ನವಂಬರ್ ನಲ್ಲಿ ನೇಪಾಳದಲ್ಲಿ ಅಂತರರಾಷ್ಟ್ರಿಯ 68ನೇಕನ್ನಡ ರಾಜ್ಯೋತ್ಸವ

ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ನೇಪಾಳದ ಕಠ್ಮಂಡುವಿನ ಪಶುಪತಿನಾಥ ದೇವಾಲಯ ಬಳಿ ಇರುವ ಆನಂದ ಪಶುಪತಿ ಸನ್ನಿಧಿಯಲ್ಲಿ ದಿನಾಂಕ ನವಂಬರ್ 25-11-2023ರ ಸಂಜೆ 6ಗಂಟೆಗೆ ಅಂತರಾಷ್ಟ್ರಿಯ 68ನೇ ಕನ್ನಡ ರಾಜ್ಯೋತ್ಸವ ಮತ್ತು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕ/ಸಾಧಕಿಯರಿಗೆ ಸನ್ಮಾನ ಕಾರ್ಯಕ್ರಮ ಕುರಿತು ಅಧ್ಯಕ್ಷರಾದ ಎ.ಅಮೃತ್ ರಾಜ್ ರವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಅಂತರಾಷ್ಟ್ರಿಯ ಕನ್ನಡ ರಾಜ್ಯೋತ್ಸವವನ್ನು ಉದ್ಘಾಟನೆಯನ್ನು ಡಾ.ರಾಮಸ್ವಾಮಿ ಗುರೂಜಿರವರು ನೇರವೆರಿಸುವರು, ಅಧ್ಯಕ್ಷತೆಯನ್ನು ಮೈಸೂರು ಸಂಸ್ಥಾನದ ಮಹಾರಾಜರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರು ಮುಖ್ಯ ಅತಿಥಿಗಳಾಗಿ ಹಿರಿಯ ಮಹಿಳಾ ಐ.ಪಿ.ಎಸ್ ಅಧಿಕಾರಿ ಶ್ರೀಮತಿ ರೂಪಾ ಡಿ.ಮೌದ್ಗೀಲ್, ಐ.ಎ.ಎಸ್. ಅಧಿಕಾರಿ ಜಯರಾಮ್ ರಾಯಪುರ್ ರವರು, ಟಿ.ವಿ.9 ಪ್ರಧಾನ ಸಂಪಾದಕರಾದ ರಂಗನಾಥ್ ಭಾರದ್ವಾಜ್, ಖ್ಯಾತ ಹಿನ್ನಲೆ ಗಾಯಕಿ ಕುಮಾರಿ ಆನುರಾಧಭಟ್ , ಹಿರಿಯ ವಕೀಲರಾದ ವಿ.ಶ್ರೀನಿವಾಸ್ ನಾಡಿನ ಗಣ್ಯ ಮಹನೀಯರುಗಳು ಭಾಗವಹಿಸಲಿದ್ದಾರೆ.

ಕರ್ನಾಟಕ ರಾಜ್ಯ ಮತ್ತು ಕಠ್ಮಂಡುವಿನ ಪಶುಪತಿನಾಥ ದೇವಾಲಯಕ್ಕೆ ನೂರಾರು ವರ್ಷಗಳ ಸ್ನೇಹ, ಸಾಂಸ್ಕೃತಿಕ ಸಂಭಂದವಿದೆ . ನೇಪಾಳದಲ್ಲಿ ಸಾವಿರಾರು ಕನ್ನಡಿಗರು ನೆಲಿಸಿದ್ದಾರೆ.

ಪಶುಪತಿನಾಥ ದೇವಾಲಯದಲ್ಲಿ ದೇವತಾಕಾರ್ಯ ಮತ್ತು ಸಂಪ್ರದಾಯವನ್ನು ಶೃಂಗೇರಿ ಮಠದಿಂದ ಆಯ್ಕೆಯಾದ ಅಗಮ ಪಂಡಿತರಿಂದ ಪೂಜಾ ಕೈಂಕರ್ಯ ನೇರವೆರುತ್ತ ಬರುತ್ತಿದೆ.

ಕನ್ನಡ ಭಾಷೆಗೆ 2000ಸಾವಿರ ವರ್ಷಗಳ ಇತಿಹಾಸವಿದೆ ಪ್ರಪಂಚದ ಎಲ್ಲ ದೇಶಗಳಲ್ಲಿ ಲಕ್ಷಾಂತರ ಕನ್ನಡಿಗರು ನೆಲೆಸಿದ್ದಾರೆ.

ನಮ್ಮ ಕನ್ನಡ ಭಾಷೆ ಸುಂದರ,ಸರಳ ಹಾಗೂ ಕನ್ನಡ ಭಾಷೆ ಕಲಿಯಲು ಅತ್ಯಂತ ಸರಳ ಭಾಷೆಯಾಗಿದೆ.

ಕನ್ನಡ ಉಳಿಸಿ, ಬೆಳಸಬೇಕು ಹಾಗೂ ವಿಶ್ವಮಾನ್ಯತೆ ಸಿಗಬೇಕು ಎಂದು ಅಂತರಾಷ್ಟ್ರಿಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ನೇಪಾಳದಲ್ಲಿ ಹಮ್ಮಿಕೊಳ್ಳಲಾಗಿದೆ.

2022ರಲ್ಲಿ ಕಾಶಿಯಲ್ಲಿ ರಾಷ್ಟ್ರಮಟ್ಟದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಅತ್ಯಂತ ಯಶ್ವಸಿಯಾಗಿ ನೇರವೆರಿತು.

2023ರಲ್ಲಿ ನವಂಬರ್ ನೇಪಾಳದಲ್ಲಿ ಹಾಗೂ 2024ರಲ್ಲಿ ಶ್ರೀಲಂಕಾದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎ.ಅಮೃತ್ ರಾಜ್ ರವರು ತಿಳಿಸಿದರು.

Leave a Reply

Your email address will not be published. Required fields are marked *