ತೂಬಗೆರೆ ಗ್ರಾಮ ಪಂ. ತೂಬಗೆರೆ ಗ್ರಾಮದಲ್ಲಿ ಸರ್ಕಾರಿ ಜಾಗ ಒತ್ತುವರಿ: ಪೊಲೀಸ್ ಭದ್ರತೆಯಲ್ಲಿ ತೆರವು
ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೂಬಗೆರೆ ಗ್ರಾಮದಲ್ಲಿ ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ದಲಿತ ಕುಟುಂಬಗಳ ಗುಡಿಸಲುಗಳನ್ನು ಇಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೆಂಕಟೇಶ್ ನೇತೃತ್ವದಲ್ಲಿ ಪೊಲೀಸ್ ಭದ್ರತೆಯಲ್ಲಿ ತೆರವುಗೊಳಿಸಲಾಯಿತು.


ಒತ್ತುವರಿ ತೆರವು ಮಾಡಲು ಬಂದ ಅಧಿಕಾರಿಗಳು ಹಾಗೂ ಪೊಲೀಸರಿಗೆ ದಲಿತ ಕುಟುಂಬಗಳಿಂದ ತೀವ್ರ ವಿರೋಧ ವ್ಯಕ್ತವಾಯಿತು ನಾವು ಈ ಪ್ರಸ್ತುತ ಸ್ಥಳದಲ್ಲಿ ಕಳೆದ ಎರಡು ಮೂರು ವರ್ಷಗಳಿಂದ ಜೀವನ ಮಾಡುತ್ತಿದ್ದೇವೆ. ನಮಗೆ ಯಾವುದೇ ರೀತಿಯ ಸೌಲಭ್ಯಗಳಿಲ್ಲ ದಲಿತರು ಎಂದು ಇತರೆ ಸವರ್ಣೀಯರು ಯಾರು ಸಹ ಬಾಡಿಗೆ ಮನೆ ನೀಡುವುದಿಲ್ಲ ಆದಕಾರಣ ನಾವು ಈ ಸ್ಥಳದಲ್ಲಿ ಗುಡಿಸಿಲುಗಳನ್ನು ಹಾಕಿಕೊಂಡು ಜೀವನ ಮಾಡುತ್ತಿದ್ದೇವೆ ನಮ್ಮಂತ ಬಡವರಿಗೆ ಪಂಚಾಯಿತಿ ಒಕ್ಕಲೆಬ್ಬಿಸಿ ನಮ್ಮ ಜಾಗಗಳನ್ನು ತೆರವುಗೊಳ್ಳಿಸಿದರು ಪಂಚಾಯತಿ ಸದಸ್ಯರೇ ಹೇಳುತ್ತಾರೆ ಹೋಗಿ ಅಲ್ಲಿ ಗುಡಿಸಲು ಹಾಕಿಕೊಳ್ಳಿ ಸ್ವಲ್ಪ ದಿನ ಕಳೆದಂತೆ ಹಕ್ಕು ಪತ್ರ ಕೊಡುತೇವೆ ಎಂದು ಹೇಳಿದು ಈಗ ಬಂದು ಅವರೆ ತೆರವುಗೊಳ್ಳಿಸಿದ್ದಾರೆ ಹಾಗು ಈ ಊರಿನಲ್ಲಿ ಸವರ್ಣಿಯರಿಗೆ ಮತ್ತು ಸದಸ್ಯರು ತಮ್ಮ ಜಾತಿಯ ಪ್ರತಿ ಮನೆಗೆ ಎರಡು ಮೂರು ಮನೆಗಳನ್ನು ಹಣ ಪಡೆದು ನೀಡಿದ್ದಾರೆ ಹಣ ನೀಡದವರಿಗೆ ನವೇಶನಗಳನ್ನು ನೀಡಿಲ್ಲಾ ಇ ಪಂಚಾಯತಿಯಲ್ಲಿ ಹಲವು ಆಕ್ರಮಗಳು ನಡೆದಿದ್ದು ಅವುಗಳನ್ನು ಯಾರಾದರು ಪ್ರಶ್ನಿಸಿದರೆ ಅವರಿಗೊಂದು ನಿವೇಶನಗಳನ್ನು ನೀಡುತ್ತಾರೆ ಇಲ್ಲಿ ಮತ ನೀಡಿದ ಜನರಿಗಿಂತ ಹಣ ನೀಡುವ ಮತ್ತು ಅವರ ಜಾತಿಯವರಿಗೆ ಮತ್ತು ಅವರ ಹಿಂಬಾಲಕರಿಗೆ ಮಾತ್ರ ಎಲ್ಲ ಸವಲತ್ತುಗಳನ್ನು ನೀಡುತ್ತಾರೆ ನಮ್ಮಂತವರಿಗೆ ನೀಡುವುದಿಲ್ಲಾ ಎಂದು ಆರೋಪಿಸಿದರು.
ಕಳೆದ ಎರಡು ಬಾರಿ ತೂಬಗೆರೆ ಗ್ರಾಮ ದಲ್ಲಿ ನೀವೇಶನಗಳು ಮತ್ತು ಮನೆಗಳನ್ನು ವಿತರಿಸಿದ್ದಾಗ ಪ್ರತಿಶತ 50 ಭಾಗಂಶಕ್ಕಿಂತಲು ಹೆಚ್ಚು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ನೀಡಲಾಗಿದ್ದು ಈಗ ಮರಳಿ ಎರಡು ತಿಂಗಳಿಂದ ಇತ್ತಿಚೆಗೆ ಸರ್ಕಾರಿ ಜಾಗದಲ್ಲಿ ನಾಲ್ಕು ಮರಗಳನ್ನು ಊತು ಅದಕ್ಕೆ ಕವರ್ ಹಾಕಿ ಅತಿಕ್ರಮಿಸಿಕೊಳ್ಳಲು ಮುಂಗಡಜಾಗ ಮಾಡಿಕೊಂಡಿರುವುದು ಗಮನಕ್ಕೆ ಬಂದಿದ್ದು ಇವುಗಳಲ್ಲಿ ಯಾರು ವಾಸವಾಗಿರುವುದಿಲ್ಲಾ ಹಾಗು ಈಗಾಗಲ್ಲೆ ಸ್ತಳಿಯ ಪ್ರತಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಪ್ರತಿ ಮನೆಗೆಳ ಸದಸ್ಯರಿಗೂ ಮತು ಅನ್ಯ ಗ್ರಾಮಗಳಿಂದ ತವರು ಮನೆಗೆ ಬಂದಿರುವ ಇವರ ಹೆಣ್ಣು ಮಕ್ಕಳಿಗೂ ನೀಡಿದ್ದೆವೆ ಸಾಲದು ಎಂಬತೆ ಅನ್ಯ ಗ್ರಾಮಗಳಿಂದ ಬಂದು ಇಲ್ಲಿ ಬಾಡಿಗೆ ವಾಸ ಮಾಡುತ್ತಿರುವ ಸದಸ್ಯರಿಗೂ ವಸತಿ ಮತ್ತು ನಿವೇಶನ ಗಳನ್ನು ನೀಡಿರುತೇವೆ ಈಗ ಮರಳಿ ತಮ್ಮ ಮಕ್ಕಳಿಗೆ ಮದುವೆ ಮಾಡಿ ಅವರಿಗೂ ಮನೆ ಕೊಡಿಸುವ ಸಲ್ಲುವಾಗಿ ಈ ವಿಧವಾಗಿ ಅಕ್ರಮ ಮಾಡಿರುತ್ತಾರೆ ಮತ್ತು ಇಲ್ಲಿ ಯಾರು ವಾಸಕ್ಕಾಗಿ ಅಥವಾ ಸಾಕು ಪ್ರಾಣಿಗಳಿಗಾಗಿ ಗುಡಿಸಲು ಹಾಕ್ಕಿಲ್ಲಾ ಎಂದು ನಮ್ಮ ಗಮನಕ್ಕೆ ಕಂಡು ಬಂದ ಮೇಲೆ ಅವುಗಳನ್ನು ತೆರವುಗೊಳ್ಳಿಸಿರುವುದು ಎಂದು ಪಂಚಾಯತಿ ಹಾಲಿ ಸದಸ್ಯ ಹಾಗು ಮಾಜಿ ಅಧ್ಯಕ್ಷರಾದ ಟಿ ವಿ ವೆಂಕಟೇಶ್ ರವರ ವಾದ ಮತ್ತು ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು ತಿಳಿಸಿದರು