ಕೆ.ಪಿ.ಸಿಸಿ. ರಾಜ್ಯ ವಕ್ತಾರರಾಗಿ ಇರ್ಷಾದ್ ಅಹ್ಮದ್ ಶೇಖ್

ಬೆಂಗಳೂರು : ಕಾಂಗ್ರೆಸ್ ಪಕ್ಷದ ನಾಯಕ ಇರ್ಷಾದ್ ಅಹ್ಮದ್ ಶೇಖ್ ಅವರನ್ನು ರಾಜ್ಯ ವಕ್ತಾರರನ್ನಾಗಿ ನಾಮಕ ಮಾಡಲಾಗಿದೆ. ಕೆ.ಪಿ.ಸಿ.ಸಿ. ಅಧ್ಯಕ್ಷರು ಹಾಗೂ ಉಪ ಮುಖ್ಯಮಂತ್ರಿಗಳೂ ಆದ ಡಿ.ಕೆ. ಶಿವಕುಮಾರ್ ಅವರ ಆದೇಶದ ಮೇರೆಗೆ ಈ ಕೂಡಲೇ ಜಾರಿಗೆ ಬರುವಂತೆ ನೇಮಿಸಿದ್ದಾರೆ.
ಕೆ.ಪಿ.ಸಿ.ಸಿ. ಮಆಧ್ಯಮ ವಕ್ತಾರರು ಹಾಗೂ ಸಂವನಹಾ ವಿಭಾಗದ ಅಧ್ಯಕ್ಷರೂ ಆಗಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇರ್ಷಾದ್ ಅಹ್ಮದ್ ಶೇಖ್ ಅವರು ಬೆಳಗಾವಿ ಮೂಲದವರಾಗಿದ್ದು, ಹಿರಿಯ ಸ್ವಾತಂತ್ರö್ಯ ಹೋರಾಟಗಾರರು ಹಾಗೂ ಮಾಜಿ ಶಾಸಕರೂ ಆದ ದಿ. ಕೆ.ಎ. ಶೇಖ್ ಅವರ ಮೊಮ್ಮಗ ಎನ್ನಲಾಗಿದ್ದು, ಈಗಾಗಲೇ ಕೆ.ಪಿ.ಸಿ.ಸಿ.ಯ ಹಲವಾರು ಚಟವಟಿಕೆಗಳಲ್ಲಿ ಭಾಗವಹಿಸಿ ಪಕ್ಷದ ಇರ್ಷಾದ್ ಅಹ್ಮದ್ ಶೇಖ್ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದ್ದಾರೆ.