ಬೆಂಗಳೂರು ನಗರ ಆಗ್ನೆಯ ವಿಭಾಗದ ತಿಲಕನಗರ ಪೊಲೀಸರು ಕಾರ್ಯಾಚರಣೆ

ಬೆಂಗಳೂರು : ತಿಲಕನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ವಾಸವಾಗಿದ್ದ ಪಿರ್ಯಾದುದಾರರು ದಿನಾಂಕ 23.09.2023 ರಂದು ಕುಟುಂಬ ಸಮೇತರಾಗಿ ತಮ್ಮ ಸಂಬಂಧಿಕರ ಮದುವೆಯ ನಿಮಿತ್ತ ರಾಮನಗರಕ್ಕೆ ಹೋಗಿದ್ದು, ನಂತರ ದಿನಾಂಕ 25.09.2023 ರಂದು ಮದ್ಯ ರಾತ್ರಿ ಸುಮಾರು 01-00 ಗಂಟೆಯ ಸುಮಾರಿಗೆ ವಾಪಸ್ಸು ಮನೆಗೆ ಬಂದು ನೋಡಲಾಗಿ, ಬೀರುವಿನಲ್ಲಿ ಇಟ್ಟಿದ ಸುಮಾರು 2.5 ಕೆ.ಜಿ ತೂಕದ ಚಿನ್ನಾಭರಣಗಳು ಮತ್ತು 8 ರಿಂದ 10 ಲಕ್ಷ ರೂ. ನಗದು ಹಣವನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ತಿಲಕನಗರ ಪೊಲೀಸ್ ಠಾಣೆಯಲ್ಲಿ ಮನೆ ಕಳವು ಪ್ರಕರಣವನ್ನು ದಾಖಲಿಸಿಕೊಂಡು,ಕಾರ್ಯ ಪ್ರವೃತ್ತರಾದ ಪೊಲೀಸರು, ಈ ಕೇಸಿಗಾಗಿಯೆಂದೆ ಡಿಸಿಪಿ ಸಿ. ಕೆ. ಬಾಬಾರವರ ಮಾರ್ಗದರ್ಶನದಂತೆ, ಒಂದು ವಿಶೇಷ ತಂಡವನ್ನು ರಚಿಸಿ, ಎಸಿಪಿ ಬಿ. ಶಿವಶಂಕರ ರೆಡ್ಡಿರವರ ತನಿಖಾ ಯೋಜನೆಯನ್ವಯವಾಗಿ ಸಮಗ್ರ ತನಿಖೆಯನ್ನು ಕೈಗೊಂಡು, ದ್ವಿಚಕ್ರ ವಾಹನದ ನಂಬರ್ ಪ್ಲೇಟನ್ನು ಬದಲಾಯಿಸಿಕೊಂಡು ನಕಲಿ ಬೀಗದ ಕೈಗಳನ್ನು ಬಳಸಿ ಮನೆ ಕಳ್ಳತನ ಮಾಡಿದ್ದ ವ್ಯಕ್ತಿಯನ್ನು ದಸ್ತಗಿರಿ ಮಾಡಿ, ಆತನಿಂದ ರೂ 1,10,60,000/-ರೂ. ಬೆಲೆ ಬಾಳುವ 1 ಕೆಜಿ 800 ಗ್ರಾಂ ಚಿನ್ನಾಭರಣಗಳು, 74,000/- ರೂ. ನಗದು ಹಣ, ಕೃತ್ಯಕ್ಕೆ ಬಳಸಿದ ಒಂದು ದ್ವಿಚಕ್ರ ವಾಹನ ಹಾಗೂ ಒಂದು ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್‌ ಕೆ. ವಿಶ್ವನಾಥ್ ರವರ ದಕ್ಷ ನೇತೃತ್ವದ ತಂಡವು ಯಶಸ್ವಿಯಾಗಿದ್ದು, ಆರೋಪಿಯು ತಾನು ಕದ್ದ ನಗದು ಹಣದಲ್ಲಿ ಬಹುಪಾಲು ಹಣವನ್ನು ಮಾಡಿದ್ದ ಸಾಲವನ್ನು ತೀರಿಸಲು ಬಳಸಿಕೊಂಡಿರುತ್ತಾನೆಂದು ವಿಚಾರಣೆ ವೇಳೆ ತಿಳಿಸಿರುತ್ತಾನೆಂದು ತಿಳಿದುಬಂದಿದೆ.

ಈ ಕಾರ್ಯಾಚರಣೆಯಲ್ಲಿ ಮೇಲಧಿಕಾರಿಗಳ ನಿರ್ದೇಶನಾನುಸಾರ ಸಮಗ್ರ ತನಿಖಾ ಕಾರ್ಯದಲ್ಲಿ ನಿಷ್ಠೆಯಿಂದ ಭಾಗವಹಿಸಿ, ಕಾರ್ಯಾಚರಣೆಯು ಶೀಘ್ರವಾಗಿ ಯಶಸ್ವಿಯಾಗಲು ಶ್ರಮಿಸಿದ ಸಬ್‌ ಇನ್ಸ್‌ ಪೆಕ್ಟರ್ ರಮೇಶ್, ಕೆಂಡಗಣ್ಣಸ್ವಾಮಿ, ಸದ್ದಾಂ ಹುಸೇನ್‌ ನದಾಫ್‌, ಸಮೀನ ಭಾನು, ಪ್ರವೀಣ್ ಶೆಟ್ಟಿ ಮತ್ತು ಸಿರಾಜ್ ಅಹಮದ್‌ ಅವರೊಂದಿಗೆ ಸಿಬ್ಬಂದಿಯವರಾದ ಎಎಸ್‌ಐ ಮಲ್ಲಿಕ್‌ ಸಾಬ್, ಹೆಚ್‌ ಸಿ ಗಳಾದ ರವಿ, ಮಂಜುನಾಥ್, ವೀರಭದ್ರಪ್ಪ, ಆಸಿನ್‌ ಸಾಬ್‌ ಮಂಡಲ್, ಪಿಸಿ ಗಳಾದ ಸಿದ್ದರಾಮ, ರಾಜು ಮತ್ತು ಮ. ಪಿಸಿ ಸುಜಾತ ಅವರುಗಳ ಈ ಈ ಕಾರ್ಯ ಸಾಧನೆ ಶ್ಲಾಘನೀಯ.
ಇಡೀ ತಂಡದ ಈ ಉತ್ತಮ ಕಾರ್ಯವನ್ನು, ಬೆಂಗಳೂರು ನಗರ ಮಾನ್ಯ ಪೊಲೀಸ್ ಆಯುಕ್ತರು ಹಾಗೂ ಮಾನ್ಯ ಅಪರ ಪೊಲೀಸ್ ಆಯುಕ್ತರು, ಪೂರ್ವ, ಬೆಂಗಳೂರು ನಗರ ರವರು ಸಹ ಪ್ರಶಂಶಿಸಿರುತ್ತಾರೆ.

Leave a Reply

Your email address will not be published. Required fields are marked *