ಬೆಂಗಳೂರು :- ಇಂದಿನ ಯುವಕರು , ವಿದ್ಯಾರ್ಥಿಗಳಲ್ಲಿ ಸಂಸ್ಕೃತಿ, ಸಂಸ್ಕಾರ, ಹಿರಿಯರ ಸಂಪ್ರದಾಯ ಮುಂದುವರೆಸಿಕೊಂಡು ಹೋಗಲು ಮನೆಯ ಹಿರಿಯರು ಹೆಚ್ಚು ಜವಾಬ್ದಾರಿ ಹೊರಬೇಕಿದೆ ಎಂದು ಸಾಹಿತಿ, ಪ್ರಾಧ್ಯಾಪಕ ಡಾ.ಸಿಸಿರಾ ಅಭಿಪ್ರಾಯಪಟ್ಟರು. ಅವರು ಕೆಂಗೇರಿಯ ಶೇಷಾದ್ರಿಪುರಂ ಅಕಾಡೆಮಿ ಆಫ್ ಬ್ಯುಸಿನೆಸ್ ಸ್ಟಡೀಸ್ ಪದವಿ ಕಾಲೇಜಿನವರು ಕುಂಬಳಗೋಡು ಸಮೀಪದ
ಚಿನ್ನು ಕುರ್ಚಿ ಗ್ರಾಮದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ " ಸಮಾಜ ಬದಲಾವಣೆಯಲ್ಲಿ ಯುವಜನಾಂಗದ ಪಾತ್ರ " ವಿಶೇಷ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು. ಹೊಸ ತಲೆಮಾರಿನ ಯುವಕರು ಅನೇಕ ದುಶ್ಚಟಗಳಿಗೆ ಬಲಿಯಾಗದೆ ಸಮಾಜದ ಮುಖ್ಯವಾಹಿನಿಗೆ ಬಂದು ವಿದ್ಯಾವಂತರಾಗಿ, ಸತ್ಕಾರ್ಯಗಳಿಗೆ ಪಾತ್ರರಾಗಿ ಜೀವನ ಸಾರ್ಥಕ ಪಡಿಸಿಕೊಳ್ಳಬೇಕು ಎಂದರು. ಯುವಕರು ದಾರಿ ತಪ್ಪದಂತೆ ಎಚ್ಚರಿಕೆ ವಹಿಸಬೇಕು.
ಮೊಬೈಲ್,ವಾಟ್ಸಪ್, ಫೇಸ್ ಬುಕ್, ಇನ್ಸ್ಟಾಗ್ರಾಂ ಗಳಲ್ಲಿ ಸಮಯ ಕಾಲಹರಣ ಮಾಡುವ ಮೂಲಕ ವ್ಯರ್ಥ ಮಾಡಿಕೊಂಡು ಬದುಕನ್ನು ನಾಶಮಾಡಿಕೊಳ್ಳುತ್ತಿದ್ದು ಸಮಯ ಸಂದರ್ಭ ನೋಡಿಕೊಂಡು ಅವರನ್ನು ಸರಿದಾರಿಗೆ ತರಲು ಪ್ರಯತ್ನಿಸಬೇಕಿದೆ ಎಂದು ಅನೇಕ ಹಾಡು ಹಾಸ್ಯಗಳ ಮುಖೇನ ಡಾ.ಸಿಸಿರಾ ವಿವರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿ ಪ್ರೊ.ಬಿಂದು ಎಸ್. ಅವರು ಸಮಸಮಾಜ ನಿರ್ಮಾಣ ಆಗಲು ಯುವಕರು ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಕಲ್ಪನೆ ದೇಶದ ಸ್ವಾವಲಂಬನೆಯ ಅಭಿವೃದ್ಧಿಗೆ ಕೊಂಕಣಿ ಬದ್ಧರಾಗಬೇಕೆಂದರು. ವಾಣಿಜ್ಯ ಶಾಸ್ತ್ರ ಪ್ರಾಧ್ಯಾಪಕ ಪ್ರೊ. ಶಿವಾನಂದ ಬಂಡೆ ವೇದಿಕೆಯಲ್ಲಿ ಇದ್ದರು.
ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಚಿನ್ನು ಕುರ್ಚಿ ಗ್ರಾಮಸ್ಥರು, ವಿದ್ಯಾರ್ಥಿಗಳಿಗೆ ಮನರಂಜನೆ ನೀಡಿದರು. ಕೆ.ಮಧು, ಕು.ರೇವತಿ.ಎಂ.ಕು.ಶೇಖ್ ಪೈಸ್ ಅಲಿ ವಿದ್ಯಾರ್ಥಿಗಳು ವೇದಿಕೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.