10ನೇ ಶತಮಾನದಲ್ಲಿ ರಾಮಾನುಜಾಚಾರ್ಯರು ಸರ್ವರಿಗೂ ದೀಕ್ಷೆ ಕೊಟ್ಟಿದ್ದರು

ಭಾರತವನ್ನು ವಿರೋಧಿಸುವುದು ಊಳಿಗಮಾನ್ಯ ಮನಸ್ಥಿತಿ: ಸಿ.ಟಿ.ರವಿ
ಬೆಂಗಳೂರು: ಭಾರತವನ್ನು ವಿರೋಧಿಸುವ ಮನಸ್ಥಿತಿಯು ಊಳಿಗಮಾನ್ಯ ಮನಸ್ಥಿತಿ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ವಿಶ್ಲೇಷಿಸಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಭಾರತ ಹೆಸರನ್ನು ಟೀಕಿಸುವವರು ವಸಾಹತುಶಾಹಿ ಮನಸ್ಥಿತಿಯಿಂದ ಹೊರಕ್ಕೆ ಬಂದಿಲ್ಲ ಎಂಬುದನ್ನು ಅದು ತೋರಿಸುತ್ತದೆ. ಮಹಾತ್ಮ ಗಾಂಧಿಯವರು ಬಹುಶಃ ಇದೇ ಕಾರಣಕ್ಕೆ ಕಾಂಗ್ರೆಸ್ಸನ್ನು ವಿಸರ್ಜಿಸಿ ಎಂದು ಕರೆಕೊಟ್ಟಿದ್ದರು ಎಂದು ಅಭಿಪ್ರಾಯಪಟ್ಟರು.
ಮುಂದೆ ಅಧ್ವಾನ ಮಾಡಬಹುದು; ಆಗ ಕಾಂಗ್ರೆಸ್ಸಿಗೇ ಕೆಟ್ಟ ಹೆಸರು ಬರಬಹುದು. ಕಾಂಗ್ರೆಸ್ ನೇತೃತ್ವ ವಹಿಸಿದ್ದ ತಮ್ಮ ವ್ಯಕ್ತಿತ್ವಕ್ಕೂ ಅಪಮೌಲ್ಯ ಆಗಬಹುದೆಂಬ ಕಾರಣಕ್ಕೆ ಅವರು ಕಾಂಗ್ರೆಸ್ ವಿಸರ್ಜನೆಗೆ ಕರೆಕೊಟ್ಟಿದ್ದರು ಎಂದರು. ಅದೆμÉ್ಟೂೀ ಲಕ್ಷ ಜನ ಕಾಂಗ್ರೆಸ್ ಕಾರ್ಯಕರ್ತರು ಹೆಮ್ಮೆಯಿಂದ ಭಾರತ್ ಮಾತಾ ಕೀ ಜೈ ಎಂದು ಕೂಗಿ ಲಾಠಿಯಿಂದ ಏಟು ತಿಂದಿದ್ದನ್ನು ಇಂದಿನ ಕಾಂಗ್ರೆಸ್ಸಿಗರು ನೆನಪಿಸಿಕೊಳ್ಳಬೇಕು. ಅದನ್ನೂ ಮರೆತಿರುವುದು ಇವತ್ತಿನ ಕಾಂಗ್ರೆಸ್ಸಿನ ದುರದೃಷ್ಟದ ಸಂಗತಿ ಎಂದು ತಿಳಿಸಿದರು. ಭಾರತ ಎಂಬ ಹೆಸರು, ಸನಾತನ ಧರ್ಮಕ್ಕೆ ಸಂಬಂಧಿಸಿ ಇದೀಗ ಚರ್ಚೆ ನಡೆಯುತ್ತಿದೆ ಎಂದ ಅವರು, ಭಾರತ ಎಂಬುದು ಇವತ್ತು ನಿನ್ನೆ ಇಟ್ಟ ಹೆಸರಲ್ಲ. ಸಾವಿರಾರು ವರ್ಷಗಳಿಂದ ನಮ್ಮ ದೇಶವನ್ನು ನಾವು ಭಾರತವೆಂದು ಗುರುತಿಸುತ್ತೇವೆ.
ಭರತ ಚಕ್ರವರ್ತಿಯಿಂದ ಭಾರತದ ಹೆಸರು ಬಂತೆಂದು ನಾವು ಪರಿಭಾವಿಸುತ್ತೇವೆ ಎಂದು ತಿಳಿಸಿದರು. ಭಾ ಎಂದರೆ ಬೆಳಕು. ಆ ಕಾರಣಕ್ಕೋಸ್ಕರ ಜ್ಞಾನವನ್ನು ನೀಡುವ ದೇಶ ಭಾರತ ಎಂಬ ಪರಿಭಾವನೆಯನ್ನೂ ಅವರು ಮುಂದಿಟ್ಟರು. ಚಿಕ್ಕಂದಿನಲ್ಲಿ ಕಲಿತ ‘ಸಿಂಹನೊಡನಾಡುತ್ತ ಹಲ್ಲುಗಳನೆಣಿಸಿದವ ಹಾಲ್ಗಲ್ಲ ಹಸುಳೆ ಇವ ನಮ್ಮ ಭರತ ಬಲ್ಲೆಯಾ ಕಿರಾತ ಅವನ ಛಲಬಲಭರಿತ ಒಂದೊಂದು ಜೀವವೂ ಭರತ ಸಹಜಾತ|’ ಎಂಬ ಹಾಡನ್ನು ಉಲ್ಲೇಖಿಸಿದ ಅವರು, ಭರತ ಸಿಂಹದ ಜೊತೆ ಆಟವಾಡಿ ಅದರ ಹಲ್ಲುಗಳನ್ನು ಎಣಿಸಿದವ ಎಂಬ ವಿಶ್ಲೇಷಿಸಿದರು. ಇದು ಭಾರತೀಯರ ಶೌರ್ಯ ಪರಿಚಯಿಸಿದ ಹಾಡು ಎಂದರು.
ವಿಷ್ಣು ಪುರಾಣದಲ್ಲೂ ಭಾರತÀದ ಕುರಿತು ಉಲ್ಲೇಖವಿದೆ ಎಂದು ವಿವರಿಸಿದರು. ಇವತ್ತು ನಿನ್ನೆ ಇಟ್ಟ ಹೆಸರು ಇದಲ್ಲ; ಬಂಕಿಂಚಂದ್ರ ಚಟರ್ಜಿ ಅವರ ಬರಹ, ಮಹಾತ್ಮ ಗಾಂಧೀಜಿ ಅವರ ಜೀವನಚರಿತ್ರೆಯನ್ನೂ ಅವರು ಉಲ್ಲೇಖಿಸಿದರು. ಬ್ರಿಟಿಷರ ವಿರುದ್ಧ ಹೋರಾಡುವವರಿಗೆ ಮಂತ್ರವಾಗಿದ್ದ ಭಾರತ್ ಮಾತಾ ಕೀ ಜೈ ಎನ್ನುವುದು ಇಂದು ನಿನ್ನೆಯದಲ್ಲ. ಈಗ್ಯಾಕೆ ವಿವಾದದ ದೃಷ್ಟಿ ಎಂಬುದು ಅರ್ಥವಾಗುತ್ತಿಲ್ಲ. ನಮ್ಮ ಪರಂಪರೆಯ ಸಾಮಥ್ರ್ಯವೇ ಅರಗಿಸಿಕೊಳ್ಳುವುದು.
‘ಇಂಡಿಯ’ವನ್ನು ನಾವು ವ್ಯಾವಹಾರಿಕವಾಗಿ ಅರಗಿಸಿಕೊಂಡಿದ್ದೇವೆ ಎಂದರಲ್ಲದೆ ಅಗಸ್ತ್ಯ- ವಾತಾಪಿ ಕಥೆಯನ್ನೂ ಮುಂದಿಟ್ಟರು. ವಾತಾಪಿ ಜೀರ್ಣೋಭವ ಎಂಬಂತೆ ನಾವು ಹಲವು ಸಂಗತಿ ಅರಗಿಸಿಕೊಂಡಿದ್ದೇವೆ ಎಂದರು. ಪರ್ಶಿಯನ್ನರು ಬಂದಾಗ ನಮಗೆ ಅಸ್ತಿತ್ವದ ಪ್ರಶ್ನೆ ಬಂತು. ಪರಕೀಯರ ಆಕ್ರಮಣ ಮಾಡಿದಾಗ ಸಿಂಧೂ ಇದ್ದುದು ಹಿಂದೂ ಆಯಿತು. ಗ್ರೀಕರು ಇದನ್ನು ಇಂಡಸ್ ಎಂದರು. ಬ್ರಿಟಿಷರ ಬಾಯಲ್ಲಿ ಅದು ಇಂಡಿಯ ಆಗಿದೆ. ಅದಕ್ಕೆ ಸಹಸ್ರಮಾನಗಳ ಇತಿಹಾಸ ಇಲ್ಲ. ವಸಾಹತುಶಾಹಿ ಬ್ರಿಟಿಷರ ಆಳ್ವಿಕೆ ಬಳಿಕ ಈ ಹೆಸರು ಬಂದಿದೆ ಎಂದು ವಿಶ್ಲೇಷಿಸಿದರು.
ಭಾರತ ಎಂದರೆ ನಮ್ಮ ಅಸ್ತಿತ್ವ; ನಮ್ಮ ಅಸ್ಮಿತೆ. ಅಸ್ಮಿತೆ, ಅಸ್ತಿತ್ವ ಕಳಕೊಂಡರೆ ನಾವ್ಯಾರು ಎಂದು ಪ್ರಶ್ನಿಸಿದರು. ವ್ಯಕ್ತಿ ಆತ್ಮಹೀನನಾದರೆ ಏನೆಂದು ಕರೆಯುತ್ತೇವೋ ಹಾಗೇ ಆಗುತ್ತದೆ. ಅದನ್ನು ಯೋಚಿಸಿ ಎಂದು ತಿಳಿಸಿದರು. ಭಾರತವನ್ನೇ ವಿರೋಧಿಸಿ ಮಾತನಾಡಲು ಬಂದವರ ಕುರಿತು ಪ್ರಸ್ತಾಪಿಸಿದ ಅವರು, ಮೊನ್ನೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಹರಕೆ ತೀರಿಸಲು ಚಾಮುಂಡೇಶ್ವರಿ ದೇವಸ್ಥಾನಕ್ಕೆ ಹೋಗಿದ್ದರು. ‘ಭರತ ವμರ್Éೀ ಭರತ ಖಂಡೇ’ ಎಂಬ ಸಂಕಲ್ಪ ಮಾಡಿ ಪೂಜೆ ಮಾಡಿಸಿದ್ದರು. ಇದು ಸಾವಿರಾರು ವರ್ಷಗಳಿಂದ ಬಂದಿದೆ ಎಂದು ವಿವರಿಸಿದರು. ಅರಬ್‍ನಲ್ಲೋ, ಇರಾನ್‍ನಲ್ಲೋ ಇರಾಕಿನಲ್ಲೋ ಹುಟ್ಟಿದ್ದರೆ. ಉದಯನಿಧಿ ಸ್ಟಾಲಿನ್ ಹೇಳಿಕೆಯಿಂದ ಸನಾತನ ಧರ್ಮದ ಚರ್ಚೆ ಆರಂಭವಾಗಿದೆ. ಚರ್ಚೆ, ಪ್ರಶ್ನೆ, ಟೀಕೆಗೆ ಅವಕಾಶ ಇರುವುದು ಸನಾತನ ಧರ್ಮದ ಅಂದ ಎಂದ ಅವರು, ಉದಯನಿಧಿ ಅವರು ಈ ವಿಚಾರದಲ್ಲಿ ಅದೃಷ್ಟವಂತ ಎಂದರು.
