38ನೇ ರಾಜ್ಯ ಪತ್ರಕರ್ತರ ಸಮ್ಮೇಳನ
ಲಾಂಛನ ಅನಾವರಣ ಮಾಡಿದ ಸಿಎಂ

ಬೆಂಗಳೂರು:
ದಾವಣಗೆರೆಯಲ್ಲಿ ನಡೆಯಲಿರುವ 38ನೇ ರಾಜ್ಯ ಪತ್ರಕರ್ತರ ಸಮ್ಮೇಳನದ ಲಾಂಛನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿಂದು ಅನಾವರಣಗೊಳಿಸಿ, ಶುಭ ಹಾರೈಸಿದರು.


ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ(ಕೆಯುಡಬ್ಲೂೃಜೆ) ಪ್ರತಿ ವರ್ಷ ಆಯೋಜಿಸುವ ಸಮ್ಮೇಳನದ ಉದ್ಘಾಟನೆಗೆ ಆಗಮಿಸಬೇಕು ಎನ್ನುವ ಸ್ವಾಗತ ಸಮಿತಿ ಮನವಿಗೆ ಪ್ರತಿಸ್ಪಂಧಿಸಿದ ಮುಖ್ಯಮಂತ್ರಿಗಳು, ಸಮ್ಮೇಳನಕ್ಕೆ ಸರ್ಕಾರದಿಂದ ನೆರವು ನೀಡುವುದಾಗಿ ಭರವಸೆ ನೀಡಿದರು.
ಸಚಿವ ಎಸ್.ಎಸ್. ಮಲ್ಲಿಕಾರ್ಜುನ ನೇತೃತ್ವದಲ್ಲಿ ನೀವೆಲ್ಲರೂ ಬಂದಿದ್ದೀರಿ. ಶೀಘ್ರವೇ ದಿನಾಂಕ ಕೊಟ್ಟು, ಉದ್ಘಾಟನೆಗೂ ಬರುತ್ತೇನೆ ಎಂದು ಹೇಳಿದರು.
ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್, ಜಿಲ್ಲಾಧ್ಯಕ್ಷ ಇ.ಎಂ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಎ.ಫಕೃದ್ಧೀನ್,
ರಾಜ್ಯ ಸಮಿತಿಯ ದೇವರಾಜ್, ಕೆ.ಚಂದ್ರಣ್ಣ, ಪದಾಧಿಕಾರಿಗಳಾದ ಒಡೆಯರ್, ಬದರಿನಾಥ್, ತಿಪ್ಪೇಸ್ವಾಮಿ, ಪ್ರಕಾಶ್, ನಿಂಗೋಜಿರಾವ್, ವೀರೇಶ್, ಮಂಜುನಾಥ್ ಪಿ.ಕಾಡಜ್ಜಿ, ಕೃಷ್ಣೋಜಿರಾವ್, ವೇದಮೂರ್ತಿ, ಗುರುಮೂರ್ತಿ,ಚಂದ್ರಶೇಖರ್, ಕೆ.ಜೈಮುನಿ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *