ಪ್ರಯಾಣಿಕರು ಬಸ್ ಕಾದು ಕಾದು ನಂತರ ಸಿಕ್ಕ ಬಸ್ ಹತ್ತಿ ಬಂದಿದ್ದರು ……
ಬೆಂಗಳೂರು : ಸೆಪ್ಟೆಂಬರ್ 30 :
ನ್ಯಾಯಾಂಡ ಹಳ್ಳಿಯ ರಿಂಗ್ ರಸ್ತೆಯಲ್ಲಿ ಜನವೂ ಜನ …..



ಸುಮಾರು 85 ರಿಂದ 100 ಜನ … ಏನಾಯ್ತು ಎಂದು ಅಲ್ಲಿಯೇ ನಿಂತ ಜನರ ಬಳಿ ಕೇಳಿದಾಗ ಸುಮಾರು
1 ಗಂಟೆಯಿಂದ ಬಸ್ ಇಲ್ಲ , ಬನಶಂಕರಿ , ಜನತಾ ಬಜಾರ್ , ಕತ್ರಿಗುಪ್ಪೆ , ಕಾಮಾಕ್ಯ ಕಡೆಗೆ ಎನ್ನುತ್ತಾ ನಿಂತಿದ್ದರು ಸಿಲಿಕಾನ್ ಸಿಟಿಯಲ್ಲಿ …
ಬಸ್ಸು ಕಾದು ಕಾದು ಹೈರಾಣಗಿದ್ದರು ನಾಗರೀಕರು , ಮೂರು ಬಸ್ ಗೆ ಆಗುವಷ್ಟು ಜನ ಇಲ್ಲಿ ನಾವು ನಿಂತಿದ್ದೇವೆ ಆದರೆ ಬಸ್ಸು ಬರಲಿಲ್ಲ ಎಂದು ಬಿ.ಎಂ.ಟಿ.ಸಿ ಬಸ್ ಗೆ ಹಿಡಿ ಶಾಪ ಹಾಕುತ್ತಾ ನಿಂತಿದ್ದರು ಕೆಲಸಕ್ಕೆ ಹೋಗಿ ಮನೆಗೆ ವಾಪಸ್ಸು ಹೋಗುತ್ತಿದ್ದ ಮಹಿಳೆಯರು ….
ಸುಮಾರು 1 ತಾಸು ಕಳೆದ ಬಳಿಕ 1 ಬಸ್ಸು ಬಂತು , ಆಗ 3 ಬಸ್ಸು ಗೆ ಆಗುವ ಪ್ರಾಯಣಿಕರು ಬಂದ ಬಸ್ಸು ಹತ್ತಲು ನುಕ್ಕೂ ನುಗಲ್ಲು….
ಹರಸಾಹಸ ಪಟ್ಟು ಕೆಲವರು ಬಸ್ ಹತ್ತಿದ್ದರೆ , ಕೆಲವರು ಬಸ್ ಹತ್ತಲು ಆಗದೆ ನಡು ರಸ್ತೆಯಲ್ಲಿ , ಕಾರಣ ನ್ಯಾಯಾಂಡಲ್ಲಿ ಯಲ್ಲಿ ಬಸ್ ಹತ್ತುವ ಪ್ರಾಯಣಿಕರಿಗೆ ಬಸ್ ನಿಲ್ದಾಣ ಇಲ್ಲ ……
ಮಳೆ ಬಂದರೆ ಸಾನ್ನ … ಎಂತಹ ಸೌಲಭ್ಯ ಅಲ್ಲವೇ …. ಇದು ಬೆಂಗಳೂರು ಮಹಾನಗರ ಪಾಲಿಕೆ ಕೊಡುಗೆಯೇ ಅಥವಾ ಸರ್ಕಾರದ ಕೊಡುಗೆಯೇ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ ….