ಸನಾತನ ಧರ್ಮೀಯರು ಬಹುಸಂಖ್ಯಾತರಿರುವ ದೇಶದಲ್ಲಿ ಹುಟ್ಟಿದ್ದು ಅವರ ಅದೃಷ್ಟ ಎಂದು ನುಡಿದರು. ಬೇರೆ ನಂಬಿಕೆಗಳ ಬಗ್ಗೆ ಅಸಹಿಷ್ಣುತೆ ಇರುವ ಮಧ್ಯಪ್ರಾಚ್ಯ ದೇಶಗಳಲ್ಲಿ ಹುಟ್ಟಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು ಎಂದು ಕೇಳಿದರು. ಅಲ್ಲಿನ ಮತ, ಸಂಪ್ರದಾಯದ ಕುರಿತು ಪ್ರಶ್ನಿಸಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು? ಯಾರೋ ತಲೆಗೆ ಬೆಲೆ ಕಟ್ಟಿರುವುದು ನೋಡಿದೆ. ನಮ್ಮ ದೇಶದಲ್ಲಿ ಅಷ್ಟು ಸುಲಭವಾಗಿ ಯಾರನ್ನೂ ಕೊಲ್ಲುವುದಿಲ್ಲ; ನಮ್ಮದು ಸಹಿಷ್ಣ್ಣು ದೇಶ, ಅದೃಷ್ಟವಂತ ನೀನು ಎಂದು ನುಡಿದರು. ಇಲ್ಲದಿದ್ದರೆ ನಿನ್ನ ಖೇಲ್ ಖತಂ ಆಗುತ್ತಿತ್ತು ಎಂದರು.
ವಿಶ್ವ ಒಂದು ಕುಟುಂಬ ಎಂಬುದು ಸನಾತನ ಧರ್ಮದ ಮೌಲ್ಯ. ಅಹಂ ಬ್ರಹ್ಮಾಸ್ಮಿ ಅಂದರೆ ನಾನೇ ಬ್ರಹ್ಮ, ನಿಮ್ಮಲ್ಲಿ ಎಲ್ಲರಲ್ಲೂ ಬ್ರಹ್ಮ ತತ್ವ ಇದೆ, ಇದು ಎಲ್ಲರಲ್ಲೂ ಬ್ರಹ್ಮನನ್ನು ಕಾಣುವ ದರ್ಶನ, ಇದು ಈ ಧರ್ಮದ ಮೌಲ್ಯ. ಅಣುರೇಣು ತೃಣಕಾಷ್ಠಗಳಲ್ಲೂ ದೇವರನ್ನು ಕಾಣುವುದು ಸನಾತನ ಧರ್ಮದ ಮೌಲ್ಯ. ಭೇದಭಾವ ಈ ಧರ್ಮದ ಭಾಗವಲ್ಲ ಎಂದು ತಿಳಿಸಿದರು. ಭೇದಭಾವ ಮಾಡುವ ಮಾನಸಿಕತೆಯನ್ನು ನಾವು ದೂರ ಮಾಡಬೇಕು ಎಂದರು.
ಧರ್ಮ ಎಂದರೆ ವಿಕಸನಗೊಂಡ ಜೀವನಮೌಲ್ಯ ಡಾ.ಪರಮೇಶ್ವರ್ ಅವರು ಹುಟ್ಟಿಸಿದ್ದು ಯಾರೆಂದು ಕೇಳಿದ್ದಾರೆ. ಸನಾತನ ಎಂದರೆ ಅದರ ಅರ್ಥ ಆದಿ ಮತ್ತು ಅಂತ್ಯ ಇಲ್ಲದೇ ಇರುವುದು. ಹಾಗಾಗಿ ಹುಟ್ಟಿಸಿದ್ದು ಎಂಬ ಪ್ರಶ್ನೆ ಬರುವುದಿಲ್ಲ. ಧರ್ಮ ಮತ್ತು ಮತಕ್ಕೆ ದೊಡ್ಡ ವ್ಯತ್ಯಾಸ ಇದೆ. ಮತಗಳಿಗೆ ವಾರೀಸುದಾರಿಕೆ ಇದೆ. ಹುಟ್ಟಿದ ದಿನಾಂಕ ಇದೆ. ಹುಟ್ಟಿಸಿದ ಅಪ್ಪ ಯಾರೆಂದು ಇದೆ. ಧರ್ಮಕ್ಕೆ ಅದಿಲ್ಲ ಎಂದು ಸಿ.ಟಿ.ರವಿ ಅವರು ವಿವರಿಸಿದರು.
ಧರ್ಮ ಎಂದರೆ ವಿಕಸನಗೊಂಡ ಜೀವನಮೌಲ್ಯ. ಯಾರು ಆ ಸಂಸ್ಕøತಿಯನ್ನು ಮುಂದುರೆಸುತ್ತಾರೋ ಅವರೆಲ್ಲರೂ ವಾರೀಸುದಾರರು. ಹುಟ್ಟಿದ ದಿನಾಂಕ ಇಲ್ಲದ ಹಾಗೇ ಸಾವಿನ ದಿನಾಂಕವೂ ಇಲ್ಲ. ಅದು ಸನಾತನ ಎಂದು ತಿಳಿಸಿದರು. ಗಂಗೆ ಹುಟ್ಟುವಾಗ ಸ್ಫಟಿಕ ಜಲ. ಅದು ವಾರಣಾಸಿ, ಕಲ್ಕತ್ತಕ್ಕೆ ಬಂದಾಗ ಮಲಿನವಾಗುತ್ತದೆ. ಗಂಗೆಗೆ ಕೊಳಕು ನೀರನ್ನು ಬಿಟ್ಟವರ ದೋಷವದು. ಕೊಳಕು ಮನಸ್ಥಿತಿಯನ್ನು ಶುದ್ಧಗೊಳಿಸಬೇಕಿದೆ. ಅದು ಸಹಸ್ರಾರು ವರ್ಷಗಳಿಂದ ನಡೆದೇ ಇದೆ ಎಂದು ವಿವರ ನೀಡಿದರು. ಅಸ್ಪøಶ್ಯತೆ ಸನಾತನ ಧರ್ಮದ ಭಾಗವಲ್ಲ. ಶಂಕರಾಚಾರ್ಯರು ಚಾಂಡಾಲನಲ್ಲೂ ಶಿವನನ್ನು ಕಂಡಿದ್ದರು. 10ನೇ ಶತಮಾನದಲ್ಲಿ ರಾಮಾನುಜಾಚಾರ್ಯರು ಸರ್ವರಿಗೂ ದೀಕ್ಷೆ ಕೊಟ್ಟಿದ್ದರು. ಬಸವಣ್ಣನವರು ಕೂಡ ಜಾತಿ ಉದಯಿಸಿದ ಕುರಿತು ಕೆಲಸವನ್ನು ಉಲ್ಲೇಖಿಸಿದ್ದರು.
(ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ, ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ ! ಕರ್ಣದಲ್ಲಿ ಜನಿಸಿದವರುಂಟೇ ಜಗದೊಳಗೆ !? ಇದು ಕಾರಣ ಕೂಡಲಸಂಗಮದೇವ, ಲಿಂಗಸ್ಥಲವನರಿದವನೇ ಕುಲಜನು) ಪ್ರಿಯಾಂಕ್ ಖರ್ಗೆ ಅವರು ಜಾತೀಯತೆ ಹೋಗಲಾಡಿಸುವ ಕುರಿತು ಹೇಳಿದ್ದರೆ ಅದಕ್ಕೆ ನನ್ನ ಬೆಂಬಲವೂ ಇದೆ. ಧರ್ಮವನ್ನು ಹೋಗಲಾಡಿಸಿದರೆ ಅಧರ್ಮ ಉಳಿಯುತ್ತದೆ ಎಂದು ಎಚ್ಚರಿಸಿದರು. ಅಸ್ಪøಶ್ಯತೆ, ಜಾತೀಯತೆ ಹೋಗಲಾಡಿಸಲು ನಿರಂತರ ಪ್ರಯತ್ನ ನಡೆದಿದೆ ಎಂದ ಅವರು, ಮಹದೇವಪ್ಪನವರ ಹೇಳಿಕೆ ಗಮನಿಸಿದ್ದಾಗಿ ತಿಳಿಸಿದರು.
ಶೂದ್ರರಿಗೆ ಶಿಕ್ಷಣ ಸಿಕ್ಕಿದ್ದು ಮೆಕಾಲೆ ಬಂದ ನಂತರ ಎಂಬ ಹೇಳಿಕೆ ಸರಿಯಾಗಿಲ್ಲ. ‘ನೀವು ರಾಮಾಯಣ ಬರೆದ ವಾಲ್ಮೀಕಿಗೆ ಅಪಮಾನ ಮಾಡುತ್ತೀರಿ. ಅವರು ಅನಕ್ಷರ ಕುಕ್ಷಿಯೇ’ ಎಂದು ಕೇಳಿದರು. ವೇದವ್ಯಾಸರು, ತಿರುವಳ್ಳವರ್, ಸರ್ವಜ್ಞ ಯಾವ ಜಾತಿಗೆ ಸೇರಿದವರು? ಋಷಿ ಮುನಿಗಳಲ್ಲಿ ಬಹಳ ಜನ ವಿವಿಧ ಜಾತಿಗಳಲ್ಲಿ ಹುಟ್ಟಿದ್ದರು. ನಮ್ಮ ದೇಶ ಗುಣವನ್ನೇ ಗೌರವಿಸಿದೆ. ಇವತ್ತಿನ ಶಿಕ್ಷಣ ಪದ್ಧತಿ ಬ್ರಿಟಿಷರ ಬಳುವಳಿ. ಮುಂಚೆ ಇದ್ದ ಶಿಕ್ಷಣ ವ್ಯವಸ್ಥೆಯಡಿ ತಾರತಮ್ಯ ಇರಲಿಲ್ಲ ಎಂದರು. ಸಿದ್ದರಾಮಯ್ಯನವರು ಚಾತುರ್ವರ್ಣದ ಕುರಿತು ಮಾತನಾಡಿದ್ದಾರೆ. ಶೂದ್ರರು ಕಾಲಿನಿಂದ ಹುಟ್ಟಿದರು ಎಂದಿದ್ದಾರೆ. ಶ್ರೀಕೃಷ್ಣ ಹುಟ್ಟಿದ್ದು ಶೂದ್ರನಾಗಿಯೇ. ಚಾತುರ್ವರ್ಣ ನಮ್ಮ ಸೃಷ್ಟಿ. ಹುಟ್ಟಿನಿಂದ ಅಲ್ಲ ಎಂದು ಕೃಷ್ಣ ಹೇಳಿದ್ದಾನೆ (ಚಾತುರ್-ವಣ್ಯರ್ಂ ಮಯಾ ಸೃಷ್ಟಂ ಗುಣ-ಕರ್ಮ-ವಿಭಾಗಶಃ). ತಲೆತಗ್ಗಿಸಿ ಕಾಲಿಗೆ ನಮಸ್ಕರಿಸುವುದನ್ನು ಜಾಣಮರೆವಿನ ಸಿದ್ದರಾಮಯ್ಯ ಮರೆತಿದ್ದಾರೆ ಎಂದು ನುಡಿದರು. ಜನರಿಗೆ ನಿಮ್ಮ ಹೆಸರನ್ನು ಬದಲಾಯಿಸುತ್ತಾರೆ ಎಂದು ಹೆದರಿಸುವ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ತಮ್ಮದೇ ಕ್ಷೇತ್ರದ ಕಾಪಾಲಿ ಬೆಟ್ಟದ ಹೆಸರನ್ನು ಬದಲಾಯಿಸಿದಾಗ ಯಾವ ರೀತಿ ನಡೆದುಕೊಂಡಿರಿ ಎಂಬುದನ್ನು ದೇಶ ಕಂಡಿದೆ.ಸಮಾಜದ ಅಡಿಪಾಯವೇ ಶೂದ್ರ. ಅದಕ್ಕಾಗಿಯೇ ಕಾಲಿಗೆ ನಮಸ್ಕರಿಸುತ್ತಾರೆ. ನೀವು ತಪ್ಪರ್ಥ ಬರುವಂತೆ ಅರ್ಧ ಮಾತನಾಡುತ್ತೀರಿ ಎಂದು ಟೀಕಿಸಿದರು. ಕ್ಷತ್ರಿಯ ವಿಶ್ವಾಮಿತ್ರ ಬ್ರಹ್ಮಜ್ಞಾನ ಪಡೆದು ಬ್ರಾಹ್ಮಣನಾದ. ಅಂಥ ನೂರು ಉದಾಹರಣೆಗಳಿವೆ ಎಂದರು. ವೇದ ಕಾಲಕ್ಕೆ ಹಿಂದಿರುಗಲು ವಿವೇಕಾನಂದರು ಹೇಳಿದ್ದರು. ಅಲ್ಲಿ ಅಸ್ಪøಶ್ಯತೆ, ಜಾತೀಯತೆ ಇರಲಿಲ್ಲ. ವ್ಯಕ್ತಿಗತ ಹಿತಾಸಕ್ತಿ ಜಾಸ್ತಿ ಆದಾಗ ಸಮಸ್ಯೆ ಆಗುತ್ತದೆ.
ಕಾಂಗ್ರೆಸ್ ಒಂದು ಕುಟುಂಬದ ಪ್ರಭಾವದಿಂದ ಹೊರಕ್ಕೆ ಬರಲು ಇಷ್ಟಪಡುವುದಿಲ್ಲ. ಭವಿಷ್ಯದಲ್ಲಿ ಈ ಪ್ರಭಾವಲಯದಲ್ಲಿ ಸೇರಿದವರೆಲ್ಲ ಒಂದು ಜಾತಿ ಆಗುತ್ತಾರೆ. ಸ್ವ ಹಿತಾಸಕ್ತಿಗಾಗಿ ಅದನ್ನೇ ಒಂದು ಜಾತಿಯಾಗಿ ಬದಲಿಸಿದರು ಎಂದು ತಿಳಿಸಿದರು. ಜಾತಿಯ ಲಾಭ ಪಡೆದು ಜಾತಿಯ ವಿರುದ್ಧ ಹೋರಾಟ ಮಾಡಲಾಗುವುದಿಲ್ಲ. ಸನಾತನ ಧರ್ಮದಲ್ಲಿ ದೋಷವಿಲ್ಲ ಎಂದು ತಿಳಿಸಿದರು. ಗೊಲ್ಲ ಜಾತಿಯ ಕೃಷ್ಣನನ್ನು ಭಗವಂತನಾಗಿ ನೋಡಿ ನಾವು ಸಮಾಜಕ್ಕೆ ಸಂದೇಶ ಕೊಟ್ಟಿದ್ದೇವೆ. ಶಿವನು ಸ್ಮಶಾನ ವಾಸಿ. ವರ್ಗ ತಾರತಮ್ಯ ಮಾಡುವವರಿಗೆ ಶಿವ ಸಂದೇಶ ಕೊಡುತ್ತಾನೆ.
ಜಾತಿಯನ್ನು ಸಂರಕ್ಷಿಸಿ ಜಾತೀಯತೆ ಅಳಿಸಲು ಅಸಾಧ್ಯ. ನಿಮ್ಮ ಬೂಟಾಟಿಕೆ ನಿಲ್ಲಿಸಿ ಎಂದು ಸವಾಲೆಸೆದರು. ಜಾತ್ಯತೀತತೆ ಹೆಸರು ಹೇಳಿಕೊಂಡು ಸನಾತನ ಧರ್ಮಕ್ಕೆ ಅಪಮಾನ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ. ಅನಿಷ್ಟಗಳು, ಕೆಟ್ಟದ್ದು ಹೋಗಲೇಬೇಕು. ಆದರೆ, ನನ್ನ ದೇಶ, ನನ್ನ ಪರಂಪರೆ ಎಷ್ಟು ಮತಿ ಇದೆಯೋ ಅಷ್ಟು ಮತಗಳಿಗೆ ಅವಕಾಶ ಕೊಟ್ಟಿದೆ. ಹಾಗಾಗಿ ನೂರಾರು ಮತಗಳು ಇಲ್ಲಿ ಹುಟ್ಟಿವೆ. ತಾರತಮ್ಯಗಳನ್ನು ಹೋಗಲಾಡಿಸಲು ನಮ್ಮ ಬದ್ಧತೆ ಇದೆ ಎಂದು ತಿಳಿಸಿದರು.
ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಎಂ.ಜಿ. ಮಹೇಶ್, ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *