ಬಾಲ್ಡ್ವಿನ್ ಬಾಲಕರ ಪ್ರೌಢಶಾಲೆಯ ಮೊಹಮ್ಮದ್ ಹಸ್ನೈನ್ ಗೆ ಕಂಚಿನ ಪದಕ
2023ರ ಸಾಲಿನ ಸೆಪ್ಟೆಂಬರ್ 9 ಮತ್ತು 10 ರಂದು ತಿರುವನಂತಪುರಂನ ಜಿಮ್ಮಿ ಜಾರ್ಜ್ ಕ್ರೀಡಾಂಗಣದಲ್ಲಿ ನಡೆದ ದಕ್ಷಿಣ ಭಾರತ ಕರಾಟೆ ಪಂದ್ಯಾವಳಿಯಲ್ಲಿ ಸೆನ್ಸೈ ಝೈನ್ ನೇತೃತ್ವದ ಸುಡೋಕಾನ್ ಮಾರ್ಷಲ್ ಆರ್ಟ್ಸ್ ಅಕಾಡೆಮಿಯಲ್ಲಿ ಕರಾಟೆ ಅಭ್ಯಾಸ ಮಾಡುತ್ತಿರುವ ಬಾಲ್ಡ್ವಿನ್ ಬಾಲಕರ ಪ್ರೌಢಶಾಲೆಯ ಮೊಹಮ್ಮದ್ ಹಸ್ನೈನ್ ಕಂಚಿನ ಪದಕವನ್ನು ಗಳಿಸಿದರು. ಈ ಕರಾಟೆ ಪಂದ್ಯಾವಳಿಯಲ್ಲಿ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಪುದುಚೇರಿ, ತೆಲಂಗಾಣ ಭಾಗವಹಿಸಿದ್ದವು.

ದಕ್ಷಿಣ ಭಾರತ ಕರಾಟೆ ಫೆಡರೇಶನ್ (ದಕ್ಷಿಣ ಭಾರತ ಆಡಳಿತ ಮಂಡಳಿ) ಪ್ರಕಾರ ಹಸ್ನೇನ್ ಅವರು ದಕ್ಷಿಣ ಭಾರತದಲ್ಲಿ ತಮ್ಮ ವರ್ಗಕ್ಕೆ 3 ನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಭಾರತದ ಅತ್ಯಂತ ಕಿರಿಯ ಕರಾಟೆ ಕ್ರೀಡಾಪಟು ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಶಾಲೆಯ ಪ್ರಾಂಶುಪಾಲರು ಮತ್ತು ಅಕ್ಸ್ಕಾ ಅಧ್ಯಕ್ಷ ಅರುಣ್ ಮಾಚಯ್ಯ ಮತ್ತು ಪ್ರಧಾನ ಕಾರ್ಯದರ್ಶಿ ಭಾರ್ಗವ್ ರೆಡ್ಡಿ ಅವರಿಗೆ ವಿಶೇಷ ಧನ್ಯವಾದಗಳು ಎಂದು ಕರಾಟೆ ತರಬೇತಿ ಪಡೆಯುತ್ತಿರುವ ಮಕ್ಕಳ ಪೋಷಕರು ತಳಿಸಿದ್ದಾರೆ.
