ಜಯನಗರದ ಈಸ್ಟ್ ಎಂಡ್ ವೃತ್ತದ ಬಳಿ ನೂತನ “ಪವರ್ ಸ್ಪೋರ್ಟ್ಸ್” ಮಳಿಗೆ ಆರಂಭ

ಬೆಂಗಳೂರು : ಆಟೋಮೊಬೈಲ್ ಉದ್ಯಮದಲ್ಲಿ ವಿಶೇಷವಾಗಿ ದ್ವಿಚಕ್ರ ವಾಹನಗಳ ಬಿಡಿ ಭಾಗಗಳನ್ನು ಪೂರೈಸುತ್ತಾ, ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಗ್ರಾಹಕರ ವಿಶ್ವಾಸ ಹಾಗೂ ಮನ್ನಣೆಗಳಿಸಿರುವ ಯಶವಂತಪುರ ಹಾಗೂ ಸುತ್ತಮುತ್ತಲಿನ ಭಾಗದಲ್ಲಿ ಪ್ರಖ್ಯಾತಿಯನ್ನು ಗಳಿಸಿರುವ ಶ್ರೀ ಶಂಕರ್ ಆಟೋಮೊಬೈಲ್ಸ್ ನ ಆಡಳಿತ ನಿರ್ವಹಣೆಯಲ್ಲಿ, ದಶಕಗಳ ಕಾಲದ ಗುಣಮಟ್ಟದ ವಿಶ್ವಾಸವನ್ನು ಮುಂದುವರೆಸುತ್ತಾ ಅದನ್ನು ವಿಸ್ತರಿಸುವ ನಿಟ್ಟಿನಲ್ಲಿ ಜಯನಗರದ ಈಸ್ಟ್ ಎಂಡ್ ವೃತ್ತದ ಬಳಿ, ಡಾ. ಜಿ. ಎಸ್. ಚೌಧರಿ ರವರ ಮಾಲೀಕತ್ವದ ನೂತನ “ಪವರ್ ರ್ಸ್ಪೋರ್ಟ್ಸ್” ಮಳಿಗೆಯನ್ನು,
ಅವರ ಪೂಜ್ಯ ಮಾತಾಪಿತೃರಾದ ಶ್ರೀಮತಿ ಜಿ. ಎಸ್. ಶಾಂತಮ್ಮ ಹಾಗೂ ಶ್ರೀ ಜಿ. ಎನ್. ಶ್ರೀರಾಮುಲು ನಾಯ್ಡುರವರು ಜ್ಯೋತಿಯನ್ನು ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಈ ನೂತನ ಮಳಿಗೆಯಲ್ಲಿ, ಗುಣಮಟ್ಟ ಹಾಗೂ ವೈಜ್ಞಾನಿಕವಾಗಿ ವಿನ್ಯಾಸಗೊಳಿಸಲಾದ ದ್ವಿಚಕ್ರ ವಾಹನ ಸವಾರರಿಗೆ, ಸುರಕ್ಷಿತ ವಾಹನ ಚಾಲನೆಗೆ ಪೂರಕವಾಗುವಂತಹ ಪ್ರಖ್ಯಾತ ಭಾರತೀಯ ಕೊರ್ದ ಕಂಪನಿಯ ಉತ್ಪನ್ನ ಸೇರಿದಂತೆ ಎಂ ಟಿ, ಕೆ ಆರ್ ಇ ಪ್ಲಸ್, ಮೋಟೋ ಜಿ ಪಿ ಗಳಿಂದ ಅನುಮೋದನೆ ಗಳಿಸಿರುವ ವಿಶ್ವಮಟ್ಟದಲ್ಲಿ ಹೆಸರು ಮಾಡಿರುವ ಸ್ಪೇನ್ ದೇಶದ ಎಂ ಟಿ ಹಾಗೂ ಆಕ್ಸಿಸ್ ಬ್ರಾಂಡ್ ನ ತಾರೇಹವಾರಿ ಉತ್ಪನ್ನಗಳ, ಅನೇಕ ಬಗೆಯ ಆಧುನಿಕ ವಿನ್ಯಾಸಗಳ ಉಡುಗೆ ತೊಡುಗೆ ಹಾಗೂ ರೈಡರ್ ಶೂಗಳು ಇಲ್ಲಿ ಲಭ್ಯ. 2018 ರಲ್ಲಿ ಸ್ಥಾಪನೆಯಾದ ಚೆನ್ನೈ ಮೂಲದ “ಪವರ್ ರ್ಸ್ಪೋರ್ಟ್ಸ್” ಕಂಪನಿ ಮಳಿಗೆಗಳು ದೆಹಲಿ, ಹೈದರಾಬಾದ್, ತಮಿಳು ನಾಡು ಹಾಗೂ ನಮ್ಮ ನಗರದ ಹೆಚ್ ಎಸ್ ಆರ್ ಬಡಾವಣೆ, ಲಾಲ್ ಬಾಗ್, ಕಲ್ಯಾಣ ನಗರ, ವೈಟ್ ಫೀಲ್ಡ್ ನಲ್ಲಿಯೂ ಈಗಾಗಲೇ ಕಾರ್ಯ ನಿರ್ವಹಿಸುತ್ತಿದ್ದು, ಬೆಂಗಳೂರಿನ ದಕ್ಷಿಣ ಭಾಗದ ಜಯನಗರದ ಈಸ್ಟ್ ಎಂಡ್ ವೃತ್ತದ ಬಳಿಯಲ್ಲಿ ಇದು ಐದನೇ ಮಳಿಗೆ, ಉದ್ಘಾಟನೆ ಸಂದರ್ಭದಲ್ಲಿ ಕಂಪನಿ ಸಿಇಓ ಸುನಿಲ್ ಮ್ಯಾಥಿವ್ ಸಿಲ್ವ, ಕರ್ನಾಟಕ ಡಿಸ್ಟ್ರಿಬ್ಯೂಟರ್ ಮುಖ್ಯಸ್ತ ಜೆಗನ್ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *