ಮಾಜಿ ಶಾಸಕರುಗಳಾದ ಆರ್. ಮಂಜುನಾಥ್, ಡಿ. ಸಿ. ಗೌರಿಶಂಕರ್ ಕಾಂಗ್ರೆಸ್ ಸೇರ್ಪಡೆ

ಮಾಜಿ ಶಾಸಕರುಗಳಾದ ಆರ್. ಮಂಜುನಾಥ್, ಡಿ. ಸಿ. ಗೌರಿಶಂಕರ್, ಹಾಸನ ಕ್ಷೇತ್ರದ ಮುಖಂಡ ಟಿ. ಆರ್. ಪ್ರಸಾದ್ ಗೌಡರ ನೇತೃತ್ವದಲ್ಲಿ ಕಾರ್ಯಕರ್ತರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.

101ನಗರದ ಕೆಪಿಸಿಸಿ ಕಛೇರಿಯಲ್ಲಿಂದು ಜೆಡಿಎಸ್ ಪಕ್ಷವನ್ನು ತೊರೆದು ಸಂಕೇತಿಕವಾಗಿ 101 ಜನ ನಾಯಕರು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡರು. ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕರು ಆರ್. ಮಂಜುನಾಥ್, ತುಮಕೂರು ಮಾಜಿ ಶಾಸಕರು ಡಿ. ಸಿ. ಗೌರಿಶಂಕರ್, ಹಾಸನ ಕ್ಷೇತ್ರದಲ್ಲಿ ಪ್ರಭಾವಿ ಜನನಾಯಕ ಟಿ. ಆರ್. ಪ್ರಸಾದ್ ಗೌಡರು, ದಾಸರಹಳ್ಳಿ ಕ್ಷೇತ್ರದ ಜೆಡಿಎಸ್ ಕಾರ್ಯಾಧ್ಯಕ್ಷರು ಕಮ್ಮಗೊಂಡನಹಳ್ಳಿಯ ಕೆ. ಸಿ. ವೆಂಕಟೇಶ್ (ದೇವೇಗೌಡರು), ರಾಜ್ಯ ಜೆಡಿಎಸ್ ವಕ್ತಾರರು ಡಾ. ಎಂ. ಚರಣ್ ಗೌಡರು,
ಮಾಜಿ ಮೇಯರ್ ಶಾರದಮ್ಮ ರಾಮಜಿನಪ್ಪನವರು, ಮಾಜಿ ಕಾರ್ಪೊರೇಟರ್ ತಮ್ಮಣ್ಣರವರು ಮುಖ್ಯ ಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯ ಮಂತ್ರಿ ಡಿ. ಕೆ. ಶಿವಕುಮಾರ್ ರವರ ಸಮ್ಮುಖದಲ್ಲಿ ನೂತನವಾಗಿ ಕಾಂಗ್ರೆಸ್ ಪಕ್ಷವನ್ನು ಸೇರಿರುವ ಪ್ರಮುಖರು. ಈ ಸಂದರ್ಭದಲ್ಲಿ ಬಿ. ಎಲ್. ಶಂಕರ್, ಸಲೀಮ್ ಅಹ್ಮದ್ ಮುಂತಾದ ನಾಯಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *