ರಕ್ತದಾನವೇ ಎಲ್ಲಕ್ಕಿಂತ ಶೇಷ್ಠವಾದ ದಾನ : ಸೀಕಲ್ ರಾಮಚಂದ್ರಗೌಡ
ವರದಿ : ಚಿಕ್ಕತೇಕಹಳ್ಳಿ ಡಿ ಶಿವಕುಮಾರ್
ವಾರ್ತಾಜಾಲ,ಶಿಡ್ಲಘಟ್ಟ
ರಕ್ತದಾನಕ್ಕಿಂತ ಶ್ರೇಷ್ಟವಾದ ದಾನ ಮತ್ತೊಂದಿಲ್ಲ, ಇದು ಮಾನವನ ರಕ್ತ, ಮಾನವನಿಂದ ಮಾತ್ರ ರಕ್ತ ಉತ್ಪತ್ತಿಯಾಗುತ್ತದೆ ಎಂದು ಸಮಾಜ ಸೇವಕ ಸೀಕಲ್ ರಾಮಚಂದ್ರಗೌಡ ತಿಳಿಸಿದರು.







ತಾಲ್ಲೂಕಿನ ದಿಬ್ಬೂರಹಳ್ಳಿ ವೆಂಕಟೇಶ್ವರ ಶಾಲೆ(ಬಿಜಿಎಸ್) 75 ನೇ ವರ್ಷದ ಅಮೃತ ಮಹೋತ್ಸವದ ಅಂಗವಾಗಿ ಬೃಹತ್ ರಕ್ತದಾನ ಶಿಬಿರವನ್ನು ಬಿಜೆಪಿ ವತಿಯಿಂದ ಭಾನುವಾರ ಆಯೋಜಿಸಿದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರಕ್ತದಾನ ಎಲ್ಲಕ್ಕಿಂತ ಶೇಷ್ಠವಾದ ದಾನ ಎಂದು ಭಾವಿಸಿ, ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ರಕ್ತ ಸಂಗ್ರಹಿಸಿ ಅದನ್ನು ಅಗತ್ಯವಿರುವ ಜನರಿಗೆ ನೀಡಿ ಅವರ ಜೀವ ಉಳಿಸುವ ಕೆಲಸ ಮಾಡಬೇಕು. ಆರೋಗ್ಯವಂತ ಯುವಕರು ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನವನ್ನು ಮಾಡಬಹುದು. ಇತ್ತಿಚಿನ ದಿನಗಳಲ್ಲಿ ರಸ್ತೆ ಅಪಘಾತಗಳು, ಶಸ್ತ್ರ ಚಿಕಿತ್ಸೆ ಮತ್ತಿತರ ಸಂದರ್ಭಗಳಲ್ಲಿ ವೈದ್ಯರು ರೋಗಿಗೆ ರಕ್ತದ ಅಗತ್ಯವಿದೆ. ತಕ್ಷಣ ರಕ್ತ ತನ್ನಿ ಎಂದು ರೋಗಿಯ ಸಂಬಂಧಿಗಳಿಗೆ ಹೇಳುತ್ತಾರೆ. ಅಂತಹ ಸಂದರ್ಭಗಳಲ್ಲಿ ಸಕಾಲದಲ್ಲಿ ರಕ್ತ ಸಿಕ್ಕರೆ ರೋಗಿಯ ಪ್ರಾಣ ಉಳಿಯುತ್ತದೆ ಎಂದು ತಿಳಿಸಿದರು.
ಯಲಹಂಕ ಲಯನ್ಸ್ ರಕ್ತದಾನ ಕ್ಲಬ್ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಬೆಳಗ್ಗೆಯಿಂದ ಸಂಜೆ 4 ಗಂಟೆಯವೆರಗೂ ಒಟ್ಟು 70 ಯುನಿಟ್ ರಕ್ತ ಸಂಗ್ರಹವಾಗಿದೆ.
ಈ ಸಂದರ್ಭದಲ್ಲಿ ತಾಲ್ಲೂಕು ಗ್ರಾಮಾಂತರ ಅಧ್ಯಕ್ಷ ಸುರೇಂದ್ರ ಗೌಡ,ಮಾಜಿ ಶಾಸಕ ರಾಜಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಣಜಿತ್ ಕುಮಾರ್,ಜಿಲ್ಲಾ ಮಹಿಳಾ ಅಧ್ಯಕ್ಷೆ ನರ್ಮದಾರೆಡ್ಡಿ, ಆನಂದಗೌಡ,ಕನಕಪ್ರಸಾದ್,ನಟರಾಜ್, ಆಶಾಕಾರ್ಯಕರ್ತೆಯರು,ಹಾಗೂ ಮತ್ತಿತರರು ಇದ್ದರು.