ನಿಯಮ ಉಲ್ಲಂಘನೆಯ ಹೋಟೆಲ್, ಪಬ್, ಡಿಸ್ಕೋಥೆಕ್, ಹುಕ್ಕಾ ಬಾರ್‌ಗಳ ವಿರುದ್ದ ವಿಶೇಷ ಕಾರ್ಯಾಚರಣೆ
ಬೆಂಗಳೂರು ನಗರದಲ್ಲಿರುವ ಪಬ್, ಡಿಸ್ಕೋಥೆಕ್, ಬಾರ್ & ರೆಸ್ಟೋರೆಂಟ್‌ಗಳಲ್ಲಿ ಕೋಟ್ಪಾ ಕಾಯೆಯಡಿಯಲ್ಲಿ ಪ್ರತ್ಯೇಕ ಧೂಮಪಾನ ವಲಯ ನಿರ್ಮಾಣ ಮಾಡುವ ನಿಭಂದನೆಗಳಿದ್ದು, ಸದರಿ ನಿಬಂಧನೆಗಳನ್ನು ಉಲ್ಲಂಘಿಸಿ, ಅವಧಿ ಮೀರಿ ತೆರೆದಿರುವುದು, 18 ವರ್ಷದ ಕೆಳಗಿರುವವರಿಗೆ ತಂಬಾಕು/ಸಿಗರೇಟು, ಮದ್ಯ ಮಾರಾಟ ಮಾಡುತ್ತಿರುವ ಕುರಿತು ಸಾರ್ವಜನಿಕರಿಂದ ಹಲವಾರು ದೂರುಗಳು ಬರುತ್ತಿದ್ದು, ಈ ಹಿನ್ನೆಲೆಯಲ್ಲಿ
16-09-2023 ರಂದು ಬೆಂಗಳೂರು ನಗರದಾದ್ಯಂತ ಕೋಟ್ಪಾ ಕಾಯ್ದೆ, ಜೆ.ಜೆ.ಆಕ್ಟ್ ಹಾಗೂ ಅಬಕಾರಿ ಕಾಯ್ದೆಯನ್ನು ಉಲ್ಲಂಘಿಸಿದ್ದ ಹೋಟೆಲ್‌ಗಳು, ಪಬ್, ಡಿಸ್ಕೋಥೆಕ್‌ಗಳು, ಹುಕ್ಕಾ ಬಾರ್‌ಗಳ ಮೇಲೆ ದಾಳಿ ನಡೆಸಿ, ಈ ಕೆಳಕಂಡAತೆ ಪ್ರಕರಣಗಳನ್ನು ದಾಖಲು ಮಾಡಲಾಗಿದೆ ಹಾಗೂ ಕೋಟ್ಪಾ ಕಾಯ್ದೆಯಡಿಯಲ್ಲಿ ದಂಡವನ್ನು ವಿಧಿಸಲಾಗಿರುತ್ತದೆ.

ಪರಿಶೀಲನೆ ನಡೆಸಿದ ಸ್ಥಳಗಳ ಸಂಖ್ಯೆ. 633
ನಿಯಮ ಉಲ್ಲಂಘನೆ ಮಾಡಿರುವ ಸ್ಥಳಗಳ ಸಂಖ್ಯೆ. 131
ಜೆಜೆ ಆಕ್ಟ್ ಅಡಿಯಲ್ಲಿ ದಾಖಲು ಮಾಡಿದ ಪ್ರಕರಣಗಳ ಸಂಖ್ಯೆ. 3
ಅಬಕಾರಿ ಕಾಯ್ದೆ ಅಡಿಯಲ್ಲಿ ದೂರು ದಾಖಲಿಸಿರುವ ಪ್ರಕರಣಗಳ ಸಂಖ್ಯೆ. 2
ಕೋಟ್ಪಾ ಆಕ್ಟ್ ಅಡಿಯಲ್ಲಿ ದಾಖಲು ಮಾಡಿದ ಪ್ರಕರಣಗಳ ಸಂಖ್ಯೆ. 126
ಕೋಟ್ಪಾ ಆಕ್ಟ್ ಅಡಿಯಲ್ಲಿ ದಾಖಲು ಮಾಡಿದ ಲಘು ಪ್ರಕರಣಗಳ ಸಂಖ್ಯೆ. 2300
ನಿಯಮ ಉಲ್ಲಂಘಿಸಿರುವ ಹೋಟೆಲ್, ಪಬ್, ಡಿಸ್ಕೋಥೆಕ್‌ಗಳ ವಿರುದ್ದ ಈ ರೀತಿಯ ದಾಳಿಯು ಮುಂದುವರೆದಿದ್ದು ಹಾಗೂ ಪದೇ ಪದೇ ನಿಯಮ ಉಲ್ಲಂಘಿಸುವವರ ಮಾರಾಟ ಪರವಾನಗಿಯನ್ನು ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುವುದು.
ಬೆಂಗಳೂರು ನಗರದಲ್ಲಿರುವ ಹೋಟೆಲ್‌ಗಳು, ಬಾರ್ & ರೆಸ್ಟೋರೆಂಟ್‌ಗಳು, ಪಬ್, ಡಿಸ್ಕೋಥೆಕ್
ಮಾಲೀಕರಿಗೆ ಸೂಚನೆ.
ಕಾನೂನು ಅಡಿಯಲ್ಲಿ ನೀಡಿರುವ ಪರವಾನಗಿಯಲ್ಲಿರುವ ನಿಯಮ/ಷರತ್ತು/ಸೂಚನೆಗಳನ್ನು ತಪ್ಪದೇ ಪಾಲಿಸುವುದು.
ಕೋಟ್ಪಾ ಕಾಯ್ದೆಯ ಸೆಕ್ಷನ್ 6 ರ ಆದೇಶದಂತೆ 18 ವರ್ಷದ ಕೆಳಗಿರುವವರಿಗೆ ತಂಬಾಕು/ಸಿಗರೇಟು, ಮಾರಾಟ ಮಾಡಬಾರದು.
ಅಬಕಾರಿ ನಿಯಮ ಕಲಂ. 10(1)(ಇ) ರನ್ವಯ 21 ವರ್ಷದ ಕೆಳಗಿನ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡಿದಲ್ಲಿ ಕಲಂ. 77 ಜೆ.ಜಿ. ಆಕ್ಟ್ ರೀತ್ಯಾ ಕ್ರಮ ಕೈಗೊಳ್ಳಲಾಗುವುದು.
ಸಾರ್ವಜನಿಕರಿಗೆ ಸೂಚನೆ: ಧೂಮಪಾನ ಮತ್ತು ಮಧ್ಯಪಾನ ನಿಷೇಧಿಸಲ್ವಟ್ಟ ಸಾರ್ವಜನಿಕ ಸ್ಥಳಗಳಲ್ಲಿ ನಿಯಮ ಉಲ್ಲಂಘಿಸುವ ಸಾರ್ವಜನಿಕರ ವಿರುದ್ದವೂ ಕೂಡ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು.