ರವೀಂದ್ರನಾಥ ಠಾಗೋರ್ ನಗರದಲ್ಲಿ ಆರ್ ಎಸ್ ಎಸ್ ಪಥಸಂಚಲನ

ಬೆಂಗಳೂರು : ರಾಷ್ಟ್ರೀಯ ಸ್ವಯಂಸೇವಕ ಸಂಘದ ಹೆಬ್ಬಾಳ ಭಾಗ‌ದ ವಿಜಯದಶಮಿಯ‌ ಪಥಸಂಚಲನ ಭಾನುವಾರ ರವೀಂದ್ರನಾಥ ಠಾಗೋರ್ ನಗರದಲ್ಲಿ ನಡೆಯಿತು.

1925 ರಲ್ಲಿ ವಿಜಯದಶಮಿಯ ದಿನ ರಾಷ್ಟ್ರೀಯ ಸ್ವಯಂಸೇವಕ ಸಂಘ ಸ್ಥಾಪನೆಯಾಯಿತು. ಅಂದಿನಿಂದ ಇಂದಿನವರೆಗೂ ಸ್ವಯಂಸೇವಕರು ವಿಜಯದಶಮಿಯ‌ ಅಂಗವಾಗಿ ಪಥಸಂಚಲನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಆಕರ್ಷಕ ಪಥಸಂಚಲನದಲ್ಲಿ 550 ಕ್ಕೂ ಹೆಚ್ಚು ಗಣವೇಶಧಾರಿ ಸ್ವಯಂಸೇವಕರು ಭಾಗವಹಿಸಿದ್ದರು. ರಸ್ತೆಯ ಇಕ್ಕೆಲಗಳಲ್ಲಿ ಸಾರ್ವಜನಿಕರು ನಿಂತು ಪಥಸಂಚಲನ ವೀಕ್ಷಿಸುತ್ತಿದ್ದುದು ಕಂಡುಬಂದಿತು. ಹಾಗೂ ಹಲವಾರು ಕಡೆ ಪುಷ್ಟವೃಷ್ಟಿಯನ್ನು ಮಾಡಿ ಸ್ವಾಗತಿಸುತ್ತಿದ್ದರು.

Leave a Reply

Your email address will not be published. Required fields are marked *