ಭಜನ-ಪ್ರವಚನ-ಸಂಕೀರ್ತನ

ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಚಾಮರಾಜಪೇಟೆಯ ರಾಘವೇಂದ್ರ ಕಾಲೋನಿಯಲ್ಲಿರುವ ಮುಳುಬಾಗಿಲು ಶ್ರೀ ಶ್ರೀಪಾದರಾಜ ಮಠದಲ್ಲಿ ಸೆಪ್ಟೆಂಬರ್ 12 ರಿಂದ 15ರ ವರೆಗೆ ಧಾರ್ಮಿಕ/ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು ಅವುಗಳ ವಿವರಗಳು ಈ ರೀತಿ ಇವೆ :
ಸೆಪ್ಟೆಂಬರ್ 12 ರಿಂದ 14ರ ವರೆಗೆ ಪ್ರತಿದಿನ ಸಂಜೆ 6-00ಕ್ಕೆ ಕ್ರಮವಾಗಿ ಶ್ರೀ ವ್ಯಾಸತೀರ್ಥ ಭಜನಾ ಮಂಡಳಿ, ಶ್ರೀ ಗೋವರ್ಧನ ಭಜನಾ ಮಂಡಳಿ, ಚಂದ್ರಿಕಾ ಭಜನಾ ಮಂಡಳಿಯ ಸದಸ್ಯರುಗಳಿಂದ “ಹರಿಭಜನೆ” ಹಾಗೂ ಇದೇ ದಿನಾಂಕಗಳಂದು ಪ್ರತಿದಿನ ಸಂಜೆ 7-00ಕ್ಕೆ ಶ್ರೀ ಎಸ್.ಎಂ. ಪ್ರಣವಾಚಾರ್ಯರಿಂದ “ಭಾಗವತದ ಸಂದೇಶಗಳು” ವಿಷಯವಾಗಿ ಧಾರ್ಮಿಕ ಪ್ರವಚನ.
ಸೆಪ್ಟೆಂಬರ್ 15, ಶುಕ್ರವಾರ ಸಂಜೆ 6-30ಕ್ಕೆ “ಹರಿನಾಮ ಸಂಕೀರ್ತನೆ” ಕಾರ್ಯಕ್ರಮದಲ್ಲಿ ಶ್ರೀಮತಿ ರಮ್ಯಾ ಸುಧೀರ್ ರವರಿಂದ ಗಾಯನ, ಶ್ರೀ ಅಮಿತ್ ಶರ್ಮಾ ರವರಿಂದ ಕೀ-ಬೋರ್ಡ್, ಶ್ರೀ ಸರ್ವೋತ್ತಮ ರವರಿಂದ ತಬಲಾ ವಾದನವನ್ನು ಏರ್ಪಡಿಸಿದ್ದು, ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಟಿ ಟಿ ಡಿ ಹೆಚ್ ಡಿ ಪಿ ಪಿ ಯ ಕಾರ್ಯಕ್ರಮಗಳ ನಿರ್ವಹಣಾಧಿಕಾರಿ ಡಾ|| ಪಿ. ಭುಜಂಗರಾವ್ ಅವರು ವಿನಂತಿಸಿದ್ದಾರೆ.

Leave a Reply

Your email address will not be published. Required fields are marked *