ಮಾಜಿ ಸಚಿವ, ಶಾಸಕ ಮುನಿರತ್ನ ಬಲಗೈ ಬಂಟ ಜಿ.ಕೆ.ವೆಂಕಟೇಶ್ ಅರೆಸ್ಟ್

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಮುನಿರತ್ನ ನ ಬಲಗೈ ಬಂಟ ಮಾಜಿ ಕಾರ್ಪೊರೇಟರ್ ಜಿ.ಕೆ ವೆಂಕಟೇಶ್ ಅರೆಸ್ಟ್ ಆಗಿದ್ದಾರೆ.
ಯಶವಂತಪುರ ಪೊಲೀಸರಿಂದ ಶುಕ್ರವಾರ ಸಂಜೆ ಬಂಧನ ಮಾಡಲಾಗಿದೆ. ಗುತ್ತಿಗೆದಾರನ ಕಿಡ್ನಾಪ್ ಮಾಡಿ ಮೂರು ಕೋಟಿಗೆ ಡಿಮ್ಯಾಂಡ್ ಆರೋಪದಡಿಯಲ್ಲಿ ವೆಂಕಟೇಶನನ್ನು ಬಂಧಿಸಲಾಗಿದ್ದು, ಯಶವಂತಪುರ ವಾರ್ಡ್ ಕಾಮಗಾರಿ ಗುತ್ತಿಗೆ ಪಡೆದಿದ್ದ ಕಂಟ್ರಾಕ್ಟರ್ ಚಂದ್ರು ಎಂಬುವವರನ್ನು ಮಾಜಿ ಕಾರ್ಪೊರೇಟರ್ ವೆಂಕಟೇಶ್ ಕಿಡ್ನಾಪ್ ಮಾಡಿ ಮೂರು ಕೋಟಿಗೆ ಡಿಮ್ಯಾಂಡ್ ಮಾಡಿರುವ ಬಗ್ಗೆ ಖಚಿತ ಆಧಾರದ ಮೇರೆಗೆ ಯಶವಂತಪುರ ವೆಂಕಟೇಶನನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ನಿನ್ನಿಂದ ನನಗೆ ನಷ್ಟ ಆಗಿದೆ ಕಾಮಗಾರಿ ನನಗೆ ಕೈ ತಪ್ಪಿದೆ ಗುತ್ತಿಗೆ ಕೈ ತಪ್ಪಿದೆ ಎಂದು ಕಿಡ್ನಾಪ್ ಮಾಡಿರುವ ಆರೋಪ ಎನ್ನಲಾಗಿದ್ದು. ಎರಡು ದಿನಗಳ ಹಿಂದೆ ಗುತ್ತಿಗೆದಾರ ಚಂದ್ರುವನ್ನು ಕಿಡ್ನಾ÷್ಯಪ್ ಮಾಡಿ ಮೂರು ಕೋಟಿ ಚೆಕ್ ಪಡೆದು ಹಲ್ಲೆ ಮಾಡಿರುವ ಆರೋಪ.
ಚಂದ್ರುವಿನಿ0ದ ಗುತ್ತಿಗೆದಾರ ಚಂದ್ರುವಿನಿ0ದ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪ ಹೊತ್ತಿರುವ ಜಿಕೆ ವೆಂಕಟೇಶ್ ಶಾಸಕ ಮುನಿರತ್ನನ ಬಲಗೈ ಬಂಟನೂ ಹೌದು ಎನ್ನಲಾಗಿದೆ. ಕಿಡ್ನಾಪ್ ಮಾಡಿದ್ದಲ್ಲದೆ ಮೂರು ಕೋಟಿ ಚೆಕ್ಕನ್ನು ಪಡೆದು ಹಲ್ಲೆ ಕೂಡ ಮಾಡಿರುವ ಆರೋಪ ಹೊತ್ತಿರುವ ಮಾಜಿ ಕಾರ್ಪೊರೇಟರ್ ಜಿ.ಕೆ ವೆಂಕಟೇಶ್. ಚಂದುವಿನಿ0ದ ಕಾರ್ಪೊರೇಟರ್ ನಷ್ಟ ಆಗಿದೆ ಗುತ್ತಿಗೆ ಕಾಮಗಾರಿ ಕೈ ತಪ್ಪಿದೆ ಎಂದು ಚಂದ್ರುವಿನನ್ನು ಕಿಡ್ನಾ÷್ಯಪ್ ಮಾಡಿ ಹಲ್ಲೆ ಮಾಡಿದ್ದಾರೆ. ಜಿಕೆ ವೆಂಕಟೇಶನನ್ನು ಯಶವಂತಪುರ ಪೊಲೀಸರು ಬಂಧಿಸಿ ವಿಚಾರಣೆಯನ್ನು ನಡೆಸಿ, ನ್ಯಾಯಾಧೀಶರ ಮುಂದೆ ನಿಲ್ಲಿಸಿದ್ದಾರೆ. ಗುತ್ತಿಗೆದಾರ ಚಂದ್ರು ಎಂಬುವವರು ಇಂದು ಶುಕ್ರವಾರ ಬೆಳಗ್ಗೆ ಯಶವಂತಪುರ ಪೊಲೀಸರಿಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ತನಿಖೆಯಾಗಿ ಎಫ್ ಐ ಆರ್ ದಾಖಲಾಗಿದೆ. ಸಿಸಿಬಿ ಮತ್ತು ಪೊಲೀಸರ ಜಂಟಿ ಕಾರ್ಯಾಚರಣೆ ಇದಾಗಿದೆ.