ಬೆಸ್ಕಾಂ ಸಿ2 ಉಪ ವಿಭಾಗದಲ್ಲಿ ಶ್ರೀ ಗಣೇಶ ಉತ್ಸವ ಆಚರಣೆಆಚರಿಸಲಾಯಿತು
ಶ್ರೀ ಅಭಯ ಆಂಜನೇಯ ಸ್ವಾಮಿ ಸೇವಾ ಸಮಿತಿ ಸಹಯೋಗದಲ್ಲಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯು ಮಲ್ಲೇಶ್ವರಂನ 13ನೇ ಅಡ್ಡರಸ್ತೆಯಲ್ಲಿರುವ ಕಛೇರಿಯ ಆವರಣದಲ್ಲಿ, ಸೆಪ್ಟೆಂಬರ್ 18 ರಿಂದ 20 ರವರೆಗೆ ಶ್ರೀ ಗಣೇಶ ಉತ್ಸವವನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದ ಜವಾಬ್ದಾರಿಯನ್ನು ಮಲ್ಲೇಶ್ವರಂ ವಿಭಾಗದ, ಸಿ2 ಉಪ ವಿಭಾಗದ ಎಇಇ ನಾಗೇಶ್ ಮತ್ತು ಇತರರು ಯಶಸ್ವಿಯಾಗಿ ನಿರ್ವಹಿಸಿದರು, ಎಂಟಿ ಮತ್ತು ಕೇಬಲ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಮತ್ತು ಪರವಾನಗಿ ಪಡೆದ ವಿದ್ಯುತ್ ಗುತ್ತಿಗೆದಾರರು ಕೇಸರಿ ಬಣ್ಣದ ಉಡುಗೆ ಗಳನ್ನು ಧರಿಸಿ, ಶ್ರದ್ದಾ-ಭಕ್ತಿಯಿಂದ ಪಾಲ್ಗೊಂಡರು.

ಕೊನೆಯ ದಿನದಂದು ಮಲ್ಲೇಶ್ವರದ ಪ್ರಮುಖ ರಸ್ತೆಗಳಲ್ಲಿ ಶ್ರೀ ವಿನಾಯಕ ಮೂರ್ತಿಯ ಮೆರವಣಿಗೆಯನ್ನು ದಾರಿಯುದ್ಧಕ್ಕೂ ವಾದ್ಯ ನೃತ್ಯಗಳೊಂದಿಗೆ ನಡೆಸಿ, ಶ್ರೀ ಗಣೇಶನ ಮೂರ್ತಿಯನ್ನು ಸ್ಯಾಂಕಿ ಟ್ಯಾಂಕ್ ನೀರಿನಲ್ಲಿ ವಿಸರ್ಜಿಸಲಾಯಿತು. ಮೆರವಣಿಗೆಗೂ ಮುನ್ನ ಸಾರ್ವಜನಿಕರಿಗೆ ಅನ್ನದಾನದ ವ್ಯವಸ್ಥೆಯನ್ನು ಸಹ ಮಂಡಳಿಯ ವತಿಯಿಂದ ಮಾಡಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿದರು.