ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಎಲ್ಲ ವಾರ್ಡ್ ಗಳಲ್ಲಿ ಇಂದು ಮಾಜಿ ಸಚಿವರು ಹಾಗೂ ಸ್ಥಳೀಯ ಶಾಸಕರಾದ ಕೆ ಗೋಪಾಲಯ್ಯ ರವರ ಮಾರ್ಗದರ್ಶನದಲ್ಲಿ ಮಂಡಲ ಅಧ್ಯಕ್ಷರಾದ ರಾಘವೇಂದ್ರ ಶೆಟ್ಟಿ ಅವರ ನೇತೃತ್ವದಲ್ಲಿ ಇಂದು ದೆಹಲಿಯ ಕರ್ತವ್ಯಪಥದಲ್ಲಿ ಹುತಾತ್ಮರ ಗೌರವಾರ್ಥ ನಿರ್ವಿುಸಲಿರುವ ‘ಅಮೃತ ಉದ್ಯಾನವನ’ಕ್ಕೆ ಮನೆಯಂಗಳದಿ ಸಂಗ್ರಹಿಸಿದ ಮಣ್ಣು ನನ್ನ ಮಣ್ಣು ನನ್ನ ದೇಶ ಅಭಿಯಾನ ನಾಳೆಗೆ ಕೊನೆಗೊಳ್ಳುತ್ತದೆ. ಇಲ್ಲಿ ಸಂಗ್ರಹವಾದ ಮಣ್ಣನ್ನು ನವದೆಹಲಿಯಲ್ಲಿ ಸೈನಿಕರ ನೆನಪಿನಲ್ಲಿ ಸ್ಥಾಪನೆಯಾಗಲಿರುವ ವನದಲ್ಲಿ, ದೇಶದ ವಿವಿಧೆಡೆಯಿಂದ ಬಂದ ಈ ಮಣ್ಣನ್ನು ಹಾಕಲಾಗುತ್ತದೆ.


ಅಲ್ಲಿ ಸೈನಿಕರಿಗೆ ವಂದನೆ ಸಲ್ಲಿಸುವ ಗುರುತು, ವನ ನಿರ್ಮಾಣ ಮಾಡಲಾಗುತ್ತದೆ. ಹೀಗಾಗಿ ಕ್ಷೇತ್ರದ ನಂದಿನಿ ಲೇಔಟ್, ಮಾರಪ್ಪನಪಾಳ್ಯ ಶಂಕರಮಠ ಸೇರಿದಂತೆಎಲ್ಲ 8 ವಾರ್ಡ್ ಗಳಲ್ಲಿ ಬೆಳಗ್ಗೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮಣ್ಣು ಸಂಗ್ರಹಿಸಿ ದೆಹಲಿಗೆ ಕಳಿಸಿಕೊಡಲಾಗುತ್ತದೆ.
ಇಂದು ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ನಂದಿನಿ ಲೇಔಟ್ ನಲ್ಲಿರುವ ಸರ್ಕ್ಯುಲರ್ ಪಾರ್ಕ್ ನಲ್ಲಿ ಇಂದು ಬೆಳಗ್ಗೆ ಹೆಮ್ಮೆಯ ಪ್ರಧಾನ ಮಂತ್ರಿ ಗಳಾದ ನರೇಂದ್ರ ಮೋದಿಯವರ ಕರೆಯಂತೆ ನನ್ನ ಮಣ್ಣು ನನ್ನ ದೇಶಎಂಬ ಅಭಿಯಾನದಡಿ ಕಾರ್ಯಕ್ರಮ ನಡೆಯಿತು. ಕ್ಷೇತ್ರದ ಬಿಜೆಪಿ ಸಂಚಾಲಕರಾದ ಸಂಪತ್ ಕುಮಾರ್, ವಾರ್ಡ್ ಅಧ್ಯಕ್ಷ ರಾದ ಲೋಕೇಶ್, ಒಬಿಸಿ ಮೋರ್ಚಾದ ರಂಗಸ್ವಾಮಿ ಮಂಡಲ ಕಾರ್ಯಕಾರಿಣಿ ಯ ಡಿಕೆ ರಾಮಚಂದ್ರ ಹಾಗೂ ಕ್ಷೇತ್ರ ಬಿಜೆಪಿ ಸಾಮಾಜಿಕ ಜಾಲ ತಾಣದ ಅಶೋಕ್ ಕುಮಾರ್ ರಾಘವೇಂದ್ರ,ಸೇರಿದಂತೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಹಾಗೂ ವಿಕಾಸ ವೇದಿಕೆಯ ವೆಂಕಟೇಶ್ ಶಾಸ್ತ್ರಿ, ಜಯದೇವ, ಸೇರಿದಂತೆ ಹಲವರು ಹಾಜರಿದ್ದರು.