ಮೂಲಭೂತ ಸೌಕರ್ಯಗಳ ಕೊರತೆ ……..ಇವೆಲ್ಲರ ನಡುವೆ ವೊಲುವು ಬಸ್ಸು ಬಂದಿತ್ತು ಬಸ್ಸು ಕಾದು ಕಾದು ಸುಸ್ತು ಆಗಿದ್ದು ಜನ volvo ವೊಲೋವೋ ಬಸ್ ಗೆ ಹಣ ಕೊಟ್ಟು ಪ್ರಾಯಣ ಆರಂಭ ಮಾಡಿದ್ದರು , ಕಾರಣ ನಾವು ತಿಂಗಳು ಪೂರ್ತಿ ಓಡಾಡಲು ರೂಪಾಯಿ 1050/- ಕೊಟ್ಟು ತೆಗೆದುಕೊಂಡ ಬಸ್ ಪಾಸ್ ವ್ಯರ್ಥವಾಗಿ… ವೊಲೋವೋ ಬಸ್ ಗೆ ರುಪಾಯಿ 15/- Nayndalli ನ್ಯಾಯಾಂಡಲ್ಲಿ to ಜನಾತ ಬಜಾರ್ ಗೆ ಪ್ರಯಾಣ ಆರಂಭ ಮಾಡಿದ್ದೆ ನಾನು … ಹಲವು ಕೆಲಸಗಳು ಇದ್ದ ಕಾರಣ …..
ಆದರೆ ವೊಲೋವೋ ಬಸ್ ಹತ್ತಿ ನಾನು ಹೊರಟಿದ್ದೆ ಆದರೆ ಆ ಬಸ್ ನ ಹಿಂದೆ ಬನಶಂಕರಿ ಮಾರ್ಗಕ್ಕೆ 2 ಬಸ್ಸು , ಒಂದರ ಮೇಲೊಂದು ಬಂದಿತ್ತು ಆದರೆ ನನ್ನ ಹಾಗೆ ಅನೇಕ ಪ್ರಾಯಣಿಕರು ಹಣ ಕೊಟ್ಟು ವೊಲೋವೋ ಬಸ್ ಹತ್ತಿದ್ದರು , ಮನೆ ಸೇರುವ ತವಕದಲ್ಲಿ ……..
ನ್ಯಾಯಾಂಡ ಹಳ್ಳಿಯ ಬಸ್ ಕಾದ ಹಾಗೇ ಬನಶಂಕರಿ ಯಲ್ಲಿಯೂ ಸಹ ಜನಾತ ಬಜಾರ್ ಕಡೆಗೆ ಬರಲು ಅನೇಕ ಪ್ರಾಯಣಿಕರು ಬಸ್ ಕಾದು ಕಾದು ನಂತರ ಸಿಕ್ಕ ಬಸ್ ಹತ್ತಿ ಬಂದಿದ್ದರು ……
ಇದಕ್ಕೆ ಸಾಲಾಗಿ ಬಂದ……….. ರಜಾ ಕಾರಣವೇ……ನಾಳೆ ಭಾನುವಾರ ನಾಡಿದ್ದು ಸೋಮವಾರ ಗಾಂಧೀ ಜಯಂತಿ …… ಎನ್ನಬಹುದೇ …
ಬಸ್ ನಿಲ್ದಾಣದಲ್ಲಿ ಬಿ.ಎಂ.ಟಿ.ಸಿ ಬಸ್ ಸಮಯಕ್ಕೆ ಸರಿಯಾಗಿ ಬರದೇ ರಿಂಗ್ ರೋಡ್ ನಲ್ಲಿ ಜನ ಸಾಗರ …
ಈ ರೀತಿಯ ಸಮಸ್ಯೆಗೆ ಬಿ.ಎಂ.ಟಿ .ಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನ ಮಾಡುತ್ತದೆಯೇ ಕಾದು ನೋಡಬೇಕು….ಹಾಗೂ
ನಾಯಂದಳ್ಳಿ ಯಲ್ಲಿ ಸರಿಯಾದ ಬಸ್ ನಿಲ್ದಾಣ ನಿರ್ಮಾಣ ಮಾಡುವತ್ತ ಮಹಾನಗರ ಪಾಲಿಕೆ ಮನಸ್ಸು ಮಾಡಲಿ ಎಂದು ಆಶಿಸೋಣ ಅಲ್ಲವೇ .?


ಚಿತ್ರ : ಬರಹ – ತೀರ್ಥಹಳ್ಳಿ ಅನಂತ ಕಲ್ಲಾಪುರ