ಕ್ರೈಸ್ತ ಸಮುದಾಯಕ್ಕೆ 28ಲೋಕಸಭಾ ಕ್ಷೇತ್ರದಲ್ಲಿ ಒಂದು ಸ್ಥಾನ ಸಹ ನೀಡಿಲ್ಲ

ವಾರ್ತಾಜಾಲ
By -
0

 ಬೆಂಗಳೂರು: ಕಾಂಗ್ರೆಸ್ ಪಕ್ಷ ನುಡಿದಂತೆ ಕ್ರೈಸ್ತ ಸಮುದಾಯದ ಎ.ಬರ್ತಲೋಮ್ ರವರಿಗೆ ವಿಧಾನಪರಿಷತ್ ಗೆ ಆಯ್ಕೆ ಮಾಡಬೇಕು*

ರಾಜ್ಯದಲ್ಲಿ ಕ್ರಿಶ್ಚಿಯನ್ ಸಮುದಾಯ 40ರಿಂದ 50ಲಕ್ಷ ಜನಸಂಖ್ಯೆ ಇದೆ .ರಾಜಕೀಯವಾಗಿ ಹೆಚ್ಚಿನ ಅವಕಾಶ ಲಭಿಸದೇ ಇರವುದು ಅಸಮಾಧಾನದಲ್ಲಿ ಇದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಬರಲು ಕ್ರೈಸ್ತ ಸಮುದಾಯದ ನಿರ್ಣಯಕ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಬಿದ್ದ ಕಾರಣದಿಂದ ಅಧಿಕಾರಕ್ಕೆ ಬರಲು ಸಾಧ್ಯವಾಗಿದೆ.

ಲೋಕಸಭಾ ಚುನಾವಣೆ ಕ್ರೈಸ್ತ ಸಮುದಾಯದ ನಾಯಕ, ಕನ್ನಡಿಗರಾದ ಎ.ಬರ್ತಲೋಮ್ ರವರು ಕಾಂಗ್ರೆಸ್ ಪಕ್ಷದಿಂದ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಆಕಾಂಕ್ಷಿಯಾಗಿದ್ದರು, ನಾಮಪತ್ರ ಸಹ ಸಲ್ಲಿಸಿದ್ದರು.

ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು, ಕೆಪಿಸಿಸಿ ಅಧ್ಯಕ್ಷರು, ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರು ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿಖಾನ್ ರವರು ಕಾಂಗ್ರೆಸ್ ಅಭ್ಯರ್ಥಿ ಎ.ಬರ್ತಲೋಮ್ ರವರನ್ನು ಮನ ಒಲಿಸಿ, ಕಾಂಗ್ರೆಸ್ ಪಕ್ಷದ ಬಂಡಾಯ ಅಭ್ಯರ್ಥಿಯಾಗಿ ನಿಲ್ಲಬೇಡಿ ಮತಗಳು ವಿಭಜನೆಯಾದರೆ ಕಾಂಗ್ರೆಸ್ ಪಕ್ಷ ಸೋಲುವ ಸಾಧ್ಯತೆ ಇದೆ ನಾಮಪತ್ರ ಹಿಂತೆಗೆದುಕೊಳ್ಳಿ ನಂತರ  ವಿಧಾನಪರಿಷತ್ ನೇಮಕಾತಿ ತಮಗೆ ಅವಕಾಶ ನೀಡುತ್ತೇವೆ ಎಂದು ಭರವಸೆ ನೀಡಿದರು.

ನಾಯಕರುಗಳ ಮಾತಿಗೆ ಮಣಿದು ಎ.ಬರ್ತಲೋಮ್ ರವರು ನಾಮಪತ್ರ ವಾಪಸ್ಸು ಪಡೆದರು.

ಕೇಂದ್ರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಅಭ್ಯರ್ಥಿ ಮನ್ಸೂರ್ ಅಲಿಖಾನ್ ಪರ ಚುನಾವಣೆ ಪ್ರಚಾರ ಮಾಡಿದರು.

ಕಾಂಗ್ರೆಸ್ ಕೊಟ್ಟ ಮಾತು ತಪ್ಪಬಾರದು ನುಡಿದಂತೆ ಕ್ರೈಸ್ತ ಸಮುದಾಯದ ಎ.ಬರ್ತಲೋಮ್ ರವರಿಗೆ ವಿಧಾನಪರಿಷತ್ ಆಯ್ಕೆ ಮಾಡಬೇಕು.

ಕಾಂಗ್ರೆಸ್ ಪಕ್ಷ ಮಾತು ತಪ್ಪಿದರೆ ರಾಜ್ಯದಲ್ಲಿ ಕ್ರೈಸ್ತ ಸಮುದಾಯದ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಹೆಚ್ಚು.

ಕ್ರೈಸ್ತ ಸಮುದಾಯಕ್ಕೆ 28ಲೋಕಸಭಾ ಕ್ಷೇತ್ರದಲ್ಲಿ ಒಂದು ಸ್ಥಾನ ಸಹ ನೀಡಿಲ್ಲ ಇದರಿಂದ ಬೇಸರದಲ್ಲಿ ಇದ್ದಾರೆ, ವಿಧಾನಪರಿಷತ್ ನಲ್ಲಿ ಕ್ರೈಸ್ತ ಸಮುದಾಯಕ್ಕೆ ಸ್ಥಾನ ನೀಡಿ ನೋವು ಶಮನ ಮಾಡುವುದೇ ಎಂದು ಕಾದು ನೋಡಬೇಕು.

Post a Comment

0Comments

Post a Comment (0)