ಪ್ರೇಕ್ಷಕರ ಮನಸೆಳೆದ “ನೃತ್ಯ ಪ್ರದರ್ಶನ”

ಬೆಂಗಳೂರು : ನೃತ್ಯ ದಿಶಾ ಟ್ರಸ್ಟಿನ ವತಿಯಿಂದ ಸೆಪ್ಟೆಂಬರ್ 30, ಶನಿವಾರ ಸಂಜೆ ಕೆ.ಆರ್. ರಸ್ತೆಯಲ್ಲಿರುವ ಗಾಯನ ಸಮಾಜದಲ್ಲಿ “ನೃತ್ಯ ನೀರಾಜನ” ಎಂಬ ಶೀರ್ಷಿಕೆಯಲ್ಲಿ ಕಿರಿಯ ಮಕ್ಕಳಿಂದ ಭರತನಾಟ್ಯ ಪ್ರದರ್ಶನ ಜರುಗಿತು. 

 ‘ಕಲಾಭೂಷಿಣಿ’ ಶ್ರೀಮತಿ ದರ್ಶಿನಿ ಮಂಜುನಾಥ್ ಅವರ  ಶಿಷ್ಯೆಯರಾದ ಕು|| ನಯನ ಹರೀಶ್, ಕು|| ಪವಿತ್ರ ರಮೇಶ್ ಮತ್ತು ಕು|| ತ್ರಿಶಾ ಶಿವಕುಮಾರ್ ಇವರುಗಳು ಭರತನಾಟ್ಯ ಪ್ರದರ್ಶನ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಕೊಳಲು ವಾದಕರಾದ ವಿ|| ವೇಣುಗೋಪಾಲ್,  ಮೃದಂಗ ವಿ|| ಗಿರಿಧರ್ ಹಾಗೂ ವಿ|| ಸುಮ ಕೃಷ್ಣಮೂರ್ತಿ ವಹಿಸಿದ್ದರು.

ಕಲಾವಿದರು ಮೊದಲಿಗೆ ಭರತನಾಟ್ಯ ಮಾರ್ಗದಲ್ಲಿನ ರಾಗದ ‘ಪುಷ್ಪಾಂಜಲಿಯೊಂದಿಗೆ ಕಲಾವಿದರು ಕಾರ್ಯಕ್ರಮ ಪ್ರಾರಂಭಿಸಿ, ತದನಂತರ ಆದಿಶಂಕರರ “ಗಣೇಶ ಶ್ಲೋಕ” ನರ್ತಿಸಿದರು. ಮುಂದೆ ಖಂಡ ಅಲರಿಪು, ತೋಡಿ ಜತಿಸ್ವರ ನರ್ತಿಸಿದರು. ಕು|| ತ್ರಿಶಾ ಶಿವಕುಮಾರ್-  ತಂಜಾವೂರು ಶಂಕರ್ ಅಯ್ಯರ್ ರವರ “ಮಹಾದೇವ ಶಿವ ಶಂಭೋ”, 

ಶ್ರೀ ಅದಿಶಂಕರಚಾರ್ಯರ  “ಐಗಿರಿ ನಂದಿನಿ”, ಕು|| ನಯನ ಹರೀಶ್ ನರ್ತಿಸಿದರು. ಕು||ಪವಿತ್ರ ರಮೇಶ್ ಅನ್ನಮಾಚಾರ್ಯರ “ಬ್ರಹ್ಮಮೊಕ್ಕಟೆ”, “ಕಂಜದಳಾಯತಾಕ್ಷಿ ಕಾಮಾಕ್ಷಿ” ಹಾಗೂ

ಬೃಂದಾವನಿ ರಾಗದ “ತಿಲ್ಲಾನ”ದೊಂದಿಗೆ ಕಾರ್ಯಕ್ರಮ ಸಂಪೂರ್ಣಗೊಂಡಿತು.

Leave a Reply

Your email address will not be published. Required fields are marked *