ಮತ್ತೊಮ್ಮೆ ನುಡಿದಂತೆ ನಡೆದಿದ್ದೇವೆ

ದೇಶದಲ್ಲೇ ಮೊದಲ ಬಾರಿಗೆ ನಮ್ಮ ಸರ್ಕಾರವು ಗಿಗ್‌ ಕಾರ್ಮಿಕರಿಗೆ ( ಡೆಲಿವರಿ ಬಾಯ್ಸ್ ) ರೂ.2 ಲಕ್ಷ ಜೀವವಿಮೆ ಮತ್ತು ರೂ.2 ಲಕ್ಷ ಅಪಘಾತ ಪರಿಹಾರ ವಿಮಾ ಸೌಲಭ್ಯ ಕಲ್ಪಿಸಿ ಆದೇಶ ಹೊರಡಿಸಿದೆ. ನಿತ್ಯ ಗ್ರಾಹಕರಿಗೆ ಆಹಾರ, ದಿನಸಿ, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ಮುಟ್ಟಿಸುವ ಡೆಲಿವರಿ ಬಾಯ್‌ ಗಳು ನಿಗದಿತ ಸಮಯದಲ್ಲಿ ಆರ್ಡರ್ ತಲುಪಿಸಬೇಕೆಂಬ ಕಾರಣಕ್ಕಾಗಿ ಸಂಚಾರ ದಟ್ಟಣೆಯ ನಡುವೆ ಪ್ರಾಣವನ್ನು ಪಣಕ್ಕಿಟ್ಟು ವಾಹನ ಚಾಲನೆ ಮಾಡುತ್ತಿದ್ದಾರೆ. ಇಂತಹ ಅಪಾಯಕಾರಿ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಶ್ರಮಜೀವಿಗಳ ನಿತ್ಯದ ಬದುಕಿನ ಸವಾಲುಗಳನ್ನು ಅರ್ಥೈಸಿಕೊಂಡು, ಅಪಘಾತ, ಪ್ರಾಣಹಾನಿ ಸಂಭವಿಸಿದಾಗ ಅವರ ನೆರವಿಗೆ ಧಾವಿಸಬೇಕು ಎಂಬ ಉದ್ದೇಶದಿಂದ ಅಪಘಾತ ವಿಮೆ ಹಾಗೂ ಜೀವ ವಿಮಾ ಸೌಲಭ್ಯ ನೀಡುವ ವಿನೂತನ ಕಾರ್ಯಕ್ರಮವನ್ನು ಜಾರಿಮಾಡಿ ಮತ್ತೊಮ್ಮೆ ನುಡಿದಂತೆ ನಡೆದಿದ್ದೇವೆ.

– ಮುಖ್ಯಮಂತ್ರಿ

Leave a Reply

Your email address will not be published. Required fields are marked *