ಬ್ರಾಹ್ಮಣ ಮಹಿಳಾ ಗ್ರೂಪ್ ಇವರ 3ನೇ ವರ್ಷದ ಸ್ನೇಹ ಸಮ್ಮಿಲನ

ಇದೇ ಭಾನುವಾರ 24-9-2023 ರಂದು ನಡೆದ ಬ್ರಾಹ್ಮಣ ಮಹಿಳಾ ಗ್ರೂಪ್ ಇವರ 3ನೇ ವರ್ಷದ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಸಮೃದ್ಧಿ ಪಾರ್ಟಿಹಾಲ್ ಶೇಷಾದ್ರಿಪುರಂ ಬೆಂಗಳೂರು ಇಲ್ಲಿ ನೆರವೇರಿತು. ಈ ಕಾರ್ಯಕ್ರಮದ ರೂವಾರಿಯಾದ ಶ್ರೀಮತಿ ರಾಧಿಕಾ ಹೃಷಿಕೇಶ ಇವರ “ಬ್ರಾಹ್ಮೀ ಅಕಾಡೆಮಿಕ್ ಟ್ರಸ್ಟ್ “ನ ರಾಯಭಾರಿಯಾದ ನನ್ನನ್ನು ಪ್ರೀತಿ ಯಿಂದ ಈ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಹ್ವಾನಿಸಿದ್ದರು.


ಹಾಗೆ ಈ ಕಾರ್ಯಕ್ರಮದಲ್ಲಿ ಕರೋಕೆ ಸಂಗೀತದ ರಸದೌತಣವನ್ನು ಉಣಬಡಿಸುವುದರೊಂದಿಗೆ ಅಪ್ಪೋಲೊ ಆಸ್ಪತ್ರೆ ಮತ್ತು ಇತರೆ ಸ್ವ ಉದ್ಯೋಗಿ ಮಿತ್ರರು & ಬ್ರಾಹ್ಮಣ ಮಹಿಳಾ ಗ್ರೂಪ್ ನ ಸರ್ವ ಸದಸ್ಯರು ಕೂಡ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಡುವುದರೊಂದಿಗೆ, ಅಭಿನಂದನಾ ಪೂರ್ವಕವಾಗಿ ಫಲ & ನೆನಪಿನ ಕಾಣಿಕೆಯೊಂದಿಗೆ ಗೌರವಿಸಿದರು.


ಬ್ರಾಹ್ಮಣ ಮಹಿಳೆಯರ ಶ್ರೇಯೋಭಿವೃದ್ಧಿಗೆ ಯಾವುದೇ ಫಲಾಪೇಕ್ಷೆ ಇಲ್ಲದೆ ನೀವು ನಡೆಸುತ್ತಿರುವ ಈ ಉತ್ತಮ ಸೇವೆಯು ಇನ್ನಷ್ಟು ಬ್ರಾಹ್ಮಣ ಕುಟುಂಬಕ್ಕೆ ದೊರೆಲಿ ಹಾಗು ಎಲ್ಲರು ಇದರ ಸದುಪಯೋಗ ಪಡೆದುಕೊಳ್ಳಲಿ ಎಂದು ಶುಭಹಾರೈಸುವುದರ ಜೊತೆಗೆ ನನಗೆ ನಿಮ್ಮ ಭ್ರಾಹ್ಮೀ ಅಕಾಡೆಮಿ ಟ್ರಸ್ಟ್ ನ ರಾಯಬಾರಿ (ಬ್ರಾಂಡ್ ಅಂಬಾಸಿಡರ್) ಆಗಿ ಆಯ್ಕೆ ಮಾಡಿದಕ್ಕೆ ಮತ್ತೊಮ್ಮೆ ರಾಧಿಕಾ ಮೇಡಂ ಗೆ ಹೃತ್ಪೂರ್ವಕ ಧನ್ಯವಾದಗಳನ್ನು ಹೇಳಲು ಇಚ್ಚಿಸುತ್ತೇನೆ.

ರಾಜೇಶ್ವರಿ ಎಂ. ಕೆ
ನಟಿ /ಮಾಡೆಲ್ /ಮೇಕ್ಅಪ್ ಆರ್ಟಿಸ್ಟ್ /ಬ್ರಾಹ್ಮೀ ಅಕಾಡೆಮಿ & ಬಿ. ಪ್ಯಾಕ್ ಬ್ರಾಂಡ್ ಅಂಬಾಸಿಡರ್.

Leave a Reply

Your email address will not be published. Required fields are marked *