"ರನ್ ಫಾರ್ ಆಪ್ಪು " ಮ್ಯಾರಥಾನ್ ಕಾರ್ಯಕ್ರಮ

ವಾರ್ತಾಜಾಲ
By -
0

ತಾರೀಕು 10.03.2024 ಭಾನುವಾರದಂದು ಡಾಕ್ಟರ್ ಪುನೀತ್ ರಾಜಕುಮಾರ್ ಹುಟ್ಟುಹಬ್ಬದ ಸ್ಮರಣಾರ್ಥವಾಗಿ ಮ್ಯಾರಥಾನ್ 5 ಕಿಲೋಮೀಟರ್ ಓಟ , ಮಕ್ಕಳಿಗೆ 2 ಕಿಲೋಮೀಟರ್ ಓಟ ಕಾರ್ಯಕ್ರಮ ಕೊಡುಗೇಹಳ್ಳಿ ಗೇಟ್ ಬಳಿ  ಶ್ರೀ ಗುಂಡಾoಜಿನೇಯ ಸ್ವಾಮಿ ದೇವಸ್ಥಾನ ಸಹಕಾರನಗರದಲ್ಲಿ ಏರ್ಪಡಿಸಲಾಗಿದೆ. ಕಾರ್ಯಕ್ರಮದ ಉದ್ದೇಶ ಆರೋಗ್ಯ ಹಾಗೂ ಸಹಾಯ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಬಗ್ಗೆ  ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 7:00 ಘಂಟೆಗೆ ಕಾರ್ಯಕ್ರಮ ಪ್ರಾರಂಭವಾಗಲಿದೆ. ಸುಮಾರು 1000 ವಿದ್ಯಾರ್ಥಿಗಳು ಹಾಗೂ 1000 ಸ್ಥಳೀಯರು  ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ಮ್ಯಾರಥನ ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಅಪ್ಪು ಅಭಿಮಾನಿಗಳು ಹಾಗೂ ಸಾರ್ವಜನಿಕರು ಸೇರಲಿದ್ದಾರೆ. 

ನಂತರದ ಕಾರ್ಯಕ್ರಮದಲ್ಲಿ ಅನಾಥ ಮಕ್ಕಳಿಗೆ ಹಾಗೂ ವೃದ್ಧಾಶ್ರಮಗಳಿಗೆ ಹಾಗೂ ಅಂಗವಿಕಲ ಆಶ್ರಮಗಳಿಗೆ ತಲಾ 100 ಕೆಜಿ ಅಕ್ಕಿ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.  ನಮ್ಮ ಕರ್ನಾಟಕ ರಾಜ್ಯ ಕಂದಾಯ ಸಚಿವರಾದ ಶ್ರೀ ಕೃಷ್ಣ ಬೈರೇಗೌಡರು ಹಾಗೂ "ಇಂದು ಸಂಜೆ" ವ್ಯವಸ್ಥಾಪಕ ಸಂಸ್ಥಾಪಕರಾದ ಶ್ರೀಮತಿ ಪದ್ಮ ನಾಗರಾಜ್ ರವರು ಹಾಗೂ ನಮ್ಮ ಸುವರ್ಣ ಕರ್ನಾಟಕ ವೃತ್ತಿ ನಿರತ ಪತ್ರಕರ್ತರ  ಸಂಘಟನೆಯ ಗೌರವ ಅಧ್ಯಕ್ಷರಾದ ಜಿ ರಾಮಾಚಾರ್ ರವರು   ಅಧ್ಯಕ್ಷರಾದ ಗೋಪಾಲ್ ರವರು  ಹಾಗೂ ಹಾಗೂ ಹಿರಿಯ ಪತ್ರಕರ್ತರಾದ ವೆಂಕಟ ನಾರಾಯಣ , ಕುವೆಂಪುನಗರ ಬ್ಲಾಕ್ ಅಧ್ಯಕ್ಷರಾದ ಶ್ರೀನಿವಾಸಯ್ಯ ಹಾಗೂ ಉಪಾಧ್ಯಕ್ಷರಾದ ಮಂಜುನಾಥ್ ರವರು ಕಾರ್ಯಕ್ರಮದ ಚಾಲನೆಯನ್ನು ಮಾಡಲಿದ್ದಾರೆ.  




ಸುವರ್ಣ ಕರ್ನಾಟಕ ವೃತ್ತಿ ನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಮೌರ್ಯ ಪೂಜಾರಿ,   ಖಚಾಂಚಿಯಾದ ಉಮೇಶ್ ,    ಉಪಾಧ್ಯಕ್ಷರಾದ ಜನರಕ್ಷಕ ನಾಗರಾಜ್,  ಶಾಂತ ಹನುಮಾನ್ ಟಿ.ಕೆ,ಗಿರಿಜಾ ದಯಾನಂದ್ ಮತ್ತು ಎಲ್ಲಾ ಪದಾಧಿಕಾರಿಗಳು ಹಾಗೂ ಮಾದ್ಯಮ ಸಲಹೆಗಾರರಾದ  ಸಚಿವ ಶ್ರೀಧರ್ ,ವಿಜಯ್ ಪತ್ತಾರ್ , ಬಿ.ಕೆ. ಪ್ರಸನ್ನ, ಕರ್ನಾಟಕ ರಾಜ್ಯ ವೃತ್ತಿ ನಿರತ ಪತ್ರಕರ್ತರ ಸಂಘಟನೆಯ ರಾಜ್ಯ ಅಧ್ಯಕ್ಷರಾದ ಶಿವ ಪ್ರಸಾದ್ ಗೌಡ,  ವಕೀಲರಾದ ಚಲಪತಿ ರವರು, ಖಾದರ್, ಶಿವು, ರಾಜು, ಹಾಗೂ  ಕ್ಷೇತ್ರದ ಸಮಸ್ತ ಸಾರ್ವಜನಿಕರು, ಸರ್ವರೂ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಚಾಲನೆ ಕೊಡಬೇಕಾಗಿ  ವಿನಂತಿಸುತ್ತೇನೆ. 

ಅನಾಥ ಮಕ್ಕಳಿಗೆ ಸಹಾಯವಾಗುವ ಸಲುವಾಗಿ  ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದರಿಂದ ನಮ್ಮ ಸಂಘಟನೆಯ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ದಯಮಾಡಿ ಭಾಗವಹಿಸಿ  ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ.  ಮಿತ್ರರು ಯಾರಾದರೂ  ಅನಾಥ ಆಶ್ರಮಗಳಿಗೆ ತಲಾ ನೂರು ಕೆಜಿ ಅಕ್ಕಿ ವಿತರಣೆ ಮಾಡ ಬಯಸುವವರು ಹಾಗೂ  ಕಾರ್ಯಕ್ರಮಕ್ಕೆ ಬೇಕಾದ ಅಥವಾ ಮಕ್ಕಳಿಗೆ ದಾನ ಕೊಡಲು ಬಯಸುವ  ದಾನಿಗಳು   ಸಂಪರ್ಕಿಸಬಹುದು. 9741910068.

ತಾರೀಖು : 10.03.2024 - ಭಾನುವಾರ
ಸ್ಥಳ : ಗುಂಡಾoಜನೆಯ ಸ್ವಾಮಿ ದೇವಸ್ಥಾನ, ಕೊಡಿಗೇಹಳ್ಳಿ ಗೇಟ್, ಸಹಕಾರನಗರ.
ಸಮಯ :  ಬೆಳಿಗ್ಗೆ 7-00 ಘಂಟೆ 


Post a Comment

0Comments

Post a Comment (0)