ಅರಣ್ಯ ಇಲಾಖೆ ಅಧಿಕಾರಿಗಳ ನಡೆ ಶ್ರೀಮಂತರ ರಕ್ಷಣೆಯ ಕಡೆ : ನಾಗೇಶ್ ಎನ್.
ಬೆಂಗಳೂರು :ಬಡವರಿಗೆ ಒಂದು ನ್ಯಾಯ, ಶ್ರೀಮಂತರಿಗೆ ಒಂದು ನ್ಯಾಯ ಎಂಬ ರೀತಿಯಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯವೈಖರಿಯನ್ನು ಖಂಡಿಸಿ,
ಸರ್ಕಾರ ಹಾಗೂ ಅರಣ್ಯ ಇಲಾಖೆಯು ಪ್ರಭಾವಿಗಳು ಹಾಗೂ ಶ್ರೀಮಂತರ ರಕ್ಷಣೆಗೆ ಮುಂದಾಗಿದೆಯೇ ಎಂಬ ಅನುಮಾನ ಮೂಡಿಸಿದೆ,
ಬಡವರಿಗೆ ಹಾಗೂ ಕಾನೂನಿನ ಅರಿವಿಲ್ಲದ ಅಮಾಯಕರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತಿರುವುದು ಆ ಅನುಮಾನವನ್ನು ಪುಷ್ಠಿಕರಿಸುವ ರೀತಿಯಲ್ಲಿದೆ. ಆದ್ದರಿಂದ ಈ ಹುಲಿಯ ಉಗುರು ಹಗರಣವನ್ನು ಸಿ.ಬಿ.ಐ. ಗೆ ವರ್ಗಾಯಿಸುವಂತೆ ಒತ್ತಾಯಿಸಿ ಜನತಾ ಪಕ್ಷವು ಆಗ್ರಹಿಸುತ್ತಿದೆ ಎಂದು ಪಕ್ಷದ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ನಾಗೇಶ್ ಎನ್. ಅವರು ಪಕ್ಷದ ಕೇಂದ್ರ ಕಛೇರಿಯಲ್ಲಿ ಶನಿವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಸರಕಾರವನ್ನು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಇತರೆ ಮುಖಂಡರುಗಳಾದ ರಾಜು ಮುಂತಾದರು ಉಪಸ್ಥಿರಿದ್ದರು.
