ನಿಯತಕಾಲಿಕೆಗಳ ಮತ್ತು ದಿನಪತ್ರಿಕೆ ಪ್ರಕಾಶಕರಿಗೆ ಸಲಹೆ
ನಿಯತಕಾಲಿಕೆಗಳ ಮತ್ತು ದಿನಪತ್ರಿಕೆಗಳ ಪ್ರತಿಗಳನ್ನು ಪಿಐಬಿ ಅಥವ ಆರ್‌ಎನ್‌ಐಗೆ ವಿತರಸುವ ಬಗ್ಗೆ ತಿಳಿಸುವುದೇನೆಂದರೆ, ದಿನಪತ್ರಿಕೆಗಳ ಅಥವಾ ನಿಯತಕಾಲಿಕೆಗಳ ಪತ್ರಿಕೆಗಳ ಪ್ರತಿಗಳನ್ನು ಸ್ಥಳೀಯ ಪಿಐಬಿ ಅಥವ ಆರ್‌ಎನ್‌ಐನ ಪ್ರಾದೇಶಿಕ ಕಚೇರಿಗೆ ಆಯಾ ತಿಂಗಳು ತಲುಪಿಸುವ ಕುರಿತು ಪತ್ರಿಕಾ ಮತ್ತು ನೋಂದಣಿಯ 11ಬಿ ಕಾಯಿದೆ ಅನುಸಾರ ದಿನಪತ್ರಿಕೆ, ವಾರ, ಪಾಕ್ಞಿಕ ಅಥವ ಮಾಸಿಕ ಪತ್ರಿಕೆಯನ್ನು ಮುದ್ರಿಸಿದ 24 ರಿಂದ 48 ಘಂಟೆಯೊಳಗೆ ಅಂಚೆ ಮೂಲಕ ಅಥವ ನೇರವಾಗಿ ತಲುಪಿಸತಕ್ಕದ್ದು.

ಕಾಯಿದೆ, 1867 ಮತ್ತು ಪತ್ರಿಕೆಗಳ ನೋಂದಣಿ (ಕೇಂದ್ರ) ನಿಯಮಗಳು, 1956ರ ಪ್ರಕಾರ ಪ್ರತಿ ಪ್ರಕಾಶಕರು ಸಂಚಿಕೆಯನ್ನು ಪ್ರಕಟಿಸಿದ 24 ರಿಂದ 48 ಗಂಟೆಗಳ ಒಳಗೆ ಅಂಚೆಯ ಮೂಲಕ ಸಂಚಿಕೆಯ ಒಂದು ಪ್ರತಿಯನ್ನು ಸ್ಥಳೀಯ ಪ್ರೆಸ್ ರಿಜಿಸ್ಟ್ರಾರ್ಗೆ ಕಳುಹಿಸಬೇಕು ಅಥವಾ ನೇರವಾಗಿ ತಲುಪಿಸಬೇಕು.
ಪ್ರಕಾಶಕರು 2500/- ರೂಪಾಯಿವರೆಗೆ ದಂಡವನ್ನು ಪಾವತಿಸಲು ಪಿಆರ್‌ಬಿ ಕಾಯಿದೆ 13(ವಿಐ) ಪ್ರಕಾರ ಹೊಣೆಗಾರರಾಗಿರುತ್ತಾರೆ ಎಂದು ಸ್ಪಷ್ಟಪಡಿಸಲಾಗಿದೆ. ಈ ಕುರಿತು ಜನವಿಶ್ವಾಸ ಕಾಯಿದೆ ಅಡಿಯಲ್ಲಿ ತಿದ್ದುಪಡಿ ಮಾಡಲಾಗಿದೆ.
ಪತ್ರಿಕೆಗಳ ಪ್ರತಿಗಳನ್ನು ಮೇಲೆ ತಿಳಿಸಿದಂತೆ ಪ್ರಕಾಶಕರು ಅನುಸರಿಸಲು ವಿಫಲವಾದ ಸಂದರ್ಭದಲ್ಲಿ ಕಾಯಿದೆ 11ಎ ಮತ್ತು 11ಬಿ ಪಿಆರ್‌ಬಿ ಅನುಸಾರ ಪತ್ರಿಕೆಗಳನ್ನು ಅಮಾನತ್ತು ಅಥವ ರದ್ದುಪಡಿಸಲು ಅವಕಾಶವಿರುತ್ತದೆ, 12ರ ಪ್ರಕಾರ ಪತ್ರಿಕೆಗಳನ್ನು ಪ್ರಕಟಿಸುತ್ತಿಲ್ಲವೆಂದು ಪರಿಗಣಿಸಲಾಗುವುದು.

ದೆಹಲಿಯಲ್ಲಿರುವ ಪಿಐಬಿ/ಆರ್ಎನ್ಐ ಕಚೇರಿ ಅಥವ ಆಯಾ ಪ್ರಾದೇಶಿಕ ಕಚೇರಿಗಳಿಗೆ ಪತ್ರಿಕೆಗಳ ಪ್ರತಿಗಳನ್ನು ನೀಡತಕ್ಕದ್ದು, ತಪ್ಪಿದ್ದಲ್ಲಿ ಕಾಯಿದೆಯ ಸೆಕ್ಷನ್ 12ರ ಪ್ರಕಾರ ಇದನ್ನು ನಿಯಮಿತವಾಗಿ ಪ್ರಕಟಿಸುತ್ತಲ್ಲ ಎಂದು ಪರಿಗಣಿಸಲಾಗುವುದು ಮತ್ತು ಮೇಲೆ ತಿಳಿಸಿದಂತೆ ಅಮಾನತ್ತು ಅಥವ ರದ್ದುಪಡಿಸಬಹುದಾಗಿದೆ. ಆದ್ದರಿಂದ, ಎಲ್ಲಾ ಪ್ರಕಾಶಕರು ಮೇಲೆ ತಿಳಿಸಿರುವಂತೆ ಪಾಲಿಸತಕ್ಕದ್ದು.