ತಿರುಪತಿ ಬಾಲಾಜಿ ಸನ್ನಿಧಾನದಲ್ಲಿ ಬ್ರಹ್ಮೋತ್ಸವ ಸಮಾರಂಭ

ತಿರುಮಲ ತಿರುಪತಿಯಲ್ಲಿ 9ದಿನಗಳ ಕಾಲ ಬ್ರಹ್ಮೋತ್ಸವ ಕಾರ್ಯಕ್ರಮ. ಟಿಟಿಡಿ ಅಧ್ಯಕ್ಷರಾದ ಕರುಣಾಕರ ರೆಡ್ಡಿಯವರ,ಧರ್ಮ ರೆಡ್ಡಿ ಜಿ, ಎಸ್‌ವಿಬಿಸಿಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಎಂಡಿ. ಸಿಇಒ ಷಣ್ಮುಖಂ ಜಿ. TTD SVBC ನಿರ್ದೇಶಕಿ ಶ್ರೀಮತಿ ವಸಂತ ಕವಿತಾ (ಕೆಸಿಆರ್‌ರೆಡ್ಡಿ ಮೊಮ್ಮಗಳು) 2 ದಿನಗಳ ಬ್ರಹ್ಮೋಸ್ತವದಲ್ಲಿ ಪಾಲ್ಗೊಂಡರು. ಶ್ರೀಮತಿ ವಸಂತ ಕವಿತಾ ರವರು ಮಾತನಾಡಿ ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕ, ಬಾಲಾಜಿ, ವೆಂಕಟೇಶ್ವರ ಸ್ವಾಮಿಯ ಪ್ರಪಂಚದಾದ್ಯಂತದ ಭಕ್ತರು ಇದ್ದಾರೆ.

2023ರಲ್ಲಿ ಅಧಿಕ ಮಾಸ ಇರುವುದರಿಂದ ಎರಡು ಬಾರಿ ಬ್ರಹ್ಮೋತ್ಸವವನ್ನು ಅದ್ದೂರಿಯಾಗಿ ಅಚರಿಸಲಾಗುತ್ತದೆ.

ಬ್ರಹ್ಮೋತ್ಸವದ ಎಲ್ಲಾ ಒಂಬತ್ತು ದಿನಗಳು ವಿಶೇಷವಾಗಿವೆ, ವಿಶೇಷವಾಗಿ ಗರುಡ ವಾಹನ, ಸ್ವರ್ಣ ರಥ. ಜನಸಂದಣಿ ಹೆಚ್ಚಿರುತ್ತದೆ ಆದರೆ ದರ್ಶನಂ ಟಿಕೆಟ್‌ಗಳು ಎಲ್ಲಾ ಉಚಿತ ಮತ್ತು ಸರ್ವದರ್ಶನ. ವೆಂಕಟೇಶ್ವರ ಭಕ್ತಿ ಚಾನೆಲ್ ನಿರ್ದೇಶಕಿಯಾಗಿ ಬ್ರಹ್ಮೋತ್ಸವದ ಸಮಯದಲ್ಲಿ, ಚಿನ್ನದ ರಥವನ್ನು ಎಳೆಯುವ ಸೌಭಾಗ್ಯ ನನ್ನದಾಗಿತ್ತು.

ಅನೇಕ ನೃತ್ಯ ತಂಡಗಳೊಂದಿಗೆ ನೃತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ. ಡ್ರಮ್ಸ್ ತಂಡದೊಂದಿಗೆ ಸಹ. ಜೊತೆಗೆ SVBC ಯ ಸಿಬ್ಬಂದಿಯನ್ನು ಪ್ರೇರೇಪಿಸುವ ಮೂಲಕ, ಸಮಯ ಕಳೆಯುವ ಮೂಲಕ ಪ್ರೋತ್ಸಾಹಿಸಿದೆನು ವೆಂಕಟೇಶ್ವರ ದರುಶನ ಪಡೆಯಲು ಕೊಟ್ಯಂತರ ಭಕ್ತರು ಕಾಯುತ್ತಿದ್ದಾರೆ.

ಅದ್ದರಿಂದ ಹಿರಿಯ ನಾಗರಿಕರು ಮತ್ತು ಕೆಲಸದ ಒತ್ತಡದಿಂದ ಬರಲು ಸಾಧ್ಯವಾಗುವುದಿಲ್ಲ ಅದ್ದರಿಂದ ಟಿಟಿಡಿ ದೇವಸ್ಥಾನ ವತಿಯಿಂದ ಎಸ್.ವಿ.ಬಿ.ಸಿ ಚಾನಲ್ ಆರಂಭಿಸಲಾಗಿದ್ದು ಅದು ನಾಲ್ಕು ಭಾಷೆಗಳಲ್ಲಿ ತಿರುಪತಿ ದೇವಸ್ಥಾನದಲ್ಲಿ ನಡೆಯುವ ಬ್ರಹ್ಮೋತ್ಸವ ಕಾರ್ಯಕ್ರಮ ನೇರ ಪ್ರಸಾರ ಮಾಡಲಿದೆ ಇದರ ಸದಪಯೋಗ ಪಡೆದುಕೊಂಡು ಮನೆಯಲ್ಲಿ ಕುಳಿತು ಬಾಲಾಜಿ ದರ್ಶನ ಪಡೆಯಬಹುದು.

Leave a Reply

Your email address will not be published. Required fields are marked *