ಬ್ರಾಹ್ಮಣ ಮಹಿಳೆಯರ ಸಭೆ




ಇದೇ ತಿಂಗಳ ೨೪ ರಂದು ಭಾನುವಾರ ಬೆಂಗಳೂರಿನ ಮಲ್ಲೇಶ್ವರಂನಲ್ಲಿ brahmin mahila group ಎಂಬ fb ಗುಂಪಿನ ೩ ನೇ ವರುಷದ ಮಿಲನ ನಡೆಯಿತು.ಸ್ಥಳ ಸಮೃದ್ಧಿ ಪಾರ್ಟಿ ಹಾಲ್, ಶೇಷಾದ್ರಿಪುರಂ.ಪ್ರಕ್ಯಾತ ನಿರೂಪಕಿ ಪನ್ನಗರವರು ಕಾರ್ಯಕ್ರಮದ ನಿರೂಪಣೆ ಮಾಡಿದರು. ಶ್ರೀಮತಿ ವಾಣಿ ವಿಶ್ವನಾಥ್, ಚಿಲ್ಡ್ರನ್ ಸ್ಪೆಷಲಿಸ್ಟ್ Dr ವಿಶ್ವನಾಥ್ ಮಲ್ಲೇಶ್ವರಂ, ರವರ ಪತ್ನಿ ಕಾರ್ಯಕ್ರಮದ ಸ್ವಾಗತ ಭಾಷಣ ಮಾಡಿದರು.ಪ್ರಕ್ಯಾತ ಹಿನ್ನಲೆ ಗಾಯಕಿ ಶ್ರೀಮತಿ ಶ್ರುತಿ ಸುನಿಲ್ ( ಶ್ರೀಲಕ್ಷ್ಮಿ ) ಪ್ರಾರ್ಥನೆ ಹಾಡಿದರು.ಕಾರ್ಯಕ್ರಮದ ಮತ್ತೊಬ್ಬ ಅತಿಥಿ ನಟಿ, ಮಾಡೆಲ್ ರಾಜೇಶ್ವರಿಯವರು ಹಾಗೂ ಇತರೆ ಹಿರಿಯರು, ಸದಸ್ಯರು ದೀಪ ಹಚ್ಚಿ ಕಾರ್ಯಕ್ರಮ ಶುಭಾರಂಭ ಮಾಡಿದರು. ನಂತರ ಗಾಯಕಿ ಶ್ರೀಲಕ್ಷ್ಮಿ ಮಾತನಾಡಿ ತಮ್ಮ ಸೇವೆ ಸದಾ ಕಾಲ ಇರುತ್ತದೆ ಎಂದರು.ರಾಜೇಶ್ವರಿ ಮಾತನಾಡಿ ಅಲಂಕಾರದ ಜ್ಞಾನ ಮಹಿಳೆಯರಿಗೆ ಏಕೆ ಅವಶ್ಯಕ ಇತ್ಯಾದಿ ತಿಳಿಸಿಕೊಟ್ಟರು.fb ಗುಂಪಿನ ಫೌಂಡರ್ ರಾಧಿಕ ರವರು ಮಾತನಾಡಿ ಗುಂಪಿನ ಉದ್ದೇಶದ ಬಗ್ಗೆ ತಿಳಿಸಿದರು ಹಾಗೂ Akbms ಅಧ್ಯಕ್ಷರಾದ ಅಶೋಕ್ …
ಈ ಕಾರ್ಯಕ್ರಮ ಅಶೋಕ್ ಸರ್ ಹಾಗೂ ಶುಭಮಂಗಳ ಮೇಡಂರವರ ಅನುಪಸ್ಥಿತಿಯಲ್ಲಿ ಅವರ ಶುಭ ಹಾರೈಕೆಗಳೊಂದಿಗೆ ಜರುಗಿತು.ಅಶೋಕ್ ಸರ್ ರವರು ಮೊಬೈಲ್ ವಾನಿಯ ಮೂಲಕ ಸಭೆಯಲ್ಲಿ ಇದ್ದವರಿಗೆಲ್ಲ ಮಾತನಾಡಿ ಸಂದೇಶ ನೀಡಿದರು.ಅದರಲ್ಲಿ ಮುಂಬರುವ ಬ್ರಾಹ್ಮಣ ಮಹಿಳಾ ಅಧಿವೇಶನದ ಬಗ್ಗೆ ಹೇಳಿದರು.ನಂತರ ವಾಣಿ ಮೇಡಂರವರು ಬ್ರಾಹ್ಮಣ ಸಮುದಾಯಕ್ಕೆ ಯಥಾಶಕ್ತಿ ಸಹಾಯ ನೀಡುವುದಾಗಿ ಮಾತನಾಡಿದರು.
ನಡುವೆ ನಿರೂಪಕಿ ಪನ್ನಗ ರವರು ರಾಧಿಕಾರವರನ್ನು ಸನ್ಮಾನಿಸಿದರು. ಹಾಗೇ ಕಾರ್ಯಕ್ರಮಕ್ಕೆ ಹೆಸರಾಂತ ಪ್ರವಾಸೀ ಸಾಹಿತಿ ಶ್ರೀ ಆಗುಂಬೆ ನಟರಾಜ್ ಸರ್ ರವರು ಆಗಮಿಸಿದರು ಹಾಗೂ ಸಭೆಯನ್ನು ಕುರಿತು ಹಿಂದೂ ಧರ್ಮದ ಬಗ್ಗೆ ನಾಲ್ಕು ಮಾತನಾಡಿದರು.ಕೆಲವು ಪುಸ್ತಕಗಳನ್ನು ಸಭಿಕರಿಗೆ ನೀಡಿದರು.ನಂತ್ರ fb ಗುಂಪಿನ ಮಾಡರೇಟರ್ ಆದ ರೂಪ ದೇವಿರವರು ವಂದನಾರ್ಪಣೆ ಮಾಡಿದರು.ಎಲ್ಲರಿಗೂ ಮೋಮೆಂಟೋ ಕೊಟ್ಟು ಗೌರವಿಸಲಾಯಿತು.ಮೊಮೆಂಟೋ ಪ್ರಯೋಜಿಸಿದವರು ಶ್ರೀ ಮಹೇಂದ್ರ ಮುನ್ನೋತ್ , ಮಾರುತಿ ಮೆಡಿಕಲ್ಸ್ ವಿಜಯನಗರ.
ನಂತರ ಲಘು ಉಪಹಾರ ಇತ್ತು.ಇದನ್ನು ಪ್ರಾಯೋಜಿಸಿವರು Dr ವಿಶ್ವನಾಥ್ ಮಲ್ಲೇಶ್ವರಂ.ನಂತರ ೩ ಸ್ಟಾಲ್ ಗಳಿದ್ದವು.ಅಪೋಲೋ ಹೋಸ್ಪಿಟಲ್ಸ್ ರಾಜಾಜಿನಗರ, ಶ್ವೇತಾ ಆರ್ಟ್ಸ್ ,ಶ್ವೇತಾ ಹರಪನಹಳ್ಳಿ ಯಿಂದ.ಅರುನ್ ಕುಮಾರ್ ಭರದ್ವಾಜ ಎಂಟರ್ಪ್ರೈಸಸ್ ಮೈಸೂರು ಯಿಂದ.
ಕಾರ್ಯಕ್ರಮ ಲೈವ್ ವಿಡಿಯೋ ನೀಡುವಲ್ಲಿ ಶ್ವೇತಾ ಹರಪನಹಳ್ಳಿಯವರ ಪತಿ ಸಹಕರಿಸಿದರು.ಕಂಪನಾಂಕ ಟೆಲಿರೇಡಿಯೋರವರು ಎಲ್ಲರ ಸಂದರ್ಶನ ಹಾಗೂ ಕರೋಕೆ ಹಾಡಿನ ಚಿತ್ರೀಕರಣ ಮಾಡಿಕೊಂಡರು.*ಕಂಪನಾಂಕ *ಕಾರ್ಯಕ್ರಮದ ಮೀಡಿಯಾ ಪಾರ್ಟ್ನರ್.ಮುಂದೆ ಶ್ರೀಲಕ್ಷ್ಮಿ ಮೇಡಂರವರ ವಿದ್ಯಾರ್ಥಿ ಗಳಿಂದ ಹಾಗೂ ಸಭಿಕರಿಂದ ಕರೋಕೆ ಗಾಯನ ಇತ್ತು.ಕಡೆಯಲ್ಲಿ ಎಲ್ಲರ ವಿಸಿಟಿಂಗ್ ಕಾರ್ಡ್ಸ್ ಹಂಚಿ ಕೊಳ್ಳುವುದರೊಂಧಿಗೆ ಕಾರ್ಯಕ್ರಮ ಮುಕ್ತಾಯ ಆಯಿತು
ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ, ಹೃಷಿಕೇಶ್ ಹಾಗೂ ಕಟ್ಟಡದ ಮಾಲೀಕರಾದ ಶಾಮ್ಸುಂದರ್ ಸರ್, ಕುರುಕಲು ,ಕಾಫಿ ತಯಾರಿಸಿ ಕೊಟ್ಟ ಸುರೇಶ್ ನಾಯಕ್ ಹೋಟೆಲ್ ನವರಿಗು ನಮ್ಮ ಗುಂಪಿನ ಧನ್ಯವಾದಗಳು