ಐಸಿರಿ ಕನ್ನಡ ರಾಜ್ಯೋತ್ಸವ ಆಚರಣೆ
ಭಾರತದ ಪ್ರತಿಷ್ಠಿತ ಹಾಗೂ ಕನ್ನಡಿಗರ ಹೆಮ್ಮೆಯ ಯು.ಪಿ.ಎಸ್.ಸಿ ಮತ್ತು ಕೆ.ಪಿ.ಎಸ್.ಸಿ ತರಬೇತಿ ಸಂಸ್ಥೆಯಾಗಿರುವ ಇನ್ಸೈಟ್ಸ್ ಐಎಎಸ್ ವತಿಯಿಂದ ಕನ್ನಡ ನಾಡು ನುಡಿ ಹಾಗೂ ಸಂಸ್ಕೃತಿಯ ಹಬ್ಬವಾದ ಕರ್ನಾಟಕ ರಾಜ್ಯೋತ್ಸವವನ್ನು , ‘ಐಸಿರಿ, ಕರುನಾಡ ಸಾಂಸ್ಕೃತಿಕ ಹಬ್ಬ’ ವಾಗಿ ದಿನಾಂಕ 6 ನವೆಂಬರ್ , 2023 ರಂದು ಸಂಭ್ರಮದಿಂದ ಹಮ್ಮಿಕೊಂಡಿರುತ್ತೇವೆ.


ವಿಜಯನಗರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಎಂ.ಕೃಷ್ಣಪ್ಪನವರು, ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ(KDP) ಜಿಲ್ಲಾ ಸಮಿತಿ ಸದಸ್ಯರು ಹಾಗೂ ವರುಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಯತೀಂದ್ರ ಸಿದ್ದರಾಮಯ್ಯನವರು, ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಪ್ರಿಯಕೃಷ್ಣರವರು, ಮಾಜಿ ವಿಧಾನಪರಿಷತ್ ಸದಸ್ಯರಾದ ಶ್ರೀ ಪುಟ್ಟಣ್ಣನವರು ಸ್ಥಳಿಯ ಮುಖಂಡರಾದ ಶ್ರೀ ಡಿ.ರವಿಶಂಕರ್ ರವರು ಹಾಗು ಚಲನಚಿತ್ರ ಕಲಾವಿದರು ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ.
ಕರ್ನಾಟಕದಲ್ಲಿ ಕನ್ನಡ ರಾಜ್ಯೋತ್ಸವವು ವಿಜೃಂಭಣೆಯಿಂದ ನಡೆದು, ರಾಜ್ಯೋತ್ಸವವು ನಿತ್ಯೋತ್ಸವವಾಗಬೇಕೆಂಬುದು ನಮ್ಮ ಆಶಯ. ಆದುದರಿಂದ ಪತ್ರಿಕಾ ಪ್ರತಿನಿಧಿಗಳು, ನಾಗರೀಕರು, ವಿದ್ಯಾರ್ಥಿಗಳು ತಮ್ಮ ಅಮೂಲ್ಯವಾದ ಸಮಯವನ್ನು ಮೀಸಲಿಟ್ಟು, ಸಮಾರಂಭಕ್ಕೆ ಆಗಮಿಸಿ ಈ ಹಬ್ಬದ ಮೆರುಗನ್ನು ಇನ್ನಷ್ಟು ಹೆಚ್ಚಿಸಬೇಕಾಗಿ ಹೃದಯಪೂರ್ವಕವಾಗಿ ಆಹ್ವಾನಿಸುತ್ತೇವೆ.
ಕಾರ್ಯಕ್ರಮದ ಸಮಯ ಹಾಗೂ ಸ್ಥಳ : ನವೆಂಬರ್ 6 , ಸಂಜೆ 05:00 ಕ್ಕೆ , ಇನ್ಸೈಟ್ಸ್ ಐ.ಎ.ಎಸ್, ಪ್ರಧಾನ ಕಚೇರಿ , ನಂದಾ ಆಶಿರ್ವಾದ್ ಕಾಂಪ್ಲೆಕ್ಸ್ ,ವಿಲೇಜ್ ಹೈಪರ್ ಮಾರ್ಕೆಟ್ , ಚಂದ್ರ ಲೇಔಟ್ ಮುಖ್ಯ ರಸ್ತೆ, ದ್ವಾರಕಾ ನಗರ, ಅತ್ತಿಗುಪ್ಪೆ, ಬೆಂಗಳೂರು – 560040
ಈ ಅರ್ಥಪೂರ್ಣ ಕಾರ್ಯಕ್ರಮಕ್ಕೆ ತಮ್ಮ ಘನ ಮಾಧ್ಯಮದ ಪ್ರತಿನಿಧಿಗಳಾಗಿ ತಾವು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸುತ್ತೇವೆ.
ವಿನಯ್ ಕುಮಾರ್ ಜಿ.ಬಿ
ಸಂಸ್ಥಾಪಕ ನಿರ್ದೇಶಕರು, ಇನ್ಸೈಟ್ಸ್ ಐ.ಎ.ಎಸ್
ನಂದ ಆಶಿರ್ವಾದ್ ಕಾಂಪ್ಲೆಕ್ಸ್ , 3 ನೇ ಮಹಡಿ, ವಿಲೇಜ್ ಹೈಪರ್ ಮಾರ್ಕೆಟ್,
ಚಂದ್ರ ಲೇಔಟ್ ಮುಖ್ಯ ರಸ್ತೆ, ಬೆಂಗಳೂರು – 560040