2020–21 ಮತ್ತು 2021–22ನೇ ಸಾಲಿನಮಾಮ್ ಇನ್‌ಸ್ಪೈರ್ ಪ್ರಶಸ್ತಿ ಪ್ರದಾನ ಸಮಾರಂಭ

ಮೀಡಿಯಾ ಅಲುಮ್ನಿ ಅಸೋಸಿಯೇಷನ್ ಆಫ್‌ ಮಂಗಳಗಂಗೋತ್ರಿಯ ವತಿಯಿಂದ ಪದವಿ ಹಾಗೂ ಪತ್ರಿಕೋದ್ಯಮ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪ್ರತಿವರ್ಷ ನೀಡಲಾಗುವ ಮಾಮ್ ಇನ್‌ಸ್ಪೈರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ, ಸೆಪ್ಟೆಂಬರ್ 10, ಭಾನುವಾರ ಬೆಳಗ್ಗೆ 11.00ಕ್ಕೆ ನಡೆಯಲಿದೆ.


ಈ ಸಮಾರಂಭದ ಉದ್ಘಾಟನೆ ಮತ್ತು ಪ್ರಶಸ್ತಿ ಪ್ರದಾನವನ್ನು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಸನ್ಮಾನ್ಯ ಶ್ರೀ ಯು.ಟಿ.ಖಾದರ್ ಅವರು ನೆರೆವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕನ್ನಡಪ್ರಭ-ಏಷ್ಯಾನೆಟ್ ಸುವರ್ಣ ನ್ಯೂಸ್‌ನ ಪ್ರಧಾನ ಸಂಪಾದಕರಾಗಿರುವ ಶ್ರೀ ರವಿ ಹೆಗಡೆ, ಯುನಿವರ್ಸಲ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ ನ ಮುಖ್ಯಸ್ಥರಾಗಿರುವ ಶ್ರೀ ಆರ್. ಉಪೇಂದ್ರ ಶೆಟ್ಟಿ, ಕೆ.ಆರ್.ಪುರಂ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಪ್ರತಿಭಾ ಪಾರ್ಶ್ವನಾಥ್, ಕರ್ನಾಟಕ ಕಲಾದರ್ಶಿನಿ ನಿರ್ದೇಶಕ ಶ್ರೀ ಶ್ರೀನಿವಾಸ ಸಾಸ್ತಾನ ಭಾಗವಹಿಸಲಿದ್ದಾರೆ. .
ಯಕ್ಷಗಾನ-ಮಹಿಳೆ-ಮಾಧ್ಯಮ ಚಿಂತನ ಮಂಥನ
ಇದೇ ಸಮಾರಂಭದಲ್ಲಿ ಬೆಳಿಗ್ಗೆ 11.15ರಿಂದ ಕರ್ನಾಟಕ ಮಹಿಳಾ ಯಕ್ಷಗಾನ ಬೆಂಗಳೂರು ಸಂಘಟನೆಯ ಸಹಯೋಗದಲ್ಲಿ, ಯಕ್ಷಗಾನ-ಮಹಿಳೆ-ಮಾಧ್ಯಮ ಎಂಬ ಚಿಂತನ-ಮಂಥನ ನಡೆಯಲಿದೆ. ಯಕ್ಷಗಾನ ಸಂಶೋಧಕ, ಪತ್ರಕರ್ತ ಪೃಥ್ವಿರಾಜ ಕವತ್ತಾರು,. ಅಜೀಂ ಪ್ರೇಂಜಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಎ.ನಾರಾಯಣ, ಯಕ್ಷಗಾನ ಸಂಶೋಧಕ ಡಾ.ಆನಂದರಾಮ ಉಪಾಧ್ಯಾಯ, ಕರ್ನಾಟಕ ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಶ್ರೀಮತಿ ಪದ್ಮಾ ಶಿವಮೊಗ್ಗ, ಹಿರಿಯ ಯಕ್ಷಗಾನ ಕಲಾವಿದೆ ಶ್ರೀಮತಿ ಅನಸೂಯಾ, ಕರ್ನಾಟಕ ಮಹಿಳಾ ಯಕ್ಷಗಾನದ ಕಾರ್ಯದರ್ಶಿ ಶ್ರೀಮತಿ ಕೆ. ಗೌರಿ ವಿಷಯ ಮಂಡನೆ ಮಾಡಲಿದ್ದಾರೆ. ಪ್ರಜಾವಾಣಿ ಡಿಜಿಟಲ್‌ ಎಡಿಟರ್‌ ಶ್ರೀ ಅವಿನಾಶ್‌ ಬೈಪಾಡಿತ್ತಾಯ ಸಮನ್ವಯಕಾರರಾಗಿ ಪಾಲ್ಗೊಳ್ಳಲಿದ್ದಾರೆ.

‘ಮಾಮ್’ ಸಂಘಟನೆ
ಮೀಡಿಯಾ ಅಲುಮ್ನಿ ಅಸೋಸಿಯೇಷನ್ ಆಫ್ ಮಂಗಳಗಂಗೋತ್ರಿ, ಇದು ಮಂಗಳೂರು ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಹಳೆ ವಿದ್ಯಾರ್ಥಿಗಳ ಸಂಘಟನೆ. 1998ರಲ್ಲಿ ಆರಂಭವಾದ ಈ ಸಂಘಟನೆ ಮಾಧ್ಯಮ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ, ಕಾರ್ಯಾಗಾರ, ಉದ್ಯೋಗ ನೆರವು, ಶೈಕ್ಷಣಿಕ ಮತ್ತು ಔದ್ಯೋಗಿಕ ವಲಯಗಳ ನಡುವೆ ಸಮನ್ವಯ ಸಾಧಿಸುವ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಮಾಧ್ಯಮ ಕ್ಷೇತ್ರದ ಸಾಧಕರನ್ನು ಗೌರವಿಸಿದೆ. ಜೊತೆಗೆ ರಕ್ತದಾನ, ಜನಜಾಗೃತಿಯಂತಹ ಸಾಮಾಜಿಕ ಕಳಕಳಯ ಕಾರ್ಯಕ್ರಮಗಳು, ಕಲೆ, ರಂಗಭೂಮಿ, ಯಕ್ಷಗಾನ ಮತ್ತಿತರ ಪ್ರದರ್ಶಕ ಪ್ರಕಾರಗಳಗೂ ವೇದಿಕೆಯನ್ನೊದಗಿಸಿದೆ. ಮಾಧ್ಯಮ, ಉದ್ಯಮ, ರಾಜಕಾರಣ ಮತ್ತು ಸರ್ಕಾರಿ ಕ್ಷೇತ್ರಗಳಲ್ಲಿ ನಿರ್ಣಾಯಕ ಸ್ಥಾನದಲ್ಲಿರುವ ಅನೇಕರು ಮಾಮ್ ಸದಸ್ಯರಾಗಿ, ಕಾರ್ಯಕ್ರಮಗಳಿಗೆ ಬೆಂಬಲ ನೀಡುತ್ತಿದ್ದಾರೆ. ಪ್ರತಿ ವರ್ಷ ಸದಸ್ಯಬಲ ವೃದ್ಧಿಸಿ ಹೊಸ ಪರಿಕಲ್ಪನೆಗಳು ಸಾಕಾರಗೊಳ್ಳುತ್ತಿವೆ.
ಮಾಮ್ ಇನ್‌ಸ್ಪೈರ್‌ ಪ್ರಶಸ್ತಿ
ಮಂಗಳೂರು ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗಕ್ಕೆೆ 2014ರಲ್ಲಿ 25 ವರ್ಷ ತುಂಬಿದ ಸಂಭ್ರಮದ ಹಿನ್ನೆಲೆಯಲ್ಲಿ ‘ಮಾಮ್’ ಸಂಘಟನೆ ವಿದ್ಯಾಾರ್ಥಿಗಳಿಗಾಗಿ ಮಾಮ್, ಇನ್‌ಸ್ಪೈರ್ ಪ್ರಶಸ್ತಿ ಪ್ರದಾನ ಯೋಜನೆಯನ್ನು ಆರಂಭಿಸಿತು. 2015ರಿಂದ ಇಂದಿನವರೆಗೆ ಈ ಪ್ರಶಸ್ತಿಯನ್ನು ಮಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿರುವ ಕಾಲೇಜುಗಳ ಪತ್ರಿಕೋದ್ಯಮ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹಾಗೂ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಯಾವುದೇ ಪದವಿಯ ಪ್ರತಿಭಾವಂತ ವಿದ್ಯಾಾರ್ಥಿಗಳಿಗೆ ನೀಡಲಾಗುತ್ತದೆ. ಮಾಧ್ಯಮ ಕ್ಷೇತ್ರದ ಅನುಭವಿಗಳು ಮತ್ತು ವಿಶ್ವವಿದ್ಯಾಲಯದ ಪ್ರಾಾಧ್ಯಾಪಕರನ್ನೊಳಗೊಂಡ ಸಮಿತಿಯು ಪ್ರಶಸ್ತಿ ವಿಜೇತರ ಆಯ್ಕೆ ಮಾಡುತ್ತದೆ. ಪ್ರಶಸ್ತಿಯು ಕ್ರಮವಾಗಿ ತಲಾ 5 5 ಸಾವಿರ, 8 2,500 ನಗದು ಮತ್ತು ಪ್ರಮಾಣ ಪತ್ರವನ್ನು ಒಳಗೊಂಡಿದೆ.

Leave a Reply

Your email address will not be published. Required fields are marked *