ತ್ರಿಮತಸ್ಥ ಬ್ರಾಹ್ಮಣ ವೈದಿಕ ಭವನ ಕಟ್ಟಡ ಲೋಕಾರ್ಪಣೆ
ಇದೇ ದಿನಾಂಕ 01.10.2023 ರ ಬೆಳಿಗ್ಗೆ 11.00 ಗಂಟೆಗೆ ಯಲಹಂಕ ವಿಧಾನ ಸಭಾ ಕ್ಷೇತ್ರದ ಬಿ.ಬಿ.ಎಂ.ಪಿ ವಾರ್ಡ್ ನಂ.3ರ ಅಟ್ಟೂರು ವಾರ್ಡ್ ವ್ಯಾ ಪ್ತಿಯ, ಸಂಭ್ರಮ್ ಕಾಲೇಜಿನ ಹತ್ತಿರ ಸರ್ವೇ ನಂ. 18 ರಲ್ಲಿ ನನ್ನ ಆತ್ಮೀಯ ಸ್ನೇಹಿತರು ತಿರುಮಲ ತಿರುಪತಿ ದೇವಸ್ಥಾನಂ ಆಡಳಿತ ಮಂಡಳಿ ಸದಸ್ಯರು ಹಾಗೂ ಯಲಹಂಕ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಎಸ್.ಆರ್.ವಿಶ್ವನಾಥ್ ಅವರ ಅನುದಾನದಲ್ಲಿ ಬಿ.ಬಿ.ಎಂ.ಪಿ ವತಿಯಿಂದ, ಸುಮಾರು 30 ಗುಂಟೆ ಜಾಗದಲ್ಲಿ, 85 ಲಕ್ಷ ರೂ ವೆಚ್ಚದಲ್ಲಿ, ತ್ರಿಮತಸ್ಥ ಬ್ರಾಹ್ಮಣ ವೈದಿಕ ಭವನ ಕಟ್ಟಡ ಲೋಕಾರ್ಪಣೆ ಮಾಡಲಾಯಿತು.







ಶಾಸಕರಾದ ಶ್ರೀ ಎಸ್.ಆರ್.ವಿಶ್ವನಾಥ್, ಮತ್ತೋರ್ವ ಸ್ನೇಹಿತರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶ್ರೀ ಕೇಶವಪ್ರಸಾದ್, ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ (ಕರ್ನಾಟಕ ಸರ್ಕಾರ) ನಿರ್ದೇಶಕರಾಗಿದ್ದ ಶ್ರೀ ವಿ.ಪವನ್ ಕುಮಾರ್, ಬಿಬಿಎಂಪಿ ಕಾರ್ಯಪಾಲಕ ಅಭಿಯಂತರರಾದ ಶ್ರೀ ಸುಧಾಕರ್ ರೆಡ್ಡಿ, ಸಹಾಯಕ ಕಾರ್ಯ ಪಾಲಕ ಅಭಿಯಂತರರಾದ ಶ್ರೀ ರಘುನಂದನ್ ಮಂತ್ರಿ, ಬಿಜೆಪಿ ಮಹಾನಗರ ಸಹಪ್ರಭಾರಿಗಳಾದ ಶ್ರೀ ಎಸ್.ಎನ್.ರಾಜಣ್ಣ, ಬಿಬಿಎಂಪಿ ಸದಸ್ಯರುಗಳಾಗಿದ್ದ ಶ್ರೀ ಎಂ.ಸತೀಶ್, ಶ್ರೀ ಮುನಿರಾಜು, ಮಠಾಧೀಶರಾದ ಶ್ರೀ ರಾಮಾನುಜಂ ಜೀಯಾರ್, ಸಾಧ್ವಿ ಉಮಾಭಾರತಿ, ಸಮುದಾಯದ ಪ್ರಮುಖರು ಹಾಗೂ ಹಿರಿಯರಾದ ಶ್ರೀ ರಾಜ ರಾವ್, ಶ್ರೀ ಶ್ರೀನಿವಾಸ್, ಶ್ರೀ ಮುಖೇಶ್, ಸಮಾಜ ಸೇವಕರಾದ ಶ್ರೀಮತಿ ಹೇಮಲತಾ ಚಿದಾನಂದ್,ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಹಳಲಿ ಗ್ರಾಮದಲ್ಲಿ ಸಮಾಜ ಸೇವೆ ಸಲ್ಲಿಸಿತ್ತಿರುವ ಶ್ರೀ ಹೊಳಲಿ ಪ್ರಕಾಶ್, ಶ್ರೀ ಶರತ್, ಶ್ರೀ ಮಲ್ಲಿಕಾರ್ಜುನ್, ತ್ರಿಮತಸ್ಥ ಬ್ರಾಹ್ಮಣ ಸೇವಾ ಟ್ರಸ್ಟ್ (®️) ಅಧ್ಯಕ್ಷರಾದ ಶ್ರೀ ವಾಸುದೇವ ಭಟ್, ಶ್ರೀ ಅಣ್ಣಪ್ಪ ಭಟ್, ಶ್ರೀ ಶಶಿಕುಮಾರ್, ಶ್ರೀ ಪದ್ಮನಾಭ, ಶ್ರೀ ಭಾಸ್ಕರ್, ಶ್ರೀಮತಿ ಉಮಾ, ಶ್ರೀಮತಿ ರೂಪ, ಶ್ರೀಮತಿ ಕವಿತ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಹೆಚ್.ಎಸ್.ಸಚ್ಚಿದಾನಂದಮೂರ್ತಿ
ನಿ.ಪೂ.ಅಧ್ಯಕ್ಷರು
ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ {ಕರ್ನಾಟಕ ಸರ್ಕಾರ}