ದೀಪಾವಳಿ ಪಟಾಕಿಗಳಿಂದಾದ ಅಪಘಾತಗಳ ಮಾಹಿತಿ
ನಾರಾಯಣ ನೇತ್ರಾಲಯದಲ್ಲಿ ನವೆಂಬರ್ 15, 2023 ರ ಬೆಳಿಗ್ಗೆ 8 ಗಂಟೆಯವರೆಗೆ ದೀಪಾವಳಿ ಪಟಾಕಿ ಅಪಘಾತದಿಂದ ಒಟ್ಟು 51 ರೋಗಿಗಳು ಚಿಕಿತ್ಸೆ ಪಡೆದಿರುತ್ತಾರೆ. ಗಾಯಗೊಂಡವರಲ್ಲಿ 3 ರಿಂದ 9 ವರ್ಷದೊಳಗಿನ ವಯಸ್ಸಿನ 22 ಮಂದಿ ಮಕ್ಕಳೇ ಆಗಿದ್ದಾರೆ, 23 ವ್ಯಕ್ತಿಗಳು ನೋಡುಗರಾಗಿದ್ದರು ಮತ್ತು 28 ಮಂದಿ ಪಟಾಕಿಗಳನ್ನು ಸಿಡಿಸುವಾಗ ಗಾಯಗೊಂಡಿದ್ದಾರೆ.
ಎಲ್ಲಾ ರೋಗಿಗಳು ತುರ್ತು ವೈದ್ಯಕೀಯ ಚಿಕಿತ್ಸೆಯನ್ನು ಪಡೆದಿದ್ದಾರೆ ಮತ್ತು ಬೊಮ್ಮಸಂದ್ರದ ನಾರಾಯಣ ನೇತ್ರಾಲಯದಲ್ಲಿ ಒಂದು ಪ್ರಕರಣ ಮಾತ್ರ ಸ್ಕ್ಲೆರಲ್ ಟಿಯರ್ ಎಂಬ ತುರ್ತು ಶಸ್ತ್ರಚಿಕಿತ್ಸೆಯ ಅಗತ್ಯವಿತ್ತು ಎಂದು ತಿಳಿದು ಬಂದಿದೆ.
ಆAಧ್ರಪ್ರದೇಶದ ಅಹೋಬಿಲಂ ಮೂಲದ 40 ವರ್ಷದ ಮಹಿಳೆಯೊಬ್ಬರು ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಾಗ ಪಕ್ಕದಲ್ಲಿ ಸಿಡಿಸಿದ ಪಟಾಕಿಯಿಂದ ಅವರ ಕಣ್ಣಿಗೆ ಅಪಘಾತವಾಗಿದೆ. ಪಟಾಕಿಯು ಅನಿರೀಕ್ಷಿತವಾಗಿ ವಾಹನವನ್ನು ಪ್ರವೇಶಿಸಿ ಆಕೆಯ ಕಣ್ಣಿಗೆ ಬಿದ್ದಿದೆ. ತಕ್ಷಣದ ವೈದ್ಯಕೀಯ ಆರೈಕೆಯನ್ನು ಕೋರಿ, ಅವರು ನಾರಾಯಣ ನೇತ್ರಾಲಯದಲ್ಲಿ ಸಂಪೂರ್ಣ ಆರೈಕೆಯನ್ನು ಪಡೆದಿದ್ದಾರೆ.
ರೋಗಿಗಳಿಗೆ ನಡೆಸಿದ ಸಮಗ್ರ ತನಿಖೆಗಳಲ್ಲಿ ಕಣ್ಣುಗಳನ್ನು ಸ್ವಚ್ಛಗೊಳಿಸುವುದರೊಂದಿಗೆ, ಬೈಲ್ಯಾಟರಲ್ ಕಾರ್ನಿಯಾ ಲಿಂಬಾಲ್ (ಬಿಸಿಎಲ್) ಮೌಲ್ಯಮಾಪನಗಳು, ಟೆಟನಸ್ ಟಾಕ್ಸಾಯ್ಡ್ (ಟಿಟಿ) ಚುಚ್ಚುಮದ್ದುಗಳು, ಔಷಧಿಗಳ ನಿರ್ವಹಣೆ ಮತ್ತು ಸಿಟಿ ಸ್ಕ್ಯಾನ್‍ಗಳು ಮತ್ತು ಕಕ್ಷೆ ಮತ್ತು ಮೂಗಿನ ಎಕ್ಸ್-ರೇಗಳಂತಹ ರೋಗನಿರ್ಣಯ ಪರೀಕ್ಷೆಗಳನ್ನು ಮಾಡಲಾಗಿದ್ದು ಸೂಕ್ತ ಚಿಕಿತ್ಸೆ ನೀಡಲಾಗಿದೆ.
ನಮ್ಮ ಪ್ರಥಮ ಆದ್ಯತೆಯು ರೋಗಿಗಳಿಗೆ ತಕ್ಷಣದ ಮತ್ತು ಪರಿಣಾಮಕಾರಿ ಪ್ರಥಮ ಚಿಕಿತ್ಸೆ ಒದಗಿಸುವುದಾಗಿದೆ. ಕಣ್ಣುಗಳಲ್ಲಿನ ಪಟಾಕಿಯ ಸಿಡಿತದ ಕಣಗಳಂತಹ ಸಮಸ್ಯೆಗಳನ್ನು ಪರಿಹರಿಸುವುದು. ಸಂಪೂರ್ಣ ಶುಚಿಗೊಳಿಸುವಿಕೆ ಮತ್ತು ಕಾಳಜಿಯ ಆರೈಕೆಯಿಂದ ಕೆಲವು ಸಂದರ್ಭಗಳಲ್ಲಿ ಪ್ಯಾಚ್ ಅಗತ್ಯವಿರುತ್ತದೆ. ಅವರಲ್ಲಿ ಸುಮಾರು 10 – 12 ಮಂದಿಗೆ ಕಣ್ಣಿನೊಳಗೆ ರಕ್ತಸ್ರಾವವಾಗಿತ್ತು, ಚಿಕಿತ್ಸೆಯ ನಂತರ ಅದು ಕ್ರಮೇಣ ಸುಧಾರಿಸುತ್ತಿದೆ. ಮಕ್ಕಳಲ್ಲಿ, ಸ್ಫೋಟದ ಕಣಗಳು ಅವರ ಕಣ್ರೆಪ್ಪೆ ಮತ್ತು ಕಾರ್ನಿಯಾದ ಮೇಲೆ ಪರಿಣಾಮ ಬೀರಿದರೆ, ನಾವು ಕ್ಲಿಪ್ ಅನ್ನು ಬಳಸಿ ಸೂಕ್ಷ್ಮವಾಗಿ ಬಹಳ ಎಚ್ಚರಿಕೆಯಿಂದ ಸ್ವಚ್ಛಗೊಳಿಸುತ್ತೇವೆ ಮತ್ತು ಅವರ ಗುಣಪಡಿಸುವ ಪ್ರಕ್ರಿಯೆಯಲ್ಲಿ ಪ್ಯಾಡ್ ಅನ್ನು ಬಳಸುತ್ತೇವೆ. ಅವರ ಚೇತರಿಕೆಗೆ ಅನುಕೂಲವಾಗುವಂತೆ ಪ್ರತಿಯೊಂದು ಹೆಜ್ಜೆಯನ್ನು ನಿಖರವಾಗಿ ತೆಗೆದುಕೊಳ್ಳಲಾಗಿದೆ.” ಎಂದು ಡಾ. ರೋಹಿತ್ ಶೆಟ್ಟಿ, ಅಧ್ಯಕ್ಷರು, ನಾರಾಯಣ ನೇತ್ರಾಲಯ ತಿಳಿಸಿದ್ದಾರೆ.
ಗ್ರೂಪ್ ಕ್ಯಾಪ್ಟನ್ ಎಸ್ ಕೆ ಮಿತ್ತಲ್ ವಿ ಎಸ್ ಎಂ
ಸಿಇಓ, ನಾರಾಯಣ ನೇತ್ರಾಲಯ,
ರಾಜಾಜಿನಗರ, ಬೆಂಗಳೂರು-10