ಬೆಂಗಳೂರು : ಯಶವಂತಪುರದ ಶ್ರೀ ಮಹಾಗಣಪತಿ ಸೇವಾ ಸಮಿತಿ (ನೋ) ವತಿಯಿಂದ”ವಿಶ್ವ ಶಾಂತಿಗಾಗಿ ಹಿಂದು ಧರ್ಮ” ಎಂಬ ಧ್ಯೇಯದೊಂದಿಗೆ
ಶ್ರೀ ಗಣೇಶೋತ್ಸವ ಯಶವಂತಪುರ 2023 ರನ್ನು ಸೆಪ್ಟೆಂಬರ್ 20 ರಿಂದ 24 ರವರಿಗೆ 5 ದಿನಗಳ ಕಾಲ ಹಮ್ಮಿಕೊಳ್ಳಲಾಗಿತ್ತು.

5 ನೇ ದಿನವಾದ ನಿನ್ನೆ ಭಾನುವಾರ ಸಂಜೆ ಯಶವಂತಪುರದ ಸುತ್ತಮುತ್ತಲಿನ ಪ್ರಮುಖ ರಸ್ತೆಗಳಲ್ಲಿ ಬೃಹತ್ ಶೋಭಾ ಯಾತ್ರೆಯೊಂದಿಗೆ, ಹಿಂದೂ ಸಂಘ ಸಂಸ್ಥೆಗಳ ಆಹ್ವಾನದ ಮೇರೆಗೆ ಮಕ್ಕಳು, ಮಹಿಳೆಯರು ಪುರುಷರು ಸ್ವಯಂಪ್ರೇರಿತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ದಾರಿಯುದ್ಧಕ್ಕೂ ವಾದ್ಯಗಳ ಹಿಮ್ಮೆಳದಲ್ಲಿ ತಾಳಕ್ಕೆ ತಕ್ಕಂತೆ ಭಕ್ತಿ ಭಾವದಿಂದ ಮೊಳಗುತ್ತಿದ್ದ ಹರ್ಷೋದ್ಘಾರದ ನಡುವೆ, ನೃತ್ಯ ಮಾಡುತ್ತಾ ಸಂಭ್ರಮಿಸುತ್ತಾ ಹೆಜ್ಜೆಗಳನ್ನು ಹಾಕುತ್ತಾ ಜನರು, ದೇವರಿಗೆ ಜಯಘೋಷ ಮಾಡುತ್ತಾ ಜೆ. ಪಿ. ಪಾರ್ಕ್ ನಲ್ಲಿನ ಕಲ್ಯಾಣಿಯಲ್ಲಿ ಶ್ರೀ ಗಣಪತಿ ಮೂರ್ತಿಯ ವಿಸರ್ಜನೆಯನ್ನು ಭಕ್ತರ ಉಪಸ್ಥಿತಿಯಲ್ಲಿ ನೆರವೇರಿಸಲಾಯಿತು. ಈ ಶೋಭಾ ಯಾತ್ರೆಯಲ್ಲಿ ರಾಜರಾಜೇಶ್ವರಿ ನಗರ ವಿಧಾನ ಸಭಾ ಕ್ಷೇತ್ರದ ಶಾಸಕರು ಮುನಿರತ್ನ, ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾ ಕಾರ್ಯಕಾರಿಣಿ ಸದಸ್ಯರು ಡಾ. ಜಿ. ಎಸ್. ಚೌಧರಿ, ಮಾಜಿ ಪಾಲಿಕೆ ಸದಸ್ಯ ವೆಂಕಟೇಶ್ (ಎನ್ ಟಿ ಆರ್), ಯಶವಂತಪುರ ಭಾಗದ ಆರ್ ಎಸ್ ಎಸ್ ನ ಹಿರಿಯ ಸ್ವಯಂ ಸೇವಕರಾದ ರಾಜ ರಂಗನಾಯಕುಲು ಮುಂತಾದವರು ಯಾತ್ರೆಯಲ್ಲಿ ಭಾಗವಹಿಸಿದ್ದರು.