ಬೆಂಗಳೂರು – ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಯಶವಂತಪುರ ಶ್ರೀ ಹರಿಕೆ ದುರ್ಗಾ ಪರಮೇಶ್ವರಿ ದೇವಸ್ಥಾನ ಹಿಂಭಾಗವಿರುವ ಆಕ್ಸ್‌ಫರ್ಡ್ ಇಂಗ್ಲಿಷ್ ಸ್ಕೂಲ್ನಲ್ಲಿ
ಶುಭೋದಯ ಚಾರಿಟಬಲ್ ಟ್ರಸ್ಟ್ (ರಿ), ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಆರಾಧನಾ ಜಿಲ್ಲೆ-317 ಎ, ಮಲ್ಲೇಶ್ವರಂ ವಾರ್ಡ್ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು, ಸ್ಪರ್ಶ ಆಸ್ಪತ್ರೆ, ಬೆಂಗಳೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಹೃದಯ ರೋಗ ತಪಾಸಣೆ ಮತ್ತು ಇಸಿಜಿ ಪರೀಕ್ಷೆ, ಕಣ್ಣಿನ ತಪಾಸಣೆ, ಮೂಳೆ ಮತ್ತು ಕೀಲು ರೋಗಗಳ ತಪಾಸಣೆ, ಬಿಪಿ ಮತ್ತು ಸಕ್ಕರೆ ಕಾಯಿಲೆ ಪರೀಕ್ಷೆ, ಸಾಮಾನ್ಯ ಖಾಯಿಲೆಗಳ ತಪಾಸಣೆ ಹಾಗೂ ಮಹಿಳೆಯರ ಸಾಮಾನ್ಯ ರೋಗಗಳ ತಪಾಸಣೆ ಮಾಡಿಸಿಕೊಳ್ಳಲು ವಾರ್ಡಿನಾದ್ಯಂತ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುಮಾರು 200 ಕ್ಕೂ ಹೆಚ್ಚು ಸಾರ್ವಜನಿಕರು ಶಿಬಿರಕ್ಕೆ ಆಗಮಿಸಿ, ಸ್ಪರ್ಶ ಆಸ್ಪತ್ರೆಯ ನುರಿತ ವೈದ್ಯರಿಂದ ತಪಾಸಣೆ ಮಾಡಿಸಿಕೊಂಡು ಅವರಿಂದ ಸಲಹೆ ಸೂಚನೆಗಳನ್ನು ಪಡೆದುಕೊಂಡರು.


ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಲ್ಲೇಶ್ವರಂ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಅನೂಪ್ ಅಯ್ಯಂಗಾರ್, ಅಂತರಾಷ್ಟ್ರೀಯ ಕಬ್ಬಡಿ ಪಟು ಹಾಗೂ ಅರ್ಜುನ ಪ್ರಶಸ್ತಿ ಪುರಸ್ಕೃತರಾದ ಹೊನ್ನಪ್ಪ ಗೌಡ, ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಆರಾಧನಾ ಅಧ್ಯಕ್ಷರು ರಾಜಾ ನಂಜುಂಡಯ್ಯ, ಶುಭೋದಯ ಚಾರಿಟಬಲ್ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷ ಆರ್. ಕೇಶವಮೂರ್ತಿ, ಕೆ ಪಿ ವೈ ಸಿ ಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆಶಿಕ್ ಗೌಡ, ಮಲ್ಲೇಶವರಂ ವಾರ್ಡ್ ಕಾಂಗ್ರೆಸ್ ಮುಖಂಡ ಅಭಿಷೇಕ್ ರೆಡ್ಡಿ, ಮಂದಗೆರೆ ಕಲೆ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಮಂದಗೆರೆ ರಾಮ್ ಕುಮಾರ್, ಸಮಾಜ ಸೇವಕರು ಹಾಗೂ ಕಾರ್ಮಿಕ ಮುಖಂಡರು ಪೂರ್ಣಿಮಾ ಕೆ. ಬಿ. ಮುಂತಾದ ನಾಯಕರು ಆಗಮಿಸಿ ಸಾರ್ವಜನಿಕರ ಸೇವೆಯಲ್ಲಿ ಪಾಲ್ಗೊಂಡು, ಶಿಬಿರವನ್ನು ಯಶಸ್ವಿಗೊಳಿಸಿದರೆಂದು ಆಯೋಜಕರು ಪತ್ರಿಕೆಗೆ ಮಾಹಿತಿ ನೀಡಿದರು.