BBMP : ಪ್ಲಾಸ್ಟಿಕ್ ಬಿಂದಿಗೆಗಳೊಂದಿಗೆ ನೀರಿಗಾಗಿ ಆಗ್ರಹಿಸಿ ಹೆರೋಹಳ್ಳಿ ವಾರ್ಡ್ ಮಹಿಳೆಯರಿಂದ ಪ್ರತಿಭಟನೆ Protest

ವಾರ್ತಾಜಾಲ
By -
0

ಬಿಬಿಎಂಪಿ ಹೇರೋಹಳ್ಳಿ ವಾರ್ಡ್ ನಂ.72ರ ಮಾಜಿ ಕಾರ್ಪೊರೇಟರ್ ಎ.ಎಂ.ಹನುಮಂತೇಗೌಡ ಅವರ ನೇತೃತ್ವದಲ್ಲಿ,ಪಾಲಿಕೆಯ ಕೇಂದ್ರ ಕಛೇರಿಗಿ ಖಾಲಿ ಕೊಡಗಳೊಂದಿಗೆ 100ಕ್ಕೂ ಹೆಚ್ಚು ಮಹಿಳೆಯರು ಸೋಮವಾರ ಆಗಮಿಸಿದ್ದರು. ಕಾರ್ಮಿಕ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಈ ವಾರ್ಡ್ ವ್ಯಾಪ್ತಿಯ ಕೆಂಪೇಗೌಡನಗರದಲ್ಲಿ  ನೀರಿನ ಕೊರತೆ ಸಮಸ್ಯೆ ಎದುರಾಗಿ ಆರು ತಿಂಗಳುಗಳೇ ಕಳೆದಿವೆ. ಕುಡಿಯುವ ನೀರಿನ ಮೂಲಭೂತ ಅಗತ್ಯತೆಗಳನ್ನು ಒದಗಿಸಲು ವ್ಯವಸ್ಥೆ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅಂದಿನಿಂದಲು ಮನವಿ ಮಾಡುತ್ತಿದ್ದರೂ ಸಹ...  ಈ ನೀರಿನ ವಿಚಾರದಲ್ಲಿ ಕಳೆದ ಆರು ತಿಂಗಳಿಂದ ದಿನೇ ದಿನೇ ಹೆಚ್ಚಾಗುತ್ತಿರುವ ಸಮಸ್ಯೆಗೆ ಪರಿಹಾರವನ್ನು ಒದಗಿಸಿಲ್ಲ. ಈಗ ಅದು ಮೂರು ಪಟ್ಟು ಹೆಚ್ಚಾಗಿದ್ದು, ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಬಿಬಿಎಂಪಿ ಕೇಂದ್ರಕ್ಕೆ ಡಿಸಿಎಂ ಡಿ. ಕೆ. ಶಿವಕುಮಾರ್ ಆಗಮಿಸುತ್ತಿರುವ ಬಗ್ಗೆ ತಿಳಿದು, ಹೇರೋಹಳ್ಳಿ ಮತ್ತು ಸುತ್ತಮುತ್ತಲಿನ ಭಾಗದ ಜನರು ಡಿಸಿಎಂ  ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಅವರ ಮೂಲಕವೇ ಪರಿಹಾರ ಕಂಡುಕೊಳ್ಳಲೇ ಬೇಕು, 

ಇದೊಂದೇ ಅವರಿಗುಳಿದಿರುವ ಏಕೈಕ ಮಾರ್ಗವಾಗಿದೆ ಎಂದು ಪ್ರತಿಭಟನಾಕಾರರು ಹೇಳಿದರು. ಶ್ರೀಮತಿ. ಚಂದ್ರಕಲಾ ಎನ್., ಶ್ರೀಮತಿ ಜಾಹ್ನವಿ ಎಚ್., ಶ್ರೀಮತಿ. ಜಯಪ್ರಭಾ, ಶ್ರೀಮತಿ. ಸವಿತಾ, ಶ್ರೀಮತಿ. ಶಿಲ್ಪಾ ಮತ್ತು ಇತರ ಅನೇಕ ಸ್ಥಳೀಯರು ಪ್ರತಿಭಟನೆಯಲ್ಲಿ ಭಾಗವಹಿಸಲು ಮತ್ತು ನೀರು ಪೂರೈಕೆಗಾಗಿ ಒತ್ತಾಯಿಸಲು ಎಲ್ಲರೂ ಸ್ವಯಂಪ್ರೇರಿತರಾಗಿ ಕೇಂದ್ರ ಕಛೇರಿಗಿ ಖಾಲಿ ಕೊಡಗಳೊಂದಿಗೆ ಬಂದಿದ್ದರು.

Post a Comment

0Comments

Post a Comment (0)