ಗಾಂಧೀಜಿ ಹಾಗೂ ಶಾಸ್ತ್ರಿ ದೇಶಕ್ಕೆ ಆದರ್ಶ ಪುರುಷರು.: ಅಶೋಕ್

ದೇಶದ ಸ್ವಾತಂತ್ರಕ್ಕೆ ತನ್ನ ಜೀವನವನ್ನೇ ಮೂಡುಪಾಗಿಟ್ಟು ನಮಗೆಲ್ಲರಿಗೂ ಆದರ್ಶ ಪುರುಷರಾಗಿದ್ದ ದೇಶದ ಪಿತಾಮಹ ಮಹಾತ್ಮಾ ಗಾಂಧೀಜಿ ಹಾಗೂ ಈ ದೇಶದ ಪ್ರಧಾನಿಯಾಗಿ ಸರಳ ಜೀವನ ಮಾಡಿ “ಜೈ ಜವಾನ್ ಜೈ ಕಿಸಾನ್ “ಎಂದು ಹೇಳಿದ್ದ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಇವರಿಬ್ಬರ ದೇಶ ಭಕ್ತಿ ಇಂದಿನ ಯುವಕರು ಹಾಗೂ ರಾಜಕಾರಣಿಗಳು ಆದರ್ಶ ವಾಗಿ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕಾಂಗ್ರೆಸ್ ಮುಖಂಡರು ಹಾಗೂ ಕೆ ಬಿ ಸಿ ಟ್ರಸ್ಟ್ ಅಧ್ಯಕ್ಷ ಕೆ ಸಿ ಅಶೋಕ್ ಹೇಳಿದ್ದಾರೆ.

ದಾಸರಹಳ್ಳಿಯ ಕಮ್ಮಾಗೊಂಡನಹಳ್ಳಿಯಲ್ಲಿರುವ ಅಶೋಕ ಗ್ರೂಪ್ ವಿದ್ಯಾ ಸಂಸ್ಥೆ ಆವರಣದಲ್ಲಿ ಸಾರ್ವಜನಿಕರಿಗೆ 28ನೇ ವರ್ಷದ ಆರೋಗ್ಯ ತಪಾಸಣೆಯನ್ನು ಸಂಸ್ಥೆಯ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಕೆ ಸಿ ಅಶೋಕ್ ತನ್ನ ಹುಟ್ಟುಹಬ್ಬದ ಆಚರಣೆ ಮಾಡಿಕೊಂಡರು. ಇದೇ ಸಂದರ್ಭದಲ್ಲಿ ರಾಷ್ಟ್ರ ಪಿತ ಮಹಾತ್ಮಾ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಜನ್ಮ ದಿನವನ್ನು ಆಚರಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಏನ್ ಎಂ ಸುರೇಶ್ ಸೇರಿದಂತೆ ಅನೇಕ ಚಲನ ಚಿತ್ರ ಕಲಾವಿರು,ವಿವಿದ ಪಕ್ಷದ ಮುಖಂಡರು, ಅಶೋಕ್ ಕುಟುಂಬಸ್ಥರು, ಅಭಿಮಾನಿಗಳು, ಪತ್ರಕರ್ತರು ಹಾಗೂ ಅಶೋಕ್ ವಿದ್ಯಾ ಸಂಸ್ಥೆಯ ಸಿಬ್ಬಂದಿಗಳು ಭಾಗವಹಿಸಿದ್ದರು. ಸುಮಾರು ಸಾವಿರಕ್ಕೂ ಅಧಿಕ ಜನರು ವಿವಿದ ರೀತಿಯ ಅರೋಗ್ಯ ತಪಾಸಣೆ ಮಾಡಿಸಿಕೊಂಡುರು.

Leave a Reply

Your email address will not be published. Required fields are marked *