”ಕಾರ್ತೀಕ ಸಂಗೀತ ಸಂಭ್ರಮ” ಹಾಗೂ “ಶ್ರೀ ಕನಕದಾಸರ ಜಯಂತಿ”
ನಾದಜ್ಯೋತಿ ಸಂಗೀತ ಸಭಾ ಟ್ರಸ್ಟ್ ವತಿಯಿಂದ ಮಲ್ಲೇಶ್ವರಂ ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ ಶ್ರೀ ರಾಮ ಮಂದಿರದಲ್ಲಿ ನವೆಂಬರ್ 17 ರಿಂದ 19ರ ವರೆಗೆ “ಕಾರ್ತೀಕ ಸಂಗೀತ ಸಂಭ್ರಮ”, “ಶ್ರೀ ಕನಕದಾಸರ ಜಯಂತಿ”, “ಕನ್ನಡ ರಾಜ್ಯೋತ್ಸವ” ಹಾಗೂ “ಹರಿದಾಸ ಸಂಭ್ರಮ” ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು, ಅವುಗಳ ವಿವರಗಳು ಈ ರೀತಿ ಇವೆ :


ನವೆಂಬರ್ 17, ಶುಕ್ರವಾರ ಸಂಜೆ 6ಕ್ಕೆ ಕಾರ್ಯಕ್ರಮದ ಉದ್ಘಾಟನೆ. ನಂತರ ಶ್ರೀ ಯಶಸ್ವಿ ಸುಬ್ಬರಾವ್ ಮತ್ತು ಶ್ರೀ ಎಸ್. ಮೋಕ್ಷತ್ ಇವರಿಂದ “ದ್ವಂದ್ವ ಪಿಟೀಲು ವಾದನ”. ಶ್ರೀ ಎಸ್.ವಿ. ಪ್ರಸಾದ್ (ಮೃದಂಗ), ಶ್ರೀ ವಿ. ಸೋಮಶೇಖರ್ (ಫಟ) .
ನವೆಂಬರ್ 18, ಶನಿವಾರ ಸಂಜೆ 6-00 ಗಂಟೆಗೆ : ಶ್ರೀಮತಿ ಅಂಜಲಿ ಶ್ರೀರಾಮ್ (ಗಾಯನ), ಶ್ರೀ ಎಂ.ವಿ. ಅರ್ಜುನ್ (ಪಿಟೀಲು), ಶ್ರೀ ರಘು ಭಾಗವತ್ (ಮೃದಂಗ), ಶ್ರೀ ತಿರುಮಲೆ ಗೋಪಿ ಶ್ರವಣ್ (ಮೋರ್ಚಿಂಗ್).
ನವೆಂಬರ್ 19, ಭಾನುವಾರ ಸಂಜೆ 5-00 ಗಂಟೆಗೆ : ಹರಿದಾಸ ರೂಪಕ – “ಹರಿದಾಸರು ಕಂಡ ಶ್ರೀಕೃಷ್ಣ”. ನಿರೂಪಣೆ : ಮ||ಶಾ||ಸಂ|| ಶ್ರೀ ಕಲ್ಲಾಪುರ ಪವಮಾನಾಚಾರ್, ಡಾ|| ಶೇಷ ಪ್ರಸಾದ್ (ಗಾಯನ), ಶ್ರೀ ಹೊಸಹಳ್ಳಿ ವಿ. ರಘುರಾಮ್ (ಪಿಟೀಲು), ಶ್ರೀ ಪವನ್ ಮಾಧವ್ ಮಸೂರ್ (ಮೃದಂಗ). 7-00 ಗಂಟೆಗೆ : “ಶ್ರೀ ನವರತ್ನ ಮಾಲಿಕಾ ಗೋಷ್ಠಿ ಗಾಯನ” ವಿ||ಅರ್ಚನಾ ಭೋಜ್ ಮತ್ತು ವೃಂದ, ಶ್ರೀ ಡಿ.ಆರ್. ರಾಘವೇಂದ್ರ (ಪಿಟೀಲು),
ಡಾ|| ಮುನಿಕೋಟಿ ಶಿವಶಂಕರ್ (ಘಟ), ಶ್ರೀ ಅನಿರುದ್ಧ ವಾಸುದೇವ್ (ಮೃದಂಗ). ನಂತರ ಸಮಾರೋಪ ಸಮಾರಂಭ. ಈ ಎಲ್ಲಾ ಕಾರ್ಯಕ್ರಮಗಳಲ್ಲೂ ಸಂಗೀತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಈ ವಿಶೇಷ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಟ್ರಸ್ಟಿನ ಪದಾಧಿಕಾರಿಗಳು ವಿನಂತಿಸಿದ್ದಾರೆ.