆ – ಅವುಗಳ ಹೆಸರು ಡಾ. ರಾಜ್‌ಕುಮಾರ್ ಐ ಬ್ಯಾಂಕ್ ಮತ್ತು ಶಂಕರ್ ಆನಂದ್ ಐ ಬ್ಯಾಂಕ್ – ಇದು ರಾಜ್ಯದ ಕಣ್ಣಿನ ಸಂಗ್ರಹಕ್ಕೆ ಶೇ 45ಕ್ಕಿಂತ ಹೆಚ್ಚು ಕೊಡುಗೆ ನೀಡುತ್ತದೆ.

ಹೆಚ್ಚಿನ ಮಾಹಿತಿ ಮತ್ತು ನೇತ್ರದಾನ ಘೋಷಣೆಗೆ: ನೇತ್ರದಾನದ ಬಗ್ಗೆ ವಿವರಗಳಿಗಾಗಿ, ನಾರಾಯಣ ನೇತ್ರಾಲಯವನ್ನು ಮೊಬೈಲ್ ಸಂಖ್ಯೆ 97416 85555ನಲ್ಲಿ ಸಂಪರ್ಕಿಸಿ ಅಥವಾ ಆನ್‌ಲೈನ್‌ನಲ್ಲಿ ವೆಬ್ ಸೈಟ್ ವಿಳಾಸ- https://nneyefoundation.org/eye-donation-form/ ಇದರಲ್ಲಿ ದಾನಿಯಾಗಿ ನೋಂದಾಯಿಸಿ.

Leave a Reply

Your email address will not be published. Required fields are marked